Facebook Tips: ಫೇಸ್ಬುಕ್ ನ ಈ ವಿಷಯ ತಿಳಿದುಕೊಂಡರೆ ಹ್ಯಾಕ್ ಆಗೋದರಿಂದ ತಪ್ಪಿಸಿಕೊಳ್ಳಬಹುದು
ಫೇಸ್ಬುಕ್ ನಿಂದ ಕೆಡುಕು ಮಾತ್ರವಲ್ಲದೆ ಒಳಿತು ಕೂಡ ಇದೆ. ಇದು ಎಲ್ಲಾ ತರಹದ ಉಪಯುಕ್ತ ಮಾಹಿತಿಯ ಪ್ಲಾಟ್ಫಾರ್ಮ್ ಕೂಡ ಆಗಿದೆ. ಇನ್ನು ಫೇಸ್ಬುಕ್ ಸೇಫ್ ಅಲ್ಲ, ಫೇಸ್ಬುಕ್ ಹ್ಯಾಕ್ ಆಗುತ್ತದೆ ಎನ್ನುವವರಿಗೆ ಅದನ್ನು ಸುರಕ್ಷಿತವಾಗಿಡಲು, ನಿಮ್ಮ ಡೇಟಾವನ್ನು ಸುರಕ್ಷಿತವಾಗಿರಿಸಲು ಫೇಸ್ಬುಕ್ ನ ಈ ವಿಷಯ ತಿಳಿದುಕೊಂಡರೆ ಹ್ಯಾಕ್ ಆಗೋದರಿಂದ ತಪ್ಪಿಸಿಕೊಳ್ಳಬಹುದಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಫೇಸ್ಬುಕ್ ಕೂಡ ಪ್ರಮುಖವಾದದ್ದು. ಇದೀಗ ಫೇಸ್ಬುಕ್ ಅಗಾಧವಾಗಿ ಬೆಳೆದು 18 ವರ್ಷಗಳನ್ನು ಪೂರೈಸುವ ಹಂತದಲ್ಲಿದೆ. ಇನ್ನೂ ಈ ಫೇಸ್ಬುಕ್ 30 ಕೋಟಿಗೂ ಅಧಿಕ ಮಾಸಿಕ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಇದೀಗ ಫೇಸ್ಬುಕ್ ನ ಮೆಟಾ ಸಂಸ್ಥೆಯು ತನ್ನ ಅಪ್ಡೇಟ್ ಅನ್ನು ನೀಡುತ್ತಲೇ ಇರುತ್ತದೆ.
ಸದ್ಯ ಫೇಸ್‌ಬುಕ್‌ನಲ್ಲಿ ಆಗಿರುವ ಬದಲಾವಣೆಯ ಬಗ್ಗೆ ನೋಡೋಣ.
ಇದೀಗ ಫೇಸ್ಬುಕ್ ನಲ್ಲಿ ನಿಮ್ಮ ಪೋಸ್ಟ್‌ಗಳನ್ನು ಯಾರು ನೋಡಬಹುದು ಮತ್ತು ಯಾರು ನೋಡಬಾರದು ಎಂಬುದನ್ನು ನಿಯಂತ್ರಿಸುವ ಆಯ್ಕೆಯು ಲಭ್ಯವಿದೆ. ನಿಮ್ಮ ಪೋಸ್ಟ್‌ಗಳನ್ನು ನಿಮ್ಮ ಸ್ನೇಹಿತರಿಗೆ ಮಾತ್ರ ಕಾಣುವಂತೆ ಮಾಡಲು ನೀವು ಆಯ್ಕೆಯನ್ನು ಮಾಡಬಹುದಾಗಿದೆ. ಅಥವಾ ನಿಮ್ಮ ಖಾತೆಯಲ್ಲಿ ನಿಮ್ಮ ಸ್ನೇಹಿತರ ಪಟ್ಟಿಯಲ್ಲಿ ಇಲ್ಲದವರು ಸಹ ನಿಮ್ಮ ಪೋಸ್ಟ್‌ಗಳನ್ನು ನೋಡಲು ನಿಮಗೆ ಬೇಕಾದ ಹಾಗೆ ಆಯ್ಕೆಯನ್ನು ಮಾಡಿಕೊಳ್ಳಬಹುದು. ಇದಿಷ್ಟೇ ಅಲ್ಲದೆ, ನಿಮ್ಮ ಕೆಲವು ಸ್ನೇಹಿತರನ್ನು ಹೊರಗಿಡಲು ನೀವು ಕಸ್ಟಮ್ ಆಯ್ಕೆಯನ್ನು ಆರಿಸಿಕೊಳ್ಳಬಹುದಾಗಿದೆ.
ಇನ್ನೂ, ನೀವು ಫೇಸ್‌ಬುಕ್‌ನಲ್ಲಿ ಮಾಡುವ ಪೋಸ್ಟ್, ಕಾಮೆಂಟ್ ಸೇರಿದಂತೆ ನಿಮ್ಮ ಹಲವಾರು ಮಾಹಿತಿಗಳನ್ನು ಫೇಸ್‌ಬುಕ್ ಸೈಟ್‌ನಲ್ಲಿ ಇತರರು ನೋಡಬಹುದು. ಹಾಗಾಗಿ, ನಿಮ್ಮ ಪ್ರೊಫೈಲ್ ಅನ್ನು ಬೇರೆಯವರಿಗೆ ಕಾಣದಂತೆ ಮತ್ತು ನಿಮ್ಮ ಮಾಹಿತಿಯು ಪ್ರೈವೇಟ್ ನಲ್ಲಿರಬೇಕು ಎಂದು ನೀವು ಬಯಸಿದರೆ ಅದನ್ನು ಲಾಕ್ ಮಾಡಬಹುದು.
ಹಾಗೇ ಫ್ರೆಂಡ್ ರಿಕ್ವೆಸ್ಟ್ ಯಾರಿಂದ ಬಂದಿದೆ ಮತ್ತು ಫ್ರೆಂಡ್ ಲಿಸ್ಟ್‌ನಲ್ಲಿ ನೀವು ಯಾರನ್ನು ಸ್ವೀಕರಿಸಬೇಕು ಎಂಬ ಪ್ರಶ್ನೆಗಳಿರುತ್ತವೆ. ಈ ಎಲ್ಲಾ ಗೊಂದಲಗಳಿಗೆ ಪರಿಹಾರ ಸಿಕ್ಕಿದೆ ಅದೇನೆಂದರೆ, ನೀವು ನಿಮಗೆ ಪರಿಚಯವಿಲ್ಲದ ವ್ಯಕ್ತಿಗಳಿಂದ ಫ್ರೆಂಡ್ ರಿಕ್ವೆಸ್ಟ್ ಅನ್ನು ನಿರ್ಬಂಧಿಸಲು ಒಂದು ಆಯ್ಕೆ ಕೂಡ ಇದೆ.
ಇನ್ನೂ ನಿಮ್ಮ ಸ್ನೇಹಿತರ ಪಟ್ಟಿಯಲ್ಲಿ ಇರುವವರನ್ನು ಯಾರು ನೋಡಬಹುದು ಎಂಬುದನ್ನು ನೋಡುವ ಆಯ್ಕೆಯೂ ಇದೆ. ಅಷ್ಟೇ ಅಲ್ಲದೆ, ನಿಮ್ಮ ಇಮೇಲ್ ಮತ್ತು ಮೊಬೈಲ್ ಸಂಖ್ಯೆಯಿಂದ ನಿಮ್ಮನ್ನು ಹುಡುಕುವ ಆಯ್ಕೆಯನ್ನು ಕೂಡ ನೀವು ಬದಲಾಯಿಸಬಹುದಾಗಿದೆ. ನೀವು ಈ ಎಲ್ಲಾ ಆಯ್ಕೆಗಳನ್ನು ಪ್ರೈವೇಟ್ ಆಯ್ಕೆಯಲ್ಲಿ ಇರಿಸಿದರೆ ನಿಮ್ಮ ಖಾತೆ ಮತ್ತು ಡೇಟಾ ಸುರಕ್ಷಿತವಾಗಿರುತ್ತದೆ.
ನೀವು ಮೊಬೈಲ್ ಅಪ್ಲಿಕೇಶನ್‌ನಿಂದ ಅಥವಾ ಬ್ರೌಸರ್‌ನಿಂದ ನಿಮ್ಮ ಫೇಸ್ಬುಕ್ ಅಕೌಂಟ್ಗೆ ಲಾಗ್ ಇನ್ ಆದರೆ, ಸೆಟ್ಟಿಂಗ್‌ಗಳಿಗೆ ಹೋಗಿ ವಿವರಗಳನ್ನು ಪರಿಶೀಲಿಸಬಹುದು. ಇದಿಷ್ಟೇ ಅಲ್ಲದೆ, ನೀವು ಯಾವ ಸಮಯದಲ್ಲಿ ಮತ್ತು ಯಾವ ಸ್ಥಳದಲ್ಲಿ ಲಾಗ್ ಇನ್ ಆಗಿದ್ದೀರಿ ಎಂಬ ವಿವರಗಳನ್ನು ಸಹ ನೋಡಬಹುದು. ಒಂದು ವೇಳೆ ನೀವು ಬೇರೆಯವರ ಮೊಬೈಲ್ ಅಥವಾ ಲ್ಯಾಪ್‌ಟಾಪ್ ನಲ್ಲಿ ಲಾಗ್ ಇನ್ ಮಾಡಿ ಮತ್ತು ಲಾಗ್ ಔಟ್ ಮಾಡಲು ಮರೆತು ಹೋದರೆ ನಿಮ್ಮ ಮೊಬೈಲ್ ಅಪ್ಲಿಕೇಶನ್‌ನಿಂದಲೇ ನೀವು ಲಾಗ್ ಔಟ್ ಮಾಡಬಹುದಾಗಿದೆ.