ಆಧಾರ್ ಕಾರ್ಡ್ ಹೊಂದಿರುವವರಿಗೆ ಕೇಂದ್ರ ಸರ್ಕಾರದಿಂದ ಸಿಗುತ್ತೆ 4,78,000ರೂ. ಸಾಲ | ಈ ಕುರಿತು ಪಿಐಬಿ ಹಂಚಿಕೊಂಡ ಮಾಹಿತಿ ಇಲ್ಲಿದೆ..
ಆಧಾರ್ ಕಾರ್ಡ್ ಎಂಬುದು ವ್ಯಕ್ತಿಯ ಗುರುತಾಗಿದ್ದು, ಇದು ಭಾರತದ ಪ್ರತಿಯೊಬ್ಬ ನಾಯಕನಿಗೂ ಕಡ್ಡಾಯವಾಗಿದೆ. ಸರ್ಕಾರಿ ಕೆಲಸದಿಂದ ಹಿಡಿದು ಬ್ಯಾಂಕ್ ವಹಿವಾಟುಗಳ ವರೆಗೂ ಇದರ ಕಾರ್ಯ ಮಹತ್ವದ್ದಾಗಿದೆ. ನಮ್ಮ ಸೂಕ್ಷ್ಮ ವೈಯಕ್ತಿಕ ಮಾಹಿತಿಯನ್ನು ಒಳಗೊಂಡಿರುತ್ತದೆ ಆಧಾರ್. ಸರ್ಕಾರಿ ಹಾಗೂ ಸರ್ಕಾರೇತರ ಸೌಲಭ್ಯ ಸೇರಿದಂತೆ ಬ್ಯಾಂಕ್ ಖಾತೆ ತೆರೆಯಲೂ ಸಹ ಆಧಾರ್ ಕಡ್ಡಾಯವಾಗಿದೆ.
ಈ ಆಧಾರ್ ಕಾರ್ಡ್ ಮೂಲಕ ಸಾಲ ಕೂಡ ಪಡೆಯಬಹುದು ಎಂಬ ಮಾಹಿತಿಯು ಹರಿದು ಬಂದಿತ್ತು. ಆದ್ರೆ, ಹೆಚ್ಚಿನ ಜನತೆಗೆ ಇದು ನಿಜವೋ ಸುಳ್ಳೋ ಎಂಬ ಗೊಂದಲದಲ್ಲಿ ಇದ್ದರು. ಹೌದು. ಸರಕಾರದ ವತಿಯಿಂದ 4,78,000 ರೂಪಾಯಿ ಸಾಲ ದೊರೆಯುವುದರಿಂದ ಹೇಗೆ ಅಪ್ಲೈ ಮಾಡೋದು ಎಂದು ಹಲವರು ಯೋಚಿಸಿದ್ದಾರೆ.
ಆದ್ರೆ, ಈ ಸುದ್ದಿಯ ಅಸಲಿಯತ್ತೇನು ಅನ್ನುವುದನ್ನು ಪಿಐಬಿ (PIB) ಬಯಲು ಮಾಡಿದ್ದು, ಅಧಿಕೃತ ಟ್ವೀಟ್‌ನಲ್ಲಿ ಮಾಹಿತಿ ನೀಡಿದೆ. ಅಂತಹ ಯಾವುದೇ ಯೋಜನೆಯನ್ನು ಕೇಂದ್ರ ಸರ್ಕಾರ ನಡೆಸುತ್ತಿಲ್ಲ ಎಂದು ಪಿಐಬಿ ಫ್ಯಾಕ್ಟ್ ಚೆಕ್ ತನ್ನ ತನಿಖೆಯಲ್ಲಿ ಪತ್ತೆಹಚ್ಚಿದ್ದು, ಇದೊಂದು ಸುಳ್ಳು ಸುದ್ದಿ ಎಂದು ಹೇಳಿದೆ. ಇದರ ಜೊತೆಯಲಿ ಇಂತಹ ವೈರಲ್ ಪೋಸ್ಟ್‌ಗಳನ್ನು ಯಾರೊಂದಿಗೂ ಹಂಚಿಕೊಳ್ಳದಂತೆ ಎಚ್ಚರಿಕೆ ವಹಿಸುವಂತೆ ದೇಶದ ಜನತೆಗೆ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅನೇಕ ಬಾರಿ ತಪ್ಪು ಸುದ್ದಿಗಳು ವೈರಲ್ ಆಗಲು ಪ್ರಾರಂಭಿಸುತ್ತವೆ. ದೇಶದ ಜನತೆಯ ಸಾಮಾಜಿಕ ಮಾಧ್ಯಮ ಖಾತೆ ಅಥವಾ WhatsApp ನಲ್ಲಿ ಬರುವ ಯಾವುದೇ ಸುದ್ದಿಗಳ ಬಗ್ಗೆ ನಿಮಗೆ ಸಂದೇಹವಿದ್ದರೆ, ನೀವು ಪಿಐಬಿ (PIB) ಮೂಲಕ ಸತ್ಯಾಸತ್ಯತೆಯನ್ನು ಪರಿಶೀಲಿಸಬಹುದು. ಇದಕ್ಕಾಗಿ, ನೀವು ಅಧಿಕೃತ ಲಿಂಕ್ ಆದ https://factcheck.pib.gov.in/ ಗೆ ಭೇಟಿ ನೀಡಬೇಕು. ಇದಲ್ಲವಾದರೆ ನೀವು WhatsApp ಸಂಖ್ಯೆ 8799711259 ಅಥವಾ ಇಮೇಲ್ ಐಡಿ pibfactcheck@gmail.com ಗೆ ಮಾಹಿತಿಯನ್ನು ಕಳುಹಿಸಬಹುದು.