vivo Smartphone : ವಿವೋ ಕಂಪನಿಯಿಂದ ಹತ್ತುಸಾವಿರದೊಳಗಿನ ಬೆಸ್ಟ್‌ ಫೋನ್‌ ಇಲ್ಲಿದೆ ನೋಡಿ|

ಈಗ ಯಾರ ಬಳಿಯಲ್ಲಿ ಸ್ಮಾರ್ಟ್ ಫೋನ್ ಇಲ್ಲಾ ಹೇಳಿ. ಎಲ್ಲರಾ ಕೈಯಲ್ಲೂ ಫೋನ್ ರಾರಾಜಿಸುತ್ತಿದೆ. ಭಾರತದ ಸ್ಮಾರ್ಟ್ ಫೋನ್ ತಯಾರಿಕ ಕಂಪನಿಯಲ್ಲಿ vivo ಜನಪ್ರಿಯವಾಗಿದ್ದೂ, ಅನೇಕರು ಇಷ್ಟ ಪಟ್ಟು ಖರೀದಿಸುತ್ತಾರೆ. ಇದೀಗ Vivo V25 5G ಸ್ಮಾರ್ಟ್​​ಫೋನ್ ಅನ್ನು ಕೇವಲ 10,000 ರೂ. ಗಳಿಂತಲೂ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಂತೆ!!

ಹೌದು, ಈ ಸ್ಮಾರ್ಟ್‌ಫೋನ್‌ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಆನ್ಲೈನ್​ ವೆಬ್​ಸೈಟ್​ಗಳಾಗಿರುವ ಫ್ಲಿಪ್​ಕಾರ್ಟ್​ ಅಮೆಜಾನ್​ನಲ್ಲಿ ದೊಡ್ಡ ಎಕ್ಸ್‌ಚೇಂಜ್ ಡಿಸ್ಕೌಂಟ್ ಆಫರ್ ನಲ್ಲಿ ಲಭ್ಯವಿದ್ದೂ, ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಿಕೊಳ್ಳಬಹುದು ಮತ್ತು 17,500 ರೂಪಾಯಿಗೆ ರಿಯಾಯಿತಿಯಿಂದ ಈ ಸ್ಮಾರ್ಟ್​​​ಫೋನ್​ ಅನ್ನು ಪಡೆಯಬಹುದಾಗಿದೆ. ನೀವು ಫೆಡರಲ್ ಬ್ಯಾಂಕ್ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್​ನ ಕಾರ್ಡ್‌ಗಳೊಂದಿಗೆ ಖರೀದಿಸಿದರೆ ನೀವು ಶೇಕಡಾ 10% ರಷ್ಟು ರಿಯಾಯಿತಿಯನ್ನು ಪಡೆಯಬಹುದು.

ಎಕ್ಸ್ಚೇಂಜ್ ಮೂಲಕ ಖರೀದಿಸಲು ಬಯಸುವವರಿಗೆ 17,500 ರೂಪಾಯಿವರೆಗೆ ಎಕ್ಸ್ಚೇಂಜ್ ರಿಯಾಯಿತಿ ಸಿಗುತ್ತದೆ. ನಿಮ್ಮ ಹಳೆಯ ಮೊಬೈಲ್‌ಗೆ 17,500 ರೂಪಾಯಿಯಲ್ಲಿ ಎಕ್ಸ್‌ಚೇಂಜ್ ಡಿಸ್ಕೌಂಟ್ ಅನ್ವಯವಾಗಿದ್ದರೆ, ನೀವು 10,499 ರೂಪಾಯಿವರೆಗೆ ಪಾವತಿಸಬೇಕಾಗುತ್ತದೆ. ಬ್ಯಾಂಕ್ ರಿಯಾಯಿತಿಯೊಂದಿಗೆ 10,000 ರೂಪಾಯಿ ಅಡಿಯಲ್ಲಿ ಖರೀದಿಸಬಹುದು. ಇದಲ್ಲದೆ ಫ್ಲಿಪ್ಕಾರ್ಟ್ ಬ್ಯಾಂಕ್ ಗಳ ಮೂಲಕವು ಖರೀದಿಸಬಹುದಾಗಿದೆ.
ವಿವೋ ಸ್ಮಾರ್ಟ್‌ಫೋನ್ ಅನ್ನು EMI ಮೂಲಕ ಖರೀದಿಸಬಹುದಾಗಿದ್ದೂ, EMI ಆಯ್ಕೆಯು 5,333 ರೂಪಾಯಿಯಿಂದ ಪ್ರಾರಂಭವಾಗುತ್ತದೆ.

ಈ ಸ್ಮಾರ್ಟ್​​ಫೋನ್ ಎರಡು ವಿಧಗಳಲ್ಲಿ ಲಭ್ಯವಿದ್ದೂ, 8GB RAM + 128GB ಸ್ಟೋರೇಜ್ ಹೊಂದಿದ ಮೊಬೈಲ್ ಆಗಿದ್ದರೆ 27,999 ರೂಪಾಯಿಗೆ ಲಭ್ಯವಿದೆ. 12GB RAM + 256GB ಸ್ಟೋರೇಜ್ ಹೊಂದಿದ ಮೊಬೈಲ್​​ 31,999 ರೂಪಾಯಿಗೆ ಲಭ್ಯವಿದೆ.

Vivo V25 5G ಸ್ಮಾರ್ಟ್​​ಫೋನ್ ಆಗಿದ್ದೂ, 90Hz ರಿಫ್ರೆಶ್ ದರದೊಂದಿಗೆ 6.44-ಇಂಚಿನ HD+ AMOLED ಡಿಸ್ಪ್ಲೇಯನ್ನು ಹೊಂದಿದೆ. ಹಿಂಭಾಗದ ಫಲಕವು ಬಣ್ಣವನ್ನು ಬದಲಾಯಿಸುವ ಫ್ಲೋರೈಟ್ ಎಜಿ ಗ್ಲಾಸ್ ತಂತ್ರಜ್ಞಾನದಿಂದ ಕೂಡಿದೆ. ಸೂರ್ಯನ ಬೆಳಕು ಅಥವಾ UV ಕಿರಣಗಳು ನಿಮ್ಮ ಮೊಬೈಲ್​ನ ಹಿಂಭಾಗದ ಪ್ಯಾನಲ್​ಗೆ ಬಿದ್ದಾಗ ಬಣ್ಣ ಬದಲಾಗುತ್ತದೆ. ಸರ್ಫಿಂಗ್ ಬ್ಲೂ ಮತ್ತು ಕಪ್ಪು ಬಣ್ಣಗಳಲ್ಲಿ ಲಭ್ಯವಿದೆ.

ಇದರೊಂದಿಗೆ, 50MP ಐಎಎಫ್ ಸೆಲ್ಫಿ ಕ್ಯಾಮೆರಾ, 64MP OIS ಕ್ಯಾಮೆರಾ, 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಫೀಚರ್ಸ್​ನೊಂದಿಗೆ ಟ್ರಿಪಲ್ ಕ್ಯಾಮೆರಾ ಸೆಟಪ್ ಇದೆ. ಮೀಡಿಯಾ ಟೆಕ್ ಡೈಮೆನ್ಶನ್ 900 ಪ್ರೊಸೆಸರ್‌ನಿಂದ ಕೂಡಿದೆ.

ಈ ಸ್ಮಾರ್ಟ್‌ಫೋನ್ 4,500mAh ಬ್ಯಾಟರಿಯನ್ನು ಹೊಂದಿದೆ ಮತ್ತು 44W ಫಾಸ್ಟ್​ ಚಾರ್ಜಿಂಗ್ ಬೆಂಬಲ ಲಭ್ಯವಿದೆ. ಈ ಸ್ಮಾರ್ಟ್‌ಫೋನ್ Android 12 + FunTouch OS 12 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದನ್ನು 8GB RAM ವರೆಗೆ ಬಳಸಬಹುದು. ಈ ಸ್ಮಾರ್ಟ್‌ಫೋನ್ ಲಿಕ್ವಿಡ್ ಕೂಲ್ ಸಿಸ್ಟಮ್, ಗೇಮ್ ಬೂಸ್ಟ್ ಮೋಡ್ ಮುಂತಾದ ಫೀಚರ್ಸ್​​ ಅನ್ನು ಇದು ಹೊಂದಿದೆ.

1 Comment
  1. sklep internetowy says

    Wow, superb weblog layout! How lengthy have you been running a blog
    for? you made running a blog glance easy. The full look
    of your website is wonderful, let alone the content material!
    You can see similar here sklep

Leave A Reply

Your email address will not be published.