ಮಗು ಬಿಟ್ಟು ಮುಸ್ಲಿಂ ವ್ಯಕ್ತಿಯೊಂದಿಗೆ ಪರಾರಿಯಾದ ಮಹಿಳೆ ಪತ್ತೆ | ಪೊಲೀಸರಲ್ಲಿ ಹೇಳಿದ್ದೇನು?
ದಿನಂಪ್ರತಿ ಲವ್ ಜಿಹಾದ್ ಪ್ರಕರಣ ಎಗ್ಗಿಲ್ಲದೆ ನಡೆಯುತ್ತಿದ್ದು, ಪ್ರೀತಿ ಕುರುಡು…ಎಂಬ ಮಾತಿನಂತೆ ಮದುವೆಯಾಗಿ ಪುಟ್ಟ ಕಂದಮ್ಮ ಇದ್ದರೂ ಕೂಡ ರಾಯಚೂರಿನ ಹಿಂದು ಶಿಕ್ಷಕಿಯೊಬ್ಬರು ಮುಸ್ಲಿಂ ಸಮುದಾಯದ ಯುವಕನೊಂದಿಗೆ ಓಡಿ ಹೋಗಿದ್ದಾರೆ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ ಮತ್ತೊಂದು ಹೊಸ ವಿಚಾರ ಹೊರ ಬಿದ್ದಿದೆ.
ರಾಯಚೂರು ಶಿಕ್ಷಕಿ ಸುಹಾಸಿನಿ ನಾಪತ್ತೆ ಪ್ರಕರಣ (Teacher missing case)ವು ಹೊಸ ತಿರುವು ಪಡೆದುಕೊಂಡಿದ್ದು, ಪೋಷಕರಿಂದ ಮತಾಂತರ (Conversion), ಲವ್ ಜಿಹಾದ್ (Love jihad) ಅನುಮಾನ ದಟ್ಟವಾಗಿ ಮೂಡಿದೆ.
ಈ ಬಗ್ಗೆ ಶಿಕ್ಷಕಿಯ ನಾಪತ್ತೆ ಪ್ರಕರಣ ವೈರಲ್ ಆಗುತ್ತಿದ್ದಂತೆ, ಪೊಲೀಸರು ಕಾರ್ಯಾಚರಣೆ ನಡೆಸಿ ಶಿಕ್ಷಕಿಯನ್ನು ಒಂದೇ ದಿನದಲ್ಲಿ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಕ ಶಿಕ್ಷಿಯನ್ನು ಲವ್ ಜಿಹಾದ್ ಎಂಬ ಜಾಲದಿಂದ ಪಾರು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
10 ವರ್ಷಗಳ ಹಿಂದೆ ಲಿಂಗರಾಜ ಎಂಬವರ ಜೊತೆ ಸುಹಾಸಿನಿಯ ಮದುವೆಯಾಗಿದ್ದು, ಈಕೆ ಯರಮರಸ್ ಬಳಿಯ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಪ್ರೀತಿಯ ಬಲೆಗೆ ಬಿದ್ದ ಮೇಲೆ ಸುಹಾಸಿನಿಗೆ ತನ್ನ 7 ವರ್ಷದ ಪುಟ್ಟ ಮಗುವು ಕೂಡ ನೆನೆಪಿಗೆ ಬಾರದೆ ಇರುವ ವಿಚಾರ ನಿಜಕ್ಕೂ ಅಚ್ಚರಿ ಹಾಗೂ ವಿಷಾದನೀಯ.
ಯರಮರಸ್ ಕ್ಯಾಂಪ್ ನಿವಾಸಿ ಶಿಕ್ಷಕಿ ಸುಹಾಸಿನಿ (29) ಅ.20ರಂದು ಹೊರಗೆ ಹೋಗಿ ಬರುವುದಾಗಿ ಮನೆಯಿಂದ ಹೋದವಳು ನಾಪತ್ತೆಯಾಗಿದ್ದು, ಸಲೀಂ ಎಂಬ ಮುಸ್ಲಿಂ ಯುವಕನ ಜೊತೆ ಈಕೆ ಹೋಗಿರಬಹುದೆಂಬ ಅನುಮಾನ ಪೋಷಕರಲ್ಲಿ ದಟ್ಟವಾಗಿ ಕಾಡುತ್ತಿತ್ತು. ಸುಹಾಸಿನಿ ತಾಯಿ ನಿರ್ಮಲಾರವರು ಈ ಕುರಿತು ಗಂಭೀರ ಆರೋಪ ಕೂಡ ಮಾಡಿದ್ದರು. ಈ ಬಗ್ಗೆ ಭಜರಂಗದಳ ಹೋರಾಟಕ್ಕೆ ಇಳಿದಿತ್ತು. ಆರೋಪ ಸಂಬಂಧ ಸಲೀಂ ಶಿಕ್ಷಕಿಯನ್ನು ಕೊಂಡೊಯ್ದ ವಿಚಾರದ ಸತ್ಯ ಸತ್ಯತೆ ಯ ಜೊತೆಗೆ ಮತಾಂತರಕ್ಕೆ ಯತ್ನಿಸಿದ್ದು ನಿಜವೇ?? ಸದ್ಯ ಸಲೀಂ ಎಲ್ಲಿದ್ದಾನೆ ಎಂಬ ಮಾಹಿತಿಗಳು ಇನ್ನೂ ಬಹಿರಂಗವಾಗಿಲ್ಲ
ಸದ್ಯ ಶಿಕ್ಷಕಿಯನ್ನು ಪತ್ತೆಹಚ್ಚಿ ಕರೆತಂದ ಪೊಲೀಸರು, ಶಿಕ್ಷಕಿಯನ್ನು ಗೌಪ್ಯ ಸ್ಥಳದಲ್ಲಿ ಇರಿಸಿ ವಿಚಾರಣೆ ನಡೆಸುತ್ತಿದ್ದು, ಈ ವೇಳೆ ಕಳೆದ 25 ದಿನ ಆಂಧ್ರಪ್ರದೇಶದ ಮಂತ್ರಾಲಯದಲ್ಲಿ ಇದ್ದುದ್ದಾಗಿ ಹೇಳಿಕೆ ನೀಡಿದ್ದು, ಪತಿ ಲಿಂಗರಾಜು ಬಗ್ಗೆಯೂ ಹೇಳಿಕೊಂಡಿದ್ದಾಳೆ. ಇದೇ ವೇಳೆ ಮದುವೆಯಾಗಿ ಪತ್ನಿ, ಮಗಳಿರುವ ಸಲೀಂ ಜೊತೆಗಿನ ಒಡನಾಟದ ವಿಚಾರ ಪ್ರಸ್ತಾಪ ಮಾಡಿದ್ದಾಳೆ ಎನ್ನಲಾಗಿದೆ.
ಸದ್ಯ ಪೊಲೀಸರು ಶಿಕ್ಷಕಿಯ ಹೇಳಿಕೆಯನ್ನು ವಿಡಿಯೋ ರೆಕಾರ್ಡ್ ಮೂಲಕ ದಾಖಲು ಮಾಡಿಕೊಂಡಿದ್ದು, ಈ ಬಳಿಕ, ಪೊಲೀಸರು ಸುಹಾಸಿನಿಯನ್ನು ಪೋಷಕರಿಗೆ ಒಪ್ಪಿಸಿದ್ದು, ಪೋಷಕರು ಮಗಳ ಮನವೊಲಿಸಿ ಮನೆಗೆ ಕರೆದೊಯ್ದಿದ್ದಾರೆ.
ಶಿಕ್ಷಕಿ ಪತ್ತೆಯಾದ ವಿವರ ತಿಳಿಯುತ್ತಿದ್ದಂತೆ, ಹಿಂದು ಸಂಘಟನೆ ಕಾರ್ಯಕರ್ತರು ಠಾಣೆಗೆ ದೌಡಾಯಿಸಿದ್ದಾರೆ. ಹಿಂದೂ ಮಹಿಳೆಯರ ದೌರ್ಬಲ್ಯವನ್ನು ಅಸ್ತ್ರವಾಗಿ ಬಳಸಿಕೊಂಡು, ಲವ್ ಜಿಹಾದ್ ಮಾಡಲಾಗುತ್ತಿದೆ ಎಂದು ಈ ಸಂದರ್ಭದಲ್ಲಿ ಆರೋಪಿಸಿದ್ದಾರೆ. ಅಲ್ಲದೆ, ಹಿಂದೂ ಮಹಿಳೆಯರು ಇನ್ನಾದರೂ ಎಚ್ಚೆತ್ತುಕೊಳ್ಳುವಂತೆ ಆಗ್ರಹಿಸಿದ ಹಿಂದು ಜನ ಜಾಗೃತಿ ಸಮೀತಿ ಕಾರ್ಯಕರ್ತೆ ಸುವರ್ಣ, ಮೊಬೈಲ್, ಸ್ನೇಹದ ಮೂಲಕ ಹಿಂದೂ ಯುವತಿ, ಮಹಿಳೆಯರನ್ನು ತಮ್ಮತ್ತ ಸೆಳೆಯುತ್ತಿದ್ದಾರೆ. ಇದಕ್ಕಾಗಿಯೇ ಒಂದು ತಂಡ ಇದ್ದು, ಈ ತಂಡವು ಮಹಿಳೆಯರ ಆರ್ಥಿಕ ಸ್ಥಿತಿಗತಿ ಇತ್ಯಾದಿ ದುರ್ಬಲತೆಗಳನ್ನು ನೋಡಿ ಲವ್ ಜಿಹಾದ್ ಬಲೆಗೆ ಹಾಕಿಕೊಳ್ಳುತ್ತಾರೆ ಎಂದು ಆರೋಪಿಸಿದ್ದಾರೆ.