ಮಂಗಳೂರು ʼಕುಕ್ಕರ್ ಬಾಂಬ್ ಬ್ಲಾಸ್ಟ್‌ʼಗೆ ನಿಷೇಧಿತ PFI ಸಂಚು : ಸರ್ಕಾರದ ವಿರುದ್ಧ ಸೇಡಿಗೆ ಸ್ಕೆಚ್

ಮಂಗಳೂರು: ನಗರದಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್  ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದ್ದು, ನಿಷೇಧಿತ PFI ಲಿಂಕ್‌ ಇದ್ಯಾ ಅನ್ನೋದು ಮತ್ತೊಂದು ಶಾಕ್‌ ಎದುರಾಗಿದೆ.

ಕುಕ್ಕರ್ ಬಾಂಬ್ ಬ್ಲಾಸ್ಟ್  ಪ್ರಕರಣದ ಶಂಕಿತ ಆರೋಪಿ ಶಾರೀಕ್ ಗುರುತು ಪತ್ತೆ ಹಚ್ಚಲು ತಡರಾತ್ರಿ ಶಿವಮೊಗ್ಗದಿಂದ ಮಂಗಳೂರಿಗೆಆತನ ಪೋಷಕರನ್ನು ಪೊಲೀಸರು ಕರೆತಂದಿದ್ದಾರೆ. ತನಿಖೆ ತೀವ್ರಗೊಂಡಿದ್ದು, ಹಲವು ಸ್ಫೋಟಕ ಮಾಹಿತಿಗಳು ಹೊರಬರುತ್ತಿವೆ.

ತನಿಖೆ ತೀವ್ರಗೊಂಡಿದ್ದು, ಹಲವು ಸ್ಫೋಟಕ ಮಾಹಿತಿಗಳು ಹೊರಬರುತ್ತಿವೆ.ಕುಕ್ಕರ್ ಬಾಂಬ್ ಬ್ಲಾಸ್ಟ್ ಮಾಡಿದವರು ಯಾರು, ಏಕೆ? ಮಂಗಳೂರು ಟಾರ್ಗೆಟ್‌ಗೆ ಕಾರಣವೇನು? ಪೊಲೀಸ್ ವಶದಲ್ಲಿ ಇರೋ ಶಂಕಿತರ ಬಾಯ್ಬಿಟ್ಟ ಸತ್ಯವೇನು? ಮಂಗಳೂರಿನಲ್ಲಿ ಭಯ ಹುಟ್ಟಿಸಬೇಕು ಅನ್ನೋ ಮುಖ್ಯ ಅಜೆಂಡಾವಾಗಿತ್ತಾ? ಅನ್ನೋ ಹಲವು ಪ್ರಶ್ನೆಗಳಿಗೆ ಈಗ ಉತ್ತರ ಸಿಕ್ಕಿದೆ.

ನಿಷೇಧಿತ ಪಿಎಫ್‌ಐ ಸಂಘಟನೆ ಈ ಬ್ಲಾಸ್ಟ್‌ ರೂವಾರಿಗಳಾಗಿದ್ದು, ಬ್ಲಾಸ್ಟ್ ಮೂಲಕ ಜನರಿಗೆ ಭಯ ಹುಟ್ಟಿಸಬೇಕು ಅನ್ನೋ ಸಂಚು ರೋಪಿಸಿತ್ತು ಎನ್ನಲಾಗಿದೆ.

ನಮ್ಮ ಸಹವಾಸಕ್ಕೆ ಯಾರೂ ಬರಬಾರದು ಅನ್ನೋದು ಮುಖ್ಯ ಅಜೆಂಡಾವಾಗಿತ್ತು. ಪಿಎಫ್‌ಐ ಬ್ಯಾನ್ ಮಾಡಿದ ಕೋಪವೂ ಇತ್ತು ಶಂಕಿತರಿಗೆ ಇತ್ತು. ಇದಕ್ಕೆ ಸೇಡು ತೀರಿಸಿಕೊಳ್ಳುವ ಹುನ್ನಾರ ಇತ್ತೆಂದು ಹೇಳಲಾಗುತ್ತಿದೆ. ಇದಕ್ಕೆ ಮೂಲ ಕಾರಣಗಳನ್ನು ಪತ್ತಹೆಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ

Leave A Reply