ಜಮೀನು ವಿವಾದ : ಯುವಕನ ಬರ್ಬರ ಕೊಲೆ

Share the Article

ಜಮೀನು ವಿವಾದಕ್ಕೆ ಯುವಕನೋರ್ವನ‌ ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ತಿರುಮನಹಳ್ಳಿಯಲ್ಲಿ ನಡೆದಿದೆ.

ಯಶವಂತ್ ಮೃತ ಯುವಕ.ಯಶವಂತ್ ಮತ್ತು ಆತನ ಸಹೋದರ ಯತೀಶ್ ಮೇಲೆ ಜಾಗದ ವಿಚಾರಕ್ಕೆ ಸಂಬಂಧಿಸಿ ಚಂದನ್ ಮತ್ತು ಆತನ ಕುಟುಂಬದವರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು.ಘಟನೆಯಲ್ಲಿ ಗಂಭೀರವಾಗಿದ್ದ ಯಶವಂತ ರಕ್ತಸ್ರಾವದಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಮೃತ ಯಶವಂತ ಸಹೋದರ ಯತೀಶ್‌ ಖಾಸಗಿ‌ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ‌.

Leave A Reply