‘ಫ್ರಂಟ್ ಲೈನ್’ ನಲ್ಲಿ ಇತಿಹಾಸ ಸೃಷ್ಟಿಸಿದ ಕಾಂತಾರ !

ಕಾಂತಾರ ಸಿನೆಮಾ ಎಲ್ಲೆಡೆ ಪ್ರಖ್ಯಾತಿ ಪಡೆದದ್ದಲ್ಲದೆ, ತನ್ನ ಹವಾ ಎಷ್ಟರಮಟ್ಟಿಗೆ ಕಾಯ್ದು ಕೊಂಡಿದೆ ಎಂಬುದಕ್ಕೆ ಜೀವಂತ ದೃಷ್ಟಾಂತ ಎಂಬಂತೆ ಅಂತಾರಾಷ್ಟ್ರೀಯ ಪ್ರತಿಷ್ಠಿತ ಫ್ರಂಟ್‍ಲೈನ್ ಮ್ಯಾಗಜಿನ್‍ನಲ್ಲಿ ತನ್ನ ಸ್ಥಾನವನ್ನು ಪಡೆದುಕೊಂಡು ಜಗತ್ತಿನ ಹೆಮ್ಮೆಯ ಗರಿಯನ್ನು ತನ್ನತ್ತ ಬಾಚಿಕೊಂಡಿದೆ.

ಹೌದು!! ಕಾಂತಾರ ಸಿನಿಮಾ ವಿಶ್ವದಾದ್ಯಂತ ತನ್ನ ಪ್ರಸಿದ್ದಿ ಯ ಅಲೆಯನ್ನು ಪಡೆದುಕೊಂಡಿದ್ದು, ಇದೀಗ ಅಂತಾರಾಷ್ಟ್ರೀಯ ಪ್ರತಿಷ್ಠಿತ ಫ್ರಂಟ್‍ಲೈನ್ ಮ್ಯಾಗಜಿನ್‍ನಲ್ಲಿ ಕನ್ನಡದ ಸೂಪರ್‍ಹಿಟ್ ಚಲನಚಿತ್ರ ಕಾಂತಾರಾದ ಸ್ಟಿಲ್ ಅನ್ನು ಕವರ್ ಪೇಜ್‍ನಲ್ಲಿ ಬಳಸಲಾಗಿದೆ. ಕವರ್ ಪೇಜ್ ಬಳಸಿದ್ದು, ಮಾತ್ರವಲ್ಲದೇ, ಫೋಟೋ ಬಳಸುವುದರ ಜೊತೆಗೆ ‘ಅದ್ಭುತ ಕಾಂತಾರ’ ಎಂಬ ಶೀರ್ಷಿಕೆಯಡಿ ಮುಖಪುಟದಲ್ಲಿ ಕಾಂತಾರ ಚಿತ್ರವನ್ನು ಬಳಸಿಕೊಂಡಿರುವುದು ಕನ್ನಡ ಹಾಗೂ ಕನ್ನಡ ಚಿತ್ರರಂಗದ ಸಿನಿಮಾ ಕಾಂತಾರಕ್ಕೆ ಸಂದ ಗೌರವ ಎಂದರು ತಪ್ಪಾಗದು!!!..

1984ರಿಂದ ಈವರೆಗೆ ಯಾವುದೇ ಕನ್ನಡ ಚಿತ್ರದ ಫೋಟೋಗಳು ಫ್ರಂಟ್‍ಲೈನ್ ಮ್ಯಾಗಜಿನ್‍ನ ಮುಖಪುಟದಲ್ಲಿ ಬಂದಿರಲಿಲ್ಲ ಎನ್ನುವುದು ವಿಶೇಷ ಅಲ್ಲದೆ, ಕಾಂತಾರ ಸಿನಿಮಾದ ಪೋಸ್ಟರ್ ಫ್ರಂಟ್ ಲೈನ್ ಮ್ಯಾಗಜಿನ್ ನಲ್ಲಿ ರಾರಾಜಿಸಿದ್ದು ಮತ್ತೊಂದು ವಿಶೇಷ.

ಕನ್ನಡ ಸಿನಿಮಾವೊಂದರು ದೇಶದ ಬಹುತೇಕ ಭಾಷೆಗಳಲ್ಲಿ ಯಶಸ್ಸು ಕಂಡಿದ್ದು ತೀರಾ ಕಡಿಮೆ. ಇತ್ತೀಚಿನ ದಿನಗಳಲ್ಲಿ ಕೆಜಿಎಫ್ 2 ಸಿನಿಮಾ ರಿಲೀಸ್ ಆದ ಅಷ್ಟೂ ಭಾಷೆಗಳಲ್ಲೂ ಕೂಡ ಹೆಸರು ಗಳಿಸಿ ಕಮಾಯಿ ಮಾಡಿತ್ತು. ಈ ಬಳಿಕನ ಆ ಸ್ಥಾನವನ್ನು ಕಾಂತಾರ ವಶ ಪಡಿಸಿಕೊಂಡಿದೆ. ಇಷ್ಟೇ ಅಲ್ಲದೆ ಈ ಸಿನಿಮಾದ ಯಶಸ್ಸು ರಿಷಬ್ ಶೆಟ್ಟಿಗೂ ನ್ಯಾಷನಲ್ ಸ್ಟಾರ್ ಪಟ್ಟ ತಂದು ಕೊಟ್ಟಿದ್ದಂತು ಸುಳ್ಳಲ್ಲ.ಕಾಂತಾರ ಸಿನಿಮಾ ಈವರೆಗೂ ಅಂದಾಜು 350 ಕೋಟಿ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದ್ದು, ಕರ್ನಾಟಕವೊಂದರಲ್ಲಿ ಅದು 150 ಕೋಟಿಗೂ ಹೆಚ್ಚು ಗಳಿಕೆ ಮಾಡಿದ್ದಲ್ಲದೆ, ಬಹುಬಾಷೆಗಳಲ್ಲಿ ರಿಲೀಸ್ ಆಗಿ ಪ್ರತಿ ಬಾಕ್ಸ್ ಆಫಿಸ್ ನಲ್ಲಿ ಎಲ್ಲ ದಾಖಲೆಗಳನ್ನೂ ಪುಡಿ ಮಾಡಿದೆ. ಇನ್ನೇನು ಸದ್ಯದಲ್ಲೇ ಬಾಲಿವುಡ್ ನಲ್ಲೂ 100 ಕೋಟಿ ಕ್ಲಬ್ ಸೇರಲಿದೆ ಎನ್ನಲಾಗುತ್ತಿದೆ.

ಮಲಯಾಳಂನಲ್ಲಿ ಈ ಸಿನಿಮಾವನ್ನು ಪೃಥ್ವಿರಾಜ್ ಸುಕುಮಾರನ್ ವಿತರಣೆ ಮಾಡಿದ್ದು, ಅಂದಾಜು 20 ಕೋಟಿ ಗಳಿಕೆ ಮಾಡಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ತೆಲುಗಿನಲ್ಲೂ ಈ ಸಿನಿಮಾ ಭರ್ಜರಿ ಕಮಾಯಿ ಮಾಡಿದ್ದು, ಅಲ್ಲಿಯೂ 40 ಕೋಟಿಗೂ ಅಧಿಕ ಹಣ ಬಾಕ್ಸ್ ಆಫೀಸಿಗೆ ಹರಿದು ಬಂದಿದೆ, ಅಲ್ಲು ಅರ್ಜುನ್ ತಂದೆ ಈ ಸಿನಿಮಾವನ್ನು ತೆಲುಗಿನಲ್ಲಿ ವಿತರಿಸಿದ್ದು, ಭಾರೀ ಲಾಭವನ್ನೇ ಮಾಡಿಕೊಂಡಿದ್ದರೆಂಬ ಸುದ್ದಿ ಹರಿದಾಡಿ, ಹಾಗಾಗಿಯೇ ರಿಷಬ್ ಶೆಟ್ಟಿಗೆ ಅವರು ಓಪನ್ನಾಗಿಯೇ ಆಹ್ವಾನ ನೀಡಿದ್ದು, ಮುಂದಿನ ತಮ್ಮ ಬ್ಯಾನರ್ ಸಿನಿಮಾದಲ್ಲಿ ನಟಿಸುವಂತೆ ಕೇಳಿಕೊಂಡಿರುವ ಕುರಿತು ಊಹಾಪೋಹಗಳು ಕೂಡ ನಡೆಯುತ್ತಿದೆ.

ಕಾಂತಾರ ಸಿನಿಮಾದ ಒಟ್ಟು ಬಜೆಟ್ ಕೇರಳವೊಂದರಲ್ಲೇ ವಾಪಸ್ಸಾಗಿ, ಮೂರ್ನಾಲ್ಕು ಕೋಟಿ ರೂಪಾಯಿ ಲಾಭ ತಂದಿದೆ ಎಂದು ಲೆಕ್ಕಾಚಾರ ಹಾಕಲಾಗುತ್ತಿದ್ದು, ಇನ್ನೂ ಈ ಸಿನಿಮಾ ಕುಟುಂಬ ಸಮೇತ ನೋಡುವ ಜೊತೆಗೆ ಕರವಳಿಯ ಕಲೆ ಆಚರಣೆಯ ಬಿಂಬಿಸಿ , ತುಳುನಾಡಿನ ಕಲೆಯ ಕಂಪನ್ನು ಎಲ್ಲೆಡೆ ಹಬ್ಬಿಸಿದೆ .

Leave A Reply

Your email address will not be published.