Love Jihad : ವಿವಾಹಿತನನ್ನೇ ಮತಾಂತರಗೊಳಿಸಿದಳಾ ಮುಸ್ಲಿಂ ನಾರಿ | ಶರಣಪ್ಪ ಈಗ ಸುಮೇರ್ ಉಜೆನ್
ರಾಜ್ಯದಲ್ಲಿ ಬಲವಂತ ಮತಾಂತರ ಕಾಯ್ದೆ ಜಾರಿಯಲ್ಲಿದ್ದರೂ ಮತಾಂತರ ಪ್ರಕರಣಗಳು ನಡೆಯುತ್ತಲೇ ಇರುವ ಪ್ರಕರಣಗಳು ವರದಿಯಾಗುತ್ತಲೇ ಇರುತ್ತದೆ. ಮತಾಂತರ ಕಾಯ್ದೆ ಪ್ರಕಾರ, ಯಾವುದೇ ಒಬ್ಬ ವ್ಯಕ್ತಿಯನ್ನು ಬಲವಂತವಾಗಿ ಮತಾಂತರ ಮಾಡುವಂತಿಲ್ಲ. ಆದರೆ ಯಾದಗಿರಿಯಲ್ಲಿ ಬಲವಂತದ ಮತಾಂತರ ಮಾಡಿಕೊಂಡ ಘಟನೆಯೊಂದು ನಡೆದಿದೆ. ಈ ಪ್ರಕರಣದಲ್ಲಿ ಮದುವೆಯಾಗಿದ್ದ ವ್ಯಕ್ತಿನ್ನು ಮಹಿಳೆಯೊಬ್ಬಳು ತನ್ನ ಬಲೆಗೆ ಬೀಳಿಸಿಕೊಂಡು ಆತನನ್ನು ಬಲವಂತವಾಗಿ ಮತಾಂತರಗೊಳಿಸಿದ್ದಾಳೆ.
ಅಂಬಿಕಾ, ಮೂಲತಃ ಯಾದಗಿರಿ ಜಿಲ್ಲೆಯ ಮಹಿಳೆ, ಈಕೆ ಕಲಬುರಗಿ ಮೂಲಕ ಶರಣಪ್ಪನ ಜೊತೆ ಕಳೆದ 4 ವರ್ಷಗಳ ಹಿಂದೆ ಮದುವೆಯಾಗಿದ್ದರು. ಶರಣಪ್ಪ ಕಲಬುರಗಿಯಲ್ಲಿ ಖಾಸಗಿ ಡಯಾಗ್ನೆಸಿಟ್‍ನಲ್ಲಿ ಕೆಲಸ ಮಾಡಿಕೊಂಡಿದ್ದ. ಇಬ್ಬರ ಸಂಸಾರ ಚೆನ್ನಾಗಿಯೇ ಇತ್ತು. ಆದರೆ ಶರಣಪ್ಪನಿಗೆ ತಾನು ಕೆಲಸ ಮಾಡುತ್ತಿದ್ದ ಡಯಾಗ್ನೆಸಿಟ್‍ನಲ್ಲಿ ಸುಮೈರಾ ಆಫ್ರಿನ್ ಎಂಬ ಮುಸ್ಲಿಂ ಮಹಿಳೆ ಪರಿಚಯವಾಗಿ, ನಂತರ ಇಬ್ಬರ ಪರಿಚಯ ಸ್ನೇಹವಾಗಿ ಪರಿವರ್ತನೆಯಾಗಿತ್ತು, ಹೀಗಿರುವಾಗ ಇಬ್ಬರ ನಡುವಿನ ಸಲುಗೆ ತುಂಬಾ ಹೆಚ್ಚಾಯಿತು. ನಂತರ ಈ ಸಲುಗೆಯಿಂದ ಅಫ್ರೀನಾ ಶರಣಪ್ಪನನ್ನು ಒತ್ತಾಯವಾಗಿ ಮದುವೆಯಾಗಿದಳು.
ಸುಮೈರಾ ಅಫ್ರೀನ್ ಗೆ ಇದು ಮೊದಲ ಮದುವೆಯಲ್ಲ. ಆಕೆ ಈ ಮೊದಲೇ ವಿವಾಹವಾಗಿದ್ದಳು. ಆಕೆಗೆ ಈಗಾಗಲೇ ಮೊದಲ ಮದುವೆಯಿಂದ ಮೂವರು ಮಕ್ಕಳಿದ್ದಾರೆ. ಒಂದೇ ಕಡೆ ಕೆಲಸ ಮಾಡುತ್ತಿದ್ದ ಶರಣಪ್ಪ ಹಾಗೂ ಅಫ್ರೀನ್ ನಡುವೆ ಏನಾದರೂ ಪ್ರೀತಿ, ಪ್ರೇಮ ಶುರುವಾಗಿತ್ತಾ? ಶರಣಪ್ಪ ಸಲುಗೆ ಬೆಳೆಸಿಕೊಂಡಿದ್ದ ಅಫ್ರೀನ್ ಮದುವೆ ಹೆಸರಿನಲ್ಲಿ ಕಿರುಕುಳ ನೀಡಿ ಆತನನ್ನು ಮದುವೆಯಾಗಿ ಬಲವಂತವಾಗಿ ಮತಾಂತರ ಮಾಡಿಸಿದ್ರಾ ಎಂಬ ಅನುಮಾನಗಳು ಶುರುವಾಗಿದೆ. ಅಫ್ರೀನ್‍ಳನ್ನು ಮದುವೆಯಾದ ಬಳಿಕ ಶರಣಪ್ಪ ಮಾನಸಿಕವಾಗಿ ಕುಗ್ಗಿ ಹೋಗಿದ್ದ. ಮದುವೆ ಬಳಿಕ ಶರಣಪ್ಪ ಸುಮೈರ್ ಉಜೆನ್ ಹೆಸರಿನಲ್ಲಿ ನ್ಯಾಯಾಲಯದಲ್ಲಿ ಅಫಿಡವಿಟ್ ಮಾಡಿಸಿಕೊಂಡಿದ್ದಾನೆ. ಅಷ್ಟೇ ಅಲ್ಲದೇ ಅಫ್ರೀನ್ ನಮ್ಮ ವಿರುದ್ಧವೇ ಹೆಬಿಯಸ್ ಕಾರ್ಪಸ್ ಪ್ರಕರಣ ದಾಖಲಿಸಿದ್ದು, ನಮಗೆ ಜೀವ ಬೇದರಿಕೆ ಹಾಕಿದ್ದಾಳೆ ಎಂದು ನೊಂದ ಮಹಿಳೆ ಅಂಬಿಕಾ ಆರೋಪಿಸಿದ್ದಾರೆ.
ಮದುವೆಗೂ ಮುನ್ನವೇ ಶರಣಪ್ಪ ಇಸ್ಲಾಂ ಧರ್ಮ ಸ್ವೀಕರಿಸಿದ್ದನಾ ಎನ್ನುವುದಕ್ಕೆ ಉರ್ದುಭಾಷೆ ಕಲಿಯುವ ಪುಸ್ತಕ ದೊರೆತಿದ್ದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಇದೊಂದು ಬಲವಂತದ ಮತಾಂತರವಾಗಿದ್ದು, ಅಫ್ರೀನ್‍ಳನ್ನು ಪೊಲೀಸರು ಕೂಡಲೇ ಬಂಧಿಸಿ ಆಕೆಯ ಹಿಂದೆ ಇರುವ ಜಾಲವನ್ನು ಪತ್ತೆ ಮಾಡಿ ಬಲವಂತದ ಮತಾಂತರವನ್ನು ತಡೆಯಬೇಕು ಎಂದ ಶ್ರೀರಾಮ ಸೇನೆ ಅಧ್ಯಕ್ಷ ವಿಜಯಕುಮಾರ್ ಪಾಟೀಲ್ ಒತ್ತಾಯಿಸಿದ್ದಾರೆ.