ಭಾರತದಲ್ಲಿ ದೇವರ ಮೇಲಿನ ನಂಬಿಕೆಯ ಆಸರೆಯಲ್ಲಿ ಬದುಕು ನಡೆಸುತ್ತಾ, ಸಂಸ್ಕೃತಿ ಬೆಳೆಸುವ ಜನರಿಗೆ ಮತ್ತು ಮಣ್ಣಿಗೆ ಇಡೀ ಪ್ರಪಂಚದ ಮನ್ನಣೆ ದೊರಕಿದೆ. ಮತ್ತು ದೇವರ ಮೇಲಿನ ನಂಬಿಕೆ ಎಲ್ಲರಿಗೂ ಒಂದೇ. ಆದರೆ ಪೂಜಿಸುವ ವಿಧಾನಗಳು ವಿಭಿನ್ನ ಆಗಿರಬಹುದು ಅಷ್ಟೇ. ದೇವರನ್ನು ಹೀಗೆಯೇ ಪೂಜಿಸಬೇಕು ಎಂದು ದೇವರೇ ಬಂದು ಹೇಳದಿದ್ದರೂ ಸಹ ಅನಾಧಿಕಾಲದಿಂದ ಬಂದ ಸಂಪ್ರದಾಯ ಪದ್ಧತಿಗಳ ಆಧಾರದಲ್ಲಿ ಇಂದಿನ ಪೀಳಿಗೆಯವರು ದೇವರ ಪೂಜೆಗಳನ್ನು ಮಾಡುವುದು ರೂಢಿ ಆಗಿದೆ.
ಈಗಾಗಲೇ ಪ್ರಸಿದ್ಧಿ ಪಡೆದಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ದರ್ಶನ ಮಾಡಲು ಯೋಚಿಸಿದ್ದರೆ ಇಲ್ಲೊಮ್ಮೆ ಗಮನಿಸಿ.
ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ನವೆಂಬರ್ 21ರಿಂದ ನಡೆಯಲಿರುವ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಸಲುವಾಗಿ ಪೂರ್ವಭಾವಿ ಸಭೆಯಲ್ಲಿ ಹಲವು ನಿರ್ಧಾರ ಕೈಗೊಳ್ಳಲಾಗಿದೆ .
- ಚಂಪಾಷಷ್ಠಿ ಕೊರೋನಾ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಿಂದ ನಿರ್ಬಂಧಿಸಲಾಗಿದ್ದ ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿನ ಚಂಪಾ ಷಷ್ಠಿಯ ಎಡೆಸ್ನಾನ ಸೇವೆಗೆ ಈ ಬಾರಿ ಅವಕಾಶ ನೀಡಲಾಗಿದೆ.
- ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನವೆಂಬರ್ 20 ರಂದು ಬೆಳಗ್ಗೆಯಿಂದ ಮಧ್ಯಾಹ್ನ 2 ಗಂಟೆಯವರೆಗೂ ದರ್ಶನವನ್ನು ನಿರ್ಬಂಧಿಸಲಾಗಿದೆ. ನವೆಂಬರ್ 20ರಂದು ಚಂಪಾಷಷ್ಠಿ ವಾರ್ಷಿಕ ಮೂಲಮೃತ್ತಿಕೆಯ ಪ್ರಸಾದ ತೆಗೆಯುವ ಆಚರಣೆ ನಡೆಸಲಾಗುತ್ತದೆ. ಈ ಕಾರಣಕ್ಕೆ ನವೆಂಬರ್ 20ರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ದರ್ಶನ ಇರುವುದಿಲ್ಲ. ಮಧ್ಯಾಹ್ನ 2 ಗಂಟೆಯ ನಂತರವಷ್ಟೇ ದೇವರ ದರ್ಶನ ಲಭ್ಯವಾಗಲಿದೆ. • ನವೆಂಬರ್ 23ರಂದು ನಡೆಯಲಿರುವ ಲಕ್ಷದೀಪೋತ್ಸವ ಸಮಯದಲ್ಲಿ ಕುಣಿತಾ ಭಜನೋತ್ಸವ ಅದ್ಧೂರಿಯಾಗಿ ನಡೆಯಲಿದೆ. ಸುಮಾರು ಒಂದು ಸಾವಿರ ತಂಡಗಳು ಕುಣಿಯುತ್ತಾ ನಡೆಸುವ ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಹೊಂದಲಾಗಿದೆ. ಅದಕ್ಕಾಗಿ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಆಸಕ್ತ ತಂಡಗಳು ಭಜನಾ ಕುಣಿತದಲ್ಲಿ ಭಾಗವಹಿಸಲು ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ.
- ನವೆಂಬರ್ 23 ರ ಲಕ್ಷದೀಪೋತ್ಸವದ ದಿನ ಸಂಜೆ 7ರಿಂದ ರಾಜಗೋಪುರದ ಬಳಿಯಿಂದ ರಥಬೀದಿ, ಅಡ್ಡಬೀದಿ ಕಾಶಿಕಟ್ಟೆಯಾಗಿ ಕುಮಾರಧಾರದವರೆಗೆ ಕುಣಿತ ಭಜನೆ ಸಂಭ್ರಮವನ್ನು ವಿಶೇಷವಾಗಿ ಹಮ್ಮಿಕೊಳ್ಳಲಾಗಿದೆ.
- ಕುಣಿತಾ ಭಜನೋತ್ಸವದಲ್ಲಿ ಸುಮಾರು 1,000 ತಂಡಗಳು ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ. ಖ್ಯಾತ ಗಾಯಕ ಜಗದೀಶ ಆಚಾರ್ಯ ಪುತ್ತೂರು ಅವರು ಸಹ ಭಾಗವಹಿಸಲಿದ್ದಾರೆ.
- ಕುಣಿತಾ ಭಜನೋತ್ಸವದಲ್ಲಿ ಸಾರ್ವಜನಿಕರಲ್ಲದೇ ರಾಜ್ಯಾದ್ಯಂತ ಭಕ್ತರು ಸೇವೆ ನೆರವೇರಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ಪ್ರತಿಯೊಂದು ತಂಡದಲ್ಲಿ ಗರಿಷ್ಟ 10 ಮಂದಿಗಷ್ಟೇ ಅವಕಾಶವಿರಲಿದೆ.
- ಕುಣಿತಾ ಭಜನೋತ್ಸವದಲ್ಲಿ ಪಾಲ್ಗೊಳ್ಳುವ ಆಸಕ್ತರಿರುವ ತಂಡಗಳು ನವೆಂಬರ್ 20ರ ಒಳಗಾಗಿ ಕುಕ್ಕೆ ದೇಗುಲದ ಕಚೇರಿಯಲ್ಲಿ ಹೆಸರು ನೋಂದಾಯಿಸಬೇಕಾಗುತ್ತದೆ.
- ಇದರ ಜೊತೆಗೆ ಬೀದಿ ಉರುಳು ಸೇವೆ ಮಾಡುವವರಿಗೆ ನವೆಂಬರ್ 23 ರ ಲಕ್ಷದೀಪೋತ್ಸವದ ದಿನದಂದು ರಾತ್ರಿ ರಥೋತ್ಸವದ ಬಳಿಕ ಸಂಜೆ 5ರಿಂದ ಬೆಳಗ್ಗೆ 6 ಗಂಟೆವರೆಗೆ ಅವಕಾಶ ನೀಡುವ ಬಗ್ಗೆ ಆಡಳಿತ ವರ್ಗದಲ್ಲಿ ಚರ್ಚೆ ನಡೆದಿದೆ.
ಒಟ್ಟಿನಲ್ಲಿ ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ನವೆಂಬರ್ 23 ರ ಲಕ್ಷದೀಪೋತ್ಸ ದಿನದಂದು ನಿರಂತರ ಕುಣಿತಾ ಭಜನೆ ವಿಶೇಷ ಮೆರುಗು ನೀಡಲಿದೆ. ಹಾಗೂ ಭಕ್ತಾದಿಗಳು ಉತ್ಸವದಲ್ಲಿ ಪಾಲ್ಗೊಂಡು ದೇವಸ್ಥಾನದ ರೀತಿ ನಿಯಮಗಳನ್ನು ಪಾಲಿಸಬೇಕಾಗಿ ಆಡಳಿತ ವರ್ಗ ಭಕ್ತಾದಿಗಳಿಗೆ ಈ ಮೂಲಕ ಮಾಹಿತಿ ನೀಡಿರುತ್ತಾರೆ