Astro Tips : ನಿಮಗೆ ಗೊತ್ತೇ? ಮನೆಯ ಈ ದಿಕ್ಕಿನಿಂದ ಇರುವೆ ಬಂದರೆ ಒಳ್ಳೆಯದಂತೆ
ಹಿಂದಿನ ಕಾಲದ ನಂಬಿಕೆಗೂ ಇಂದಿನ ಕಾಲದ ಜೀವನಕ್ಕೂ ಹೋಲಿಸಲು ಹೋದರೆ ಉತ್ತರ ಶೂನ್ಯ ಆಗಿರುತ್ತದೆ. ಯಾಕೆಂದರೆ ಹಿಂದಿನ ಕಾಲದಲ್ಲಿ ಜನರು ತಮ್ಮ ಆಚಾರ ವಿಚಾರ ರೂಢಿ ಸಂಪ್ರದಾಯ ನಂಬಿಕೆಯೇ ಅವರ ಜೀವಾಳ ಆಗಿತ್ತು ಆದರೆ ಈಗಿನ ಕಾಲದವರರು ತಂತ್ರಜ್ಞಾನನಕ್ಕೆ ಒಗ್ಗಿಕೊಂಡರು ಸಹ ನಂಬಿಕೆಗಳು ಯಾವುತ್ತೂ ಸುಳ್ಳಾಗುವುದಿಲ್ಲ. ಜೀವನ ಶೈಲಿ ಬದಲಾದರೂ ನಂಬಿಕೆಗಳು ಸುಳ್ಳಾಗಳು ಸಾಧ್ಯವಿಲ್ಲ. ಇದಕ್ಕೆ ನಮ್ಮ ಹಿರಿಯರೇ ಸಾಕ್ಷಿ.
ನಮಗೆಲ್ಲ ಗೊತ್ತಿರುವ ಹಾಗೆ ಎಲ್ಲರ ಮನೆಯಲ್ಲಿ ಇರುವೆ ಇದ್ದೆ ಇರುತ್ತವೆ. ಕೆಲವರಿಗೆ ಇರುವೆ ಕಂಡ್ರೆ ಆಗಲ್ಲ. ಅವುಗಳನ್ನು ಓಡಿಸಲು ನಾನಾ ಕಸರತ್ತು ಮಾಡುತ್ತಾರೆ. ಆದರೆ ಕಪ್ಪು ಇರುವೆಗಳನ್ನು ಶುಭಸಂಕೇತ ಎಂದು ಪರಿಗಣಿಸಲಾಗುತ್ತದೆ. ಕಪ್ಪು ಮತ್ತು ಕೆಂಪು ಇರುವೆಗಳು ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿ ಕಾಣಿಸುತ್ತವೆ.
ಮನೆಯೊಳಗೆ ಕಪ್ಪು ಇರುವೆಗಳನ್ನು ಕಂಡ್ರೆ ಅದು ಒಳ್ಳೆಯದಾಗುತ್ತೆ ಅನ್ನೋದರ ಸಂಕೇತ ಎಂದು ಹೇಳುತ್ತಾರೆ.
ಮನೆಯೊಳಗೆ ಕಪ್ಪು ಇರುವೆ ಯಾವ ದಿಕ್ಕಿನಿಂದ ಬರುತ್ತೆ ಅನ್ನೋದರ ಮೇಲೆಯೂ ಶುಭ ಗಳಿಗೆ ನಿರ್ಧಾರವಾಗುತ್ತದೆ.
ಇರುವೆಗಳ ಆಗಮನ ಒಳ್ಳೆಯ ಶುಭ ಸುದ್ದಿಯನ್ನು ತರುತ್ತೆ ಎಂಬ ನಂಬಿಕೆ ಇದೆ. ಇರುವೆಗಳ ಬರುವ ಅರ್ಥ ಇಲ್ಲಿದೆ.
- ನಿಮ್ಮ ಮನೆಯ ಉತ್ತರ ದಿಕ್ಕಿನಲ್ಲಿ ಕಪ್ಪು ಇರುವೆ ಕಾಣಿಸಿದಾಗ ಧನಾಗಮನದಿಂದ ಆರ್ಥಿಕ ಮುಗ್ಗಟ್ಟು ನಿವಾರಣೆ ಆಗಲಿದೆ ಎಂದು ಅರ್ಥ.
- ನಿಮ್ಮ ಮನೆಯ ಪೂರ್ವ ದಿಕ್ಕಿನಲ್ಲಿ ಕಪ್ಪು ಇರುವೆಗಳು ಕಾಣಿಸಿದಾಗ ಶೀಘ್ರದಲ್ಲೇ ಸಿಹಿ ಸುದ್ದಿಯೊಂದು ಶುಭ ವಿಚಾರ ನಿಮಗೆ ಸಿಗಲಿದೆ.
- ಮನೆಯ ಪಶ್ಚಿಮ ದಿಕ್ಕಿನಲ್ಲಿ ಕಪ್ಪು ಇರುವೆ ಕಾಣಿಸಿದಾಗ ನೀವು ಪ್ರಯಾಣ ಮಾಡುತ್ತೀರಿ ಎಂದರ್ಥ. • ಮನೆಯಲ್ಲಿ ಚಿನ್ನವನ್ನು ಇಟ್ಟಿರುವ ಜಾಗದಲ್ಲಿ ಕಪ್ಪು ಇರುವೆಗಳು ಕಂಡರೆ ಶೀಘ್ರದಲ್ಲಿಯೇ ಹೊಸ ಆಭರಣ ಖರೀದಿಸುವಿರಿ ಎಂದರ್ಥ.
- ಅನ್ನ ತುಂಬಿದ ಪಾತ್ರೆಯಿಂದ ಇರುವೆಗಳು ಹೊರಬರುವುದನ್ನು ನೀವು ನೋಡಿದರೆ, ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಎಂದರ್ಥ.
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆ ಮಾತಿನಂತೆ ಇರುವೆಗಳು ಉತ್ತಮ ಸೂಚನೆ ನೀಡುತ್ತವೆ ಹಾಗೆಯೇ ಇರುವೆಗಳ ಮೂಲಕ ನೀವು ಕೆಲವೊಂದು ಮುನ್ಸೂಚನೆಗಳು ತಿಳಿದುಕೊಳ್ಳಬಹುದಾಗಿದೆ . ನೀವು ಒಂದು ಸಾರಿ ಇರುವೆ ಮುನ್ಸೂಚನೆ ಸರಿಯೇ ಎಂದು ಪರೀಕ್ಷಿಸಿ ನೋಡಬಹುದು.