ರೈತರಿಗೆ ಸಿಹಿ ಸುದ್ದಿ | ಈ ಅಪ್ಲಿಕೇಶನ್ ಹಾಕಿದರೆ ಬೆಳೆಯ ಮೇಲಿನ ಕೀಟ ದಾಳಿ ಗೊತ್ತಾಗುತ್ತೆ !

ರೈತರು ನಮ್ಮ ದೇಶದ ಬೆನ್ನೆಲುಬು ಮತ್ತು ನಮಗೆಲ್ಲ ಅನ್ನದಾತರು ಕೂಡ ಹೌದು. ಆದರೆ ರೈತರ ಕಷ್ಟ ರೈತರಿಗೇ ಗೊತ್ತು. ರೈತರು ತಮ್ಮ ಕೃಷಿ ಬೆಳೆಯನ್ನು ಉಳಿಸಿಕೊಳ್ಳಲು ಹರಸಾಹಸ ಪಟ್ಟು ಬೆಳೆಸುತ್ತಾರೆ. ನಂತರ ಕಟಾವು ಮಾಡಿ ಮಾರಾಟ ಮಾಡಿ ಸರಿಯಾದ ಬೆಲೆಯನ್ನು ಪಡೆಯಲು ಸಾಧ್ಯ ಆಗದೆ ರೈತರು ಕಣ್ಗೆಟ್ಟು ಹೋಗುವುದು ಪ್ರತಿಯೊಂದು ವರ್ಷವೂ ಒಂದಲ್ಲಾ ಒಂದು ಕಾರಣದಿಂದ ನಡೆಯುತ್ತಲೇ ಇದೆ. ಅದರಲ್ಲೂ ಕೀಟ ಮತ್ತು ರೋಗದ ಸಮಸ್ಯೆ ಕೃಷಿಯಲ್ಲಿ ತಪ್ಪಿದ್ದಲ್ಲ.


Ad Widget

Ad Widget

Ad Widget

Ad Widget
Ad Widget

Ad Widget

ಆದ್ದರಿಂದ ಪ್ರಸ್ತುತ ರೈತರಿಗಾಗಿ ಸ್ವಿಸ್ ಅಗ್ರೋಕೆಮಿಕಲ್ಸ್ ಕಂಪನಿ ಸಿಂಜೆಂಟಾ ತನ್ನ ಮೊಬೈಲ್ ಅಪ್ಲಿಕೇಶನ್‍ ‘syngenta anantham app’ನಲ್ಲಿ ಬೆಳೆಗಳ ಮೇಲೆ ಕೀಟ ಅಥವಾ ರೋಗ ದಾಳಿಗಳನ್ನ ಗುರುತಿಸಲು ಹೊಸ ಆಪ್ ಪರಿಚಯಿಸಿದೆ.


Ad Widget

ಹೌದು ಸ್ವಿಸ್ ಅಗ್ರೋಕೆಮಿಕಲ್ಸ್ ಪ್ರಕಾರ ಈ ವರ್ಷದ ಆಗಸ್ಟ್’ನಲ್ಲಿ ಬಿಡುಗಡೆಯಾದ ತನ್ನ ಬೆಳೆವಾರು ‘ಗ್ರೋವರ್ ಅಪ್ಲಿಕೇಶನ್’ ಹೊಸ ವೈಶಿಷ್ಟ್ಯವಾದ ‘ಕ್ರಾಪ್ ಡಾಕ್ಟರ್’ ಅನ್ನು ಪರಿಚಯಿಸಿದೆ. ಹೊಸದಾಗಿ ರೂಪುಗೊಂಡ ಈ ವಿದ್ಯಮಾನವು ರೈತರಿಗೆ ತುಂಬಾ ಸಹಕಾರಿಯಾಗಲಿದೆ ಎಂದು ಕಂಪನಿ ತಿಳಿಸಿದೆ.

ಸಿಂಜೆಂಟಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ರೈತ-ಕೇಂದ್ರಿತ ಪರಿಸರ ವ್ಯವಸ್ಥೆಯ ಮುಖ್ಯಸ್ಥ ಸಚಿನ್ ಕಮ್ರಾ ಪ್ರಕಾರ , “ರೈತರು ಈ ವೈಶಿಷ್ಟ್ಯವನ್ನು ಬಳಸಲು ಗ್ರೋವರ್ ಅಪ್ಲಿಕೇಶನ್‍ನಿಂದ ಫೋಟೋವನ್ನ ಮಾತ್ರ ಕ್ಲಿಕ್ ಮಾಡಬೇಕು. ಬೆಳೆ ವೈದ್ಯರು ಕೀಟಗಳು ಅಥವಾ ರೋಗಗಳನ್ನ ಗುರುತಿಸುತ್ತಾರೆ ಮತ್ತು ಬಳಸುವ ಸಿಂಜೆಂಟಾ ಉತ್ಪನ್ನಗಳ ಬಗ್ಗೆ ಮಾಹಿತಿಯನ್ನ ನೀಡುತ್ತಾರೆ” ಎಂದು ತಿಳಿಸಿದ್ದಾರೆ.

ಜಾಗತಿಕವಾಗಿ ರೈತರು ಹವಾಮಾನ ಬದಲಾವಣೆ, ಮಣ್ಣಿನ ಸವಕಳಿ ಮತ್ತು ಜೀವವೈವಿಧ್ಯತೆಯ ನಷ್ಟ ಸೇರಿದಂತೆ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳಿಗೆ ಪರಿಹಾರ ನೀಡುವ ಪ್ರಯತ್ನ ನಮ್ಮದು ಎಂದು ಸಿಂಜೆಂಟಾ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಮತ್ತು ಕಂಟ್ರಿ ಹೆಡ್ ಸುಶೀಲ್ ಕುಮಾರ್ ಅವರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಒಟ್ಟಿನಲ್ಲಿ ರೈತರು ಕೀಟಗಳ ಹಾವಳಿ ಮತ್ತು ಕಳೆ ಮತ್ತು ರೋಗಗಳ ಸಮಸ್ಯೆಗೆ ಈ ವಿದ್ಯಮಾನ ಬಳಸಿಕೊಂಡು ಉತ್ತಮ ಇಳುವರಿ ಪಡೆಯಬಹುದಾಗಿದೆ.

error: Content is protected !!
Scroll to Top
%d bloggers like this: