ಬಳ್ಳಾರಿಯಲ್ಲಿ ರಶ್ಮಿಕಾ ಮಂದಣ್ಣ -ವಿಜಯ್ ಜೋಡಿ !

ಚಿತ್ರರಂಗವು ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಯಶಸ್ವಿ ಕಾಣಲು ಪ್ರಯತ್ನಿಸುತ್ತಲೇ ಇದೆ. ಜನರು ಕೂಡ ವಿಭಿನ್ನ ಸಿನಿಮಾಗಳಿಗೆ ಮಾರು ಹೋಗದೆ ಇರಲ್ಲ. ಅಲ್ಲದೆ ಚಿತ್ರರಂಗದ ಹವಾ ಇತ್ತೀಚಿಗೆ ಜೋರಾಗಿದೆ. ಹೊಸ ಹೊಸ ಕಥೆಗಳೊಂದಿಗೆ ಹೊಸ ಹೊಸ ನಾಯಕ ನಾಯಕಿಯರು ಚಿತ್ರರಂಗದಲ್ಲಿ ಅದ್ಭುತ ಸಾಧನೆ ಮಾಡುವುದು ಈಗಾಗಲೇ ನಾವು ನೋಡಿರಬಹುದು.

ವಿಶೇಷ ಎಂದರೆ ವಿಜಯ್ ಮತ್ತು ರಶ್ಮಿಕಾ ದೇವರಕೊಂಡ ‘ವಾರಿಸು’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಇದೆ. ಇದೇ ಮೊದಲ ಬಾರಿಗೆ ವಿಜಯ್ ಜೊತೆ ರಶ್ಮಿಕಾ ತೆರೆ ಹಂಚಿಕೊಂಡಿದ್ದಾರೆ. ಈ ಸಿನಿಮಾದ ಹಾಡೊಂದರ ಚಿತ್ರೀಕರಣ ಬಳ್ಳಾರಿಯಲ್ಲಿ ನಡೆಯಲಿದೆ. ಅದಕ್ಕಾಗಿ ಅವರು ಬಳ್ಳಾರಿಗೆ ಆಗಮಿಸುತ್ತಿದ್ದಾರೆ.

ಬಳ್ಳಾರಿಯಲ್ಲಿ ನಡೆಯುವ ಹಾಡಿನ ನೃತ್ಯ ಸಂಯೋಜನೆಯನ್ನು ಜಾನಿ ಮಾಸ್ಟರ್ ಮಾಡುತ್ತಿದ್ದು, ಈಗಾಗಲೇ ಬಳ್ಳಾರಿ ಸುತ್ತಮುತ್ತ ಲೋಕೇಶನ್ ಕೂಡ ನೋಡಿಕೊಂಡು ಹೋಗಿದ್ದಾರೆ.

ಹೌದು ತಮಿಳಿನ ಸೂಪರ್ ಸ್ಟಾರ್ ವಿಜಯ್ ಮತ್ತು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸದ್ಯದಲ್ಲೇ ಬಳ್ಳಾರಿಗೆ ಆಗಮಿಸಲಿದ್ದಾರೆ. ಇದೇ ಮೊದಲ ಬಾರಿಗೆ ಈ ಜೋಡಿ ಸಿನಿಮಾದಲ್ಲಿ ನಟಿಸುತ್ತಿರುವುದರಿಂದ ಮತ್ತು ಒಟ್ಟಾಗಿ ಕರ್ನಾಟಕಕ್ಕೆ ಬರುತ್ತಿರುವುದರಿಂದ ರಶ್ಮಿಕಾ ಅಭಿಮಾನಿಗಳಿಗೆ ಸಹಜವಾಗಿಯೇ ಸಂಭ್ರಮ ತಂದಿದೆ.

ಚಿಕ್ಕಂದಿನಿಂದಲೂ ವಿಜಯ್ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದವರು ರಶ್ಮಿಕಾ. ಅವರೊಂದಿಗೆ ನಟಿಸಬೇಕು ಎಂದು ಕನಸು ಸಹ ಕಂಡವರು. ವಾರಿಸು ಮೂಲಕ ಕನಸು ನನಸಾಗಿದೆ. ವಂಶಿ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಬಹುತೇಕ ಭಾಗದ ಚಿತ್ರೀಕರಣ ಮುಗಿದಿದೆ. ಹಾಡುಗಳ ಚಿತ್ರೀಕರಣವಷ್ಟೇ ಬಾಕಿ ಉಳಿದಿದ್ದು ಮತ್ತು ಆ ಹಾಡುಗಳಲ್ಲಿ ಒಂದನ್ನು ಕರ್ನಾಟಕದಲ್ಲಿ ಶೂಟ್ ಮಾಡಲಾಗುತ್ತಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ಸದ್ಯ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ಜೋಡಿ ಬಳ್ಳಾರಿಗೆ ಬರುತ್ತಿರುವುದು ಯಾಕೆ ಎನ್ನುವುದನ್ನು ಸ್ವತಃ ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ಬಹಿರಂಗ ಪಡಿಸಿದ್ದಾರೆ. ಅಲ್ಲದೆ ಕೆಲವೇ ದಿನಗಳಲ್ಲಿ ವಾರಿಸು ಸಿನಿಮಾದ ಬ್ಯುಟಿಫುಲ್ ಗೀತೆಯೊಂದು ಬಳ್ಳಾರಿ ನೆಲದಲ್ಲಿ ಚಿತ್ರೀಕರಣಗೊಳ್ಳಲಿದೆ. ಸದ್ಯದಲ್ಲೇ ಈ ಹಾಡಿನ ಶೂಟಿಂಗ್ ನಡೆಸುತ್ತೇವೆ ಎಂದು ಖುಷಿ ವ್ಯಕ್ತ ಪಡಿಸಿದ್ದಾರೆ.

Leave A Reply