ಅರೇ!!! ಈ ಆಹಾರ ಆರ್ಡರ್ ಮಾಡಿದರೆ ಕಮ್ಮಿ ಎಂದರೂ 30ವರ್ಷ ಕಾಯಲೇಬೇಕು!!!

ನೀವು ಹೋಟೆಲಿಗೆ ಹೋಗುತ್ತೀರಿ ಎಂದಿಟ್ಟುಕೊಳ್ಳಿ!! ಯಾವುದಾದರೂ ಆಹಾರ ಆರ್ಡರ್ ಮಾಡಿ ಹೆಚ್ಚು ಎಂದರೆ ಒಂದು ಗಂಟೆ ಕಾಯಬಹುದು .. ಅದಕ್ಕಿಂತಲೂ ಹೆಚ್ಚು ಕಾಯುವ ಸಂದರ್ಭ ಬಂತು ಎಂದರೆ ಹೇಗಿರಬಹುದು ನಿಮ್ಮ ಪರಿಸ್ಥಿತಿ..ಕೋಪ ನೆತ್ತಿಗೇರುವುದರಲ್ಲಿ ಸಂಶಯವಿಲ್ಲ!! ಆದರೆ,ಇಲ್ಲೊಂದು ಕಡೆ ನೀವು ಅಹಾರ ಆರ್ಡರ್ ಮಾಡಿ ಆಹಾರ ಪಡೆಯುವಷ್ಟರಲ್ಲಿ ನಿಮ್ಮ ಅರ್ಧ ಪಾಲು ಜೀವನ ಸವೆಸಿಬಿಡಬಹುದೇನೋ!!


Ad Widget

Ad Widget

Ad Widget

Ad Widget
Ad Widget

Ad Widget


ಹೌದು!! ಗಂಟೆಗಳ ಕಾಲ ಕಾಯುವುದೇ ದೊಡ್ಡ ಸಾಹಸ..ಅಂತಹದರಲ್ಲಿ ಗಂತೆಗಿಂತಲೂ ಹೆಚ್ಚೆಂದರೆ ಅಚ್ಚರಿಯಾಗಬಹುದು!!!.
ಜಪಾನ್ ನಲ್ಲಿ ಆಹಾರಕ್ಕೆ ಆರ್ಡರ್​ ಮಾಡಿದರೆ ಅಬ್ಬಬ್ಬಾ ಎಂದರೆ ಒಂದು ಗಂಟೆ ಕಾಯಬಹುದು ಅಲ್ಲವೆ? ಆದರೆ ಇಲ್ಲೊಂದು ಕಡೆ ನೀವು ಅಹಾರ ಆರ್ಡರ್​ ಮಾಡಿದರೆ ಗಂಟೆ, ದಿನ ಅಲ್ಲ.ಬರೋಬ್ಬರಿ 30 ವರ್ಷ ಕಾಯಬೇಕು !


Ad Widget

ಪಶ್ಚಿಮ ಜಪಾನ್‌ನ ಹ್ಯೊಗೊ ಪ್ರಿಫೆಕ್ಚರ್‌ನಲ್ಲಿರುವ ಟಕಾಸಾಗೊ ನಗರದಲ್ಲಿ ಕುಟುಂಬ ನಡೆಸುತ್ತಿರುವ ಮಾಂಸದ ಅಂಗಡಿಯಾದ ಅಸಹಿಯಾದಿಂದ ಗ್ರಾಹಕರು ಆರ್ಡರ್ ಮಾಡಿದರೆ ಫ್ರೀಜ್ ಮಾಡಿದ ಕೋಬ್ ಬೀಫ್ ಕ್ರೋಕೆಟ್‌ಗಳನ್ನು ಸ್ವೀಕರಿಸಲು ಮೂರು ದಶಕಗಳವರೆಗೆ ಕಾಯಬೇಕಾಗುತ್ತದೆ .

ಅಂಗಡಿಯು 1926 ರಿಂದ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದು, ಜಾಗತಿಕ ಯುದ್ಧ II ರ ನಂತರದ ಮೆನುವಿನಲ್ಲಿ ಕೋಬ್ ಬೀಫ್ ಕ್ರೋಕ್ವೆಟ್‌ ಅಡುಗೆಯನ್ನು ಸೇರಿಸಲಾಗಿದೆ. ಈ ಬಳಿಕ ಈ ಅಂಗಡಿಯ ಉತ್ತಮ ಆಹಾರವನ್ನು ಒದಗಿಸುತ್ತ ಬಂದಿದ್ದು, 2000 ರ ದಶಕದ ಆರಂಭದಲ್ಲಿ ಈ ಮೆನುವಿಗೆ ಡೀಪ್-ಫ್ರೈಡ್ ಆಲೂಗಡ್ಡೆ ಮತ್ತು ಬೀಫ್ ಡಂಪ್ಲಿಂಗ್‌ಗಳು ಸೇರ್ಪಡೆಯಾಗಿದ್ದು ಮಾತ್ರವಲ್ಲದೇ, ಇದನ್ನು ಸವಿಯಲು ಜನರು ಕಿಲೋ ಮೀಟರ್​ ಉದ್ದದ ಕ್ಯೂ ನಿಲ್ಲುತ್ತಿದ್ದ ಇತಿಹಾಸವು ಇದೆ.

ಇದೀಗ ಈ ವರ್ಷದ ಏಪ್ರಿಲ್‌ನಲ್ಲಿ, ಟ್ವಿಟರ್ ಬಳಕೆದಾರರು ತಮ್ಮ ಕ್ರೋಕೆಟ್‌ಗಳ ಆರ್ಡರ್‌ನ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಪಾರ್ಸೆಲ್‌ಗೆ ಶೀರ್ಷಿಕೆ ನೀಡಿ, “ನಾನು 9 ವರ್ಷಗಳ ಹಿಂದೆ ಆರ್ಡರ್ ಮಾಡಿದ ನನ್ನ ಕ್ರೋಕೆಟ್‌ಗಳು ಬಂದಿವೆ” ಎಂದು ಬರೆದುಕೊಂಡಿದ್ದು, ಅವರು ಸೆಪ್ಟೆಂಬರ್ 8, 2013 ರಂದು ಆರ್ಡರ್ ಕೊಟ್ಟಿದ್ದು ಬರೋಬ್ಬರಿ ಸುಮಾರು ಏಳೂವರೆ ವರ್ಷಗಳ ಕಾಲ ಆರ್ಡರ್ ಗಾಗಿ ಕಾದಿದ್ದಾರೆ.

ಇದಲ್ಲದೆ, ಕ್ರೋಕ್ವೆಟ್‌ಗಳನ್ನು ತಯಾರಿಸಲು ಅಸಹಿಯಾಗೆ ಅಗತ್ಯವಿರುವ ಆಲೂಗಡ್ಡೆ ಹಾಗೂ ಮೂರು ವರ್ಷದ A5-ಶ್ರೇಣಿಯ ಕೋಬ್ ಗೋಮಾಂಸ ಸಿಗಲು ವಿಳಂಬ ಆಗುವ ಕಾರಣದಿಂದ ಮೂವತ್ತು ವರ್ಷವಾದರೂ ಕಾಯುವುದು ಅನಿವಾರ್ಯವೆಂದು ಹೇಳಲಾಗುತ್ತದೆ. ಇದರ ನಡುವೆ ಜನರ ಆರ್ಡರ್​ಗಳು ಈಗಾಗಲೇ ಹೆಚ್ಚಿರುವ ಕಾರಣದಿಂದ 2016ರಿಂದ ಆರ್ಡರ್​ ತೆಗೆದುಕೊಳ್ಳುವುದನ್ನು ನಿಲ್ಲಿಸಲಾಗಿದೆಯೆಂದು ಹೇಳಲಾಗುತ್ತಿದೆ.

error: Content is protected !!
Scroll to Top
%d bloggers like this: