ಕೆಲವರ ಕಣ್ಣು ನೀಲಿಯಾಗಿರಲು ಕಾರಣ ಇದಂತೆ!
ನಮ್ಮ ದೇಹದಲ್ಲಿರುವ ಪಂಚೇಂದ್ರಿಯ ಗಳಲ್ಲಿ ಕಣ್ಣು ನಮಗೆ ಬಹಳ ಮುಖ್ಯವಾದುದು. ಸುಂದರ ಪ್ರಪಂಚದಲ್ಲಿ ಪ್ರಕೃತಿಯ ಆನಂದ ಸವಿದು ಜೀವಿಸಲು ಕಣ್ಣುಗಳು ಬೇಕೇ ಬೇಕು ಆದರೆ ಕಣ್ಣುಗಳು ಆರೋಗ್ಯವಾಗಿರುವುದು ಸಹ ಅಷ್ಟೇ ಮುಖ್ಯ.
ಆದರೆ ಸಾಮಾನ್ಯವಾಗಿ ಹೆಚ್ಚಿನ ಜನರ ಕಣ್ಣುಗಳು ಕಪ್ಪು ಕಂದು ಬಣ್ಣದಲ್ಲಿರುತ್ತದೆ. ಆದರೆ ಕೆಲವರಲ್ಲಿ ನೀಲಿ ಬಣ್ಣದ ಕಣ್ಣುಗಳು ಕಂಡುಬರುತ್ತದೆ. ಇದು ನೋಡಲು ತುಂಬಾ ಆಕರ್ಷಕವಾಗಿ ಕಾಣುತ್ತದೆ. ಇದಕ್ಕೆ ಕಾರಣ ತಿಳಿದುಕೊಳ್ಳೋಣ. ಇದರಿಂದಾಗಿ ದುಷ್ಟಪರಿಣಾಮ ಇದೆಯೇ ಎಂದು ತಿಳಿಯೋಣ.
ಕೆಲವೊಮ್ಮೆ ಕಣ್ಣುಗಳ ಬಣ್ಣವು ಪ್ರೋಟೀನ್ ಸಾಂದ್ರತೆ ಮತ್ತು ಸುತ್ತಲಿನ ಬೆಳಕಿನ ಮೇಲೆ ಅವಲಂಬಿತವಾಗಿರುತ್ತದೆ. ಕೆಲವೊಮ್ಮೆ ಕಣ್ಣುಗಳ ಬಣ್ಣವು ಬದಲಾಗುತ್ತದೆ. ಅನೇಕ ಬಾರಿ ಮಕ್ಕಳು ನೀಲಿ ಕಣ್ಣುಗಳ ಜೊತೆಗೆ ಜನಿಸಿದರೆ ನಂತರ ಅದು ಕಂದು ಬಣ್ಣಕ್ಕೆ ತಿರುಗುತ್ತದೆ ಎಂಬುದಾಗಿದೆ.
ಸಂಶೋಧನೆ ಪ್ರಕಾರ ನಮ್ಮ ಕಣ್ಣುಗಳ ಬಣ್ಣವು ಜೀನ್ ಗಳಿಗೆ ಸಂಬಂಧಿಸಿದೆ. ಕಣ್ಣುಗಳ ಬಣ್ಣವನ್ನು ನಮ್ಮ ಮೆಲನಿನ್ ಅಂಶ ನಿರ್ಧರಿಸುತ್ತದೆ. ದೇಹದಲ್ಲಿ ಕಡಿಮೆ ಮೆಲನಿನ್ ಇದ್ದರೆ ಕಣ್ಣುಗಳ ಬಣ್ಣ ಹಸಿರು ಅಥವಾ ನೀಲಿ ಬಣ್ಣದಲ್ಲಿರುತ್ತದೆ. ಮೆಲನಿನ್ ಹೆಚ್ಚಾಗಿದ್ದರೆ ಕಣ್ಣುಗಳು ಕಂದು ಅಥವಾ ಕಪ್ಪು ಬಣ್ಣದಲ್ಲಿರುತ್ತದೆ ಎಂದು ಹೇಳಬಹುದು.
ಒಟ್ಟಿನಲ್ಲಿ ಕಣ್ಣುಗಳಲ್ಲಿ ಮೆಲನಿನ್ ಅಂಶದ ಆಧಾರದಲ್ಲಿ ಕೆಲವರ ಕಣ್ಣಿನ ಬಣ್ಣದಲ್ಲಿ ವ್ಯತ್ಯಾಸ ಕಂಡು ಬರುವುದು ಸಹಜವಾಗಿದೆ.