ಪಂಪ್ ವೆಲ್ ಫ್ಲೈ ಓವರ್ ಬಳಿ ಬಾಂಬ್ ಸ್ಫೋಟಿಸಲು ಪ್ಲ್ಯಾನ್ | ಶಂಕಿತ ಉಗ್ರ ಶಾರೀಕ್ ನ ವಾಟ್ಸಪ್ ಡಿಪಿಯಲ್ಲಿ ಶಿವನ ಫೋಟೋ!

ಮಂಗಳೂರಿನ ಜನತೆಯನ್ನು ಬೆಚ್ಚಿಸಿದ ನಾಗೂರಿನ (Naguru, Mangaluru) ಬಳಿ ಆಟೋದಲ್ಲಿ ಸಂಭವಿಸಿದ (Auto Blast) ಕುಕ್ಕರ್ ಬಾಂಬ್ ಬ್ಲಾಸ್ಟ್ ನಿಗೂಢ ಸ್ಫೋಟದ ಹಿಂದೆ ಉಗ್ರರ ಕೈವಾಡ ಇರುವ ಅನುಮಾನ ದಟ್ಟವಾಗಿದ್ದು, ಉಗ್ರರ ಕೃತ್ಯದ ಕೈವಾಡದ ಶಂಕೆ ವ್ಯಕ್ತವಾಗಿದೆ.

ಶಂಕಿತ ಉಗ್ರ ಶಾರಿಕ್ ವಾಟ್ಸಪ್ ಡಿಪಿಯಲ್ಲಿ ಇಶಾ ಫೌಂಡೇಶನ್ ಶಿವನ ಫೋಟೋ ಇಟ್ಟುಕೊಂಡಿದ್ದ ಎಂದು ಮೊಬೈಲ್ ತರಬೇತಿ ಕೇಂದ್ರದ ಮಾಲೀಕ ಪ್ರಸಾದ್ ತಿಳಿಸಿದ್ದಾರೆ. ಈತನ ನಡುವಳಿಕೆಯಲ್ಲಿ ಮುಸ್ಲಿಂ ಎಂಬ ಸಣ್ಣ ಸುಳಿವು ಕೂಡ ಸಿಗದ ರೀತಿ ವರ್ತಿಸುತ್ತಿದ್ದ ಎನ್ನಲಾಗಿದೆ. ವೇಷ ಭೂಷಣ, ಬಟ್ಟೆ, ನಡೆಯಲ್ಲಿ ಮುಸ್ಲಿಂ ಎಂದು ಗೊತ್ತಾಗುತ್ತಿರಲಿಲ್ಲ ಎನ್ನಲಾಗಿದೆ.

ಮೈಸೂರಿನ ಕೆ.ಆರ್. ಮೊಹಲ್ಲಾದಲ್ಲಿ ಮೊಬೈಲ್ ತರಬೇತಿ ಕೇಂದ್ರದಲ್ಲಿ ಮೊಬೈಲ್ ರಿಪೇರಿ ಬಗ್ಗೆ ತರಬೇತಿ ಪಡೆಯಲು ಬಂದಿದ್ದ ಶಾರಿಕ್ ಧಾರವಾಡ ಶೈಲಿ ಕನ್ನಡದಲ್ಲಿ ಮಾತನಾಡುತ್ತಿದ್ದ ಎನ್ನಲಾಗಿದೆ. ಧಾರವಾಡದ ಪ್ರೇಮ್ ರಾಜ್ ಎಂಬ ಹೆಸರಿನಲ್ಲಿ ದಾಖಲೆ ನೀಡಿ ತರಬೇತಿ ಪಡೆಯುತ್ತಿದ್ದ ಎನ್ನಲಾಗಿದ್ದು, ಮೊಬೈಲ್ ರಿಪೇರಿ ಕಲಿಯಲು 10 ಮೊಬೈಲ್ ಖರೀದಿಸಿದ್ದ ಶಾರೀಕ್ ಪೂರ್ಣ ಪ್ರಮಾಣದಲ್ಲಿ ಮೊಬೈಲ್ ತರಬೇತಿ ಪಡೆದಿರಲಿಲ್ಲ ಜೊತೆಗೆ ಈ ಕೃತ್ಯ ಕಂಡು ನಿಜಕ್ಕೂ ಅಚ್ಚರಿಯಾಗಿದೆ ಎಂದು ಮೊಬೈಲ್ ಕೇಂದ್ರದ ಮಾಲೀಕರು ಮಾಹಿತಿ ನೀಡಿದ್ದಾರೆ.

ಈ ನಡುವೆ ಸೆರೆಸಿಕ್ಕ ಶಾರೀಕ್‌(Shariq) ಪಂಪ್‌ವೆಲ್‌ ಫ್ಲೈ ಓವರ್‌(Pumpwell Flyover) ಬಳಿ ಕುಕ್ಕರ್‌ ಬಾಂಬ್‌ ಇಡಲು ಪ್ಲ್ಯಾನ್‌ ಮಾಡಿದ್ದ ವಿಚಾರ ಪೊಲೀಸ್‌ ಮೂಲಗಳಿಂದ ತಿಳಿದು ಬಂದಿದೆ. ಅಲ್ಲದೆ, ಕೇರಳಕ್ಕೆ ಹೋಗುವ ವಾಹನಗಳ ಜೊತೆ ಹಾಸನ, ಕೊಡಗು, ಚಿಕ್ಕಮಗಳೂರು ಕಡೆಗೆ ಹೋಗುವ ವಾಹನಗಳು ಪಂಪ್‌ವೆಲ್‌ ಮೂಲಕವೇ ಸಾಗುತ್ತವೆ.

ವಾಹನಗಳ ಮಂಗಳೂರು ನಗರದ ಪ್ರವೇಶ ಮತ್ತು ನಿರ್ಗಮನ ಈ ರಸ್ತೆಯ ಮೂಲಕವೇ ಆಗುವುದರಿಂದ ಪಂಪ್‌ವೆಲ್‌ ಫ್ಲೈ ಓವರ್‌(Pumpwell Flyover) ಬಳಿ ಕುಕ್ಕರ್‌ ಬಾಂಬ್‌ ಇಡಲು ಸ್ಕೆಚ್ ಹಾಕಿದ್ದ ಎನ್ನಲಾಗಿದೆ.ಶನಿವಾರ ಸಂಜೆ 5 ಗಂಟೆಯ ವೇಳೆ ಮಂಗಳೂರಿನ(Mangaluru) ನಾಗುರಿ ಕಡೆ ಚಲಿಸುತ್ತಿದ್ದ ಆಟೋ ನಿಗೂಢ ಸ್ಫೋಟಗೊಂಡಿದ್ದು, ದಾರಿ ಮಧ್ಯೆ ಕುಕ್ಕರ್ ಹಿಡಿದುಕೊಂಡು ಆಟೋ ಹತ್ತಿದ್ದ ಶಾರೀಕ್‌ ನಾಗುರಿಗೆ ಹೋಗಲು ಚಾಲಕನಿಗೆ ಸೂಚಿಸಿದ್ದ ಎನ್ನಲಾಗಿದೆ. ಆದರೆ ಕೆಲವೇ ಕ್ಷಣಗಳಲ್ಲಿ ನಾಗುರಿಯ ಕಂಕನಾಡಿ ಪೊಲೀಸ್ (Police) ಠಾಣೆಯ ಎದುರು ಆಟೋದ ಒಳಗೆ ಸ್ಫೋಟಗೊಂಡಿದ್ದು ಶಾರೀಕ್‌ ಕೈಯಲ್ಲಿದ್ದ ಕುಕ್ಕರ್ ಛಿದ್ರಗೊಂಡಿದೆ.

ಮಂಗಳೂರಿಗೆ ಹಲವು ಬಾರಿ ಬಂದಿದ್ದ ಶಾರೀಕ್‌ ನಗರದಲ್ಲಿ ಎಲ್ಲಿ ಹೆಚ್ಚು ಜನರು ಸಂಚರಿಸುತ್ತಾರೆ ಎಂಬುದನ್ನು ತಿಳಿದಿದ್ದ ಎನ್ನಲಾಗಿದ್ದು, ಇಲ್ಲಿ ಯಾವುದೇ ಬಸ್‌ ಸ್ಟ್ಯಾಂಡ್‌ ಇರದೆ ಇರುವುದರಿಂದ, ಸಂಜೆಯ ವೇಳೆಗೆ ಜನ ಇಲ್ಲಿ ಬಸ್‌ ಹತ್ತಲು ನಿಂತಿರುತ್ತಾರೆ. ಅದರಲ್ಲೂ ಕೋಣಾಜೆ-ತೊಕ್ಕೊಟ್ಟು-ಉಳ್ಳಾಲ ಭಾಗಕ್ಕೆ ತೆರಳುವ ಜನರು ಅತಿ ಹೆಚ್ಚು ಸಂಖ್ಯೆಯಲ್ಲಿ ಜನ ಸೇರುವುದರಿಂದ ಈ ಕಾರಣಕ್ಕೆ ಶಾರೀಕ್‌ ಪಂಪ್‌ವೆಲ್‌ ಬಳಿಯೇ ಕುಕ್ಕರ್‌ ಬಾಂಬ್‌ ಇಡಲು ಪ್ಲ್ಯಾನ್‌ ಮಾಡಿದ್ದ ಎನ್ನಲಾಗಿದೆ . ಜನರಲ್ಲಿ ಭಯ ಹುಟ್ಟಿಸುವ ಪ್ರಯತ್ನ ನಡೆಸುವ ಹುನ್ನಾರ ನಡೆಸಿದ್ದಾನಾ?? ಅಥವಾ ಬೇರೆ ಕಾರಣವಿದೆಯಾ ಎಂದು ವಿಚಾರಣೆ ಬಳಿಕ ತಿಳಿಯಬೇಕಾಗಿದೆ.

Leave A Reply