BBK9 : ದೊಡ್ಮನೆಯ ಆಟ ಮುಗಿಸಿದ ದೀಪಿಕಾ ದಾಸ್ ! ಈ ಕಾರಣಕ್ಕಾಗಿ ದೀಪಿಕಾ ಮನೆಯಿಂದ ಹೊರಬಂದ್ರಾ?

ಬಿಗ್ ಬಾಸ್ ಸೀಸನ್ 9 ಕನ್ನಡ ಗ್ರಾಂಡ್ ಫಿನಾಲೇ ಗೆ ಇನ್ನೇನು 6 ವಾರಗಳು ಬಾಕಿ ಇದೆ. ಒಬ್ಬರಾದ ಮೇಲೆ ಒಬ್ಬರು ಎಲಿಮಿನೇಟ್ ಆಗ್ತಾನೆ ಇದ್ದಾರೆ. ಈ ಹಿಂದಿನ ವಾರ ಗುರೂಜಿ ಎಲಿಮಿನೇಟ್ ಅಂತ ಹೇಳಿ ಬಿಗ್ ಬಾಸ್ ಫೂಲ್ ಮಾಡಿದ್ದರು. ಆದರೆ ಈ ವಾರ ಫಸ್ಟ್ ಸೇವ್ ಆದ ಮೊದಲ ಅಭ್ಯರ್ಥಿ ಎಂದರೆ ಅದು ಗುರೂಜಿ.

ಮನೆಯಲ್ಲಿ ಈ ಬಾರಿ ಭಯಂಕರ ಕದನದ ಟಾಸ್ಕ್ ಬಿಗ್ ಬಾಸ್ ನಲ್ಲಿ ನೀಡಿದ್ದು, ಎಲ್ರಿಗೂ ಮೈ ಕೈ ಪೆಟ್ಟು ಆಗಿತ್ತು. ಇದಾದ ನಂತರ ಕಿಚ್ಚನ ಕೈಯಾರೆ ಸಖತ್ ಆಗಿ ವೆರೈಟಿ ತಿಂಡಿ ತಿನಿಸುಗಳು ಬಂದಿದ್ವು. ಎಲ್ರೂ ಚಪ್ಪರಿಸಿಕೊಂಡು ತಿಂದಿದ್ದಾರೆ.ಇದರ ನಡುವೆಯೇ ಎಲಿಮಿನೇಷನ್ ಬಿಸಿ ತಾಗಿದೆ ಮನೆ ಮಂದಿಗೆ.

ವಾರಾಂತ್ಯ ಕಿಚ್ಚ ಎಂಟ್ರಿ ಕೊಟ್ಟು ಒಂದಷ್ಟು ಮೋಜು, ಮಸ್ತಿಗಳನ್ನು ಮಾಡಿ , ಒಂದಷ್ಟು ಜನಕ್ಕೆ ಕ್ಲಾಸ್ ತಾಗೊಂಡಿದಾರೆ ಕಿಚ್ಚ. ಇದಾದ ನಂತರ ಎಲಿಮಿನೇಷನ್. ಈ ಬಾರಿ ಮನೆಯಿಂದ ಎಲಿಮಿನೇಷನ್ ಆಗಿದ್ದು ದೀಪಿಕಾ ದಾಸ್.

ಹೌದು, ಬಿಗ್ ಬಾಸ್ 7 ಸೀಸನ್ ಟಾಪ್ 5 ಈಕೆ ಬಂದಿದ್ದರು. ನಲ್ಲಿ ಇದ್ದ ಸ್ಪರ್ಧಿಯು ಸಿಸನ್ 9 ಅಲ್ಲಿ ಪ್ರವೀಣರಾಗಿ ಆಗಮಿಸಿದವರಲ್ಲಿ ದೀಪಿಕ ದಾಸ್ ಕೂಡ ಒಬ್ಬರು. ಸಖತ್ ಟಫ್ ಸ್ಪರ್ಧಿ ಆಗಿದ್ದರೂ ಕೂಡ ಮನೆಯಿಂದ ಹೊರಗೆ ಹೋಗಿದ್ದಾರೆ. ಇದರಿಂದ ಎಲ್ರಿಗೂ ಶಾಕ್ ಕೂಡ ಆಗಿದೆ. ಆದರೆ ಈ ಹಿಂದೆ ಇದ್ದ ಸೀಸನ್ ನಲ್ಲಿ ಇದ್ದ ದೀಪಿಕಾ ದಾಸ್ ಈ ಸೀಸನ್ ನಲ್ಲಿ ಇಲ್ಲ ಅಂತ ಸಾಕಷ್ಟು ಅಭಿಮಾನಿಗಳು ಕಮೆಂಟ್ ಮಾಡಿದ್ರು. ಜೊತೆಗೆ ಸಿಟ್ಟು ಕೂಡ ತುಂಬಾ ಅಂತ ಬೇಸರ ವ್ಯಕ್ತಪಡಿಸಿದ್ದರು ನೆಟ್ಟಿಗರು.

ದೀಪಿಕಾ ದಾಸ್ ಅವರು ಸಿನಿಮಾದಲ್ಲಿ ನಟಿಸುತ್ತಿದ್ದಾರಂತೆ. ಬಿಗ್ ಬಾಸ್ ಮನೆಯಿಂದ ಹೋದ ಮೇಲೆ ಆ ಪ್ರಾಜೆಕ್ಟ್ ಗಳನ್ನು ಕೈಗೆತ್ತಿಕೊಳ್ಳಲಿದ್ದಾರೆ.

Leave A Reply

Your email address will not be published.