BBK9 : ಬಿಗ್ ಬಾಸ್ ನಲ್ಲಿ ಅರುಣ್ ಸಾಗರ್ ಕೈ ಬೆರಳಿಗೆ ಹಾನಿ | ಆಪರೇಷನ್ ನಂತರ ದೊಡ್ಮನೆಗೆ ಮರಳಿದ ನಟ!

Share the Article

ಬಿಗ್ಬಾಸ್ ಮನೆಯಲ್ಲಿ ಒಂದಿಲ್ಲೊಂದು ಘಟನೆಗಳು ನಡೆಯುತ್ತಲೇ ಇರುತ್ತವೆ. ಈ ಬಾರಿ ಬಿಗ್ ಬಾಸ್ ಮನೆ ಮಂದಿಗೆಲ್ಲಾ ಗೊಂಬೆ ತಯಾರಿಸುವ ಟಾಸ್ಕ್ ಕೊಟ್ಟಿದ್ದರು. ಈ ವಿಷಯವಾಗಿ ಮನೆ ರಣರಂಗವಾಗಿತ್ತು. ಈ ಟಾಸ್ಕ್ ಬಳಿಕ ರಾಜಣ್ಣ ತಮ್ಮ ಬ್ರೇಸ್ಲೆಟ್ ಮತ್ತು ಉಂಗುರವನ್ನು ಕಳೆದುಕೊಂಡು ಪರದಾಡಿದ್ದರು. ಅಷ್ಟೇ ಅಲ್ಲದೆ, ಗೊಂಬೆ ತಯಾರಿಸುವ ಟಾಸ್ಕ್‌ನಲ್ಲಿ ಅರುಣ್ ಸಾಗರ್ ನ ಕೈ ಬೆರಳಿಗೆ ಪೆಟ್ಟಾಗಿದ್ದು, ಇದೀಗ ಆಪರೇಷನ್ ಕೂಡ ಮಾಡಲಾಗಿದೆ.

ದೊಡ್ಮನೆ ಇದೀಗ ಎಂಟನೇ ವಾರಕ್ಕೆ ಕಾಲಿಟ್ಟಿದೆ. ಸಾಕಷ್ಟು ತಿರುವುಗಳೊಂದಿಗೆ ಮುನ್ನಗ್ಗುತ್ತಿರುವ ಬಿಗ್ ಬಾಸ್ ಶೋನಲ್ಲಿ ಇದೀಗ ಟಾಸ್ಕೊಂದರ ವೇಳೆ ಅರುಣ್ ಸಾಗರ್‌ ಕೈ ಗೆ ಪೆಟ್ಟಾಗಿದೆ. ಬಿಗ್ ಬಾಸ್ ಟಾಯ್ ಫ್ಯಾಕ್ಟರಿ ಎಂಬ ಟಾಸ್ಕ್ ಕೊಟ್ಟಿದ್ದರು. ಈ ಟಾಸ್ಕ್‌ನಲ್ಲಿ ಗೊಂಬೆಗಳನ್ನು ತಯಾರಿಸಲು ಕನ್ವೇಯರ್ ಬೆಲ್ಟ್‌ನಿಂದ ಸಾಮಾಗ್ರಿಗಳನ್ನು ಪಡೆಯಬೇಕಿತ್ತು.

ಹೀಗಾಗಿ ಸಾಮಾಗ್ರಿಗಳನ್ನು ಪಡೆಯಲು ಎರಡೂ ತಂಡಗಳ ನಡುವೆ ಜಿದ್ದಾಜಿದ್ದಿ ಪ್ರಾರಂಭವಾಗಿದೆ. ಸಾಮಾಗ್ರಿಗಳಿಗಾಗಿ ಎರಡೂ ತಂಡದ ಸದಸ್ಯರ ನಡುವೆ ಕಿತ್ತಾಟ, ನೂಕಾಟ,ಅರಚಾಟ,ಕಿರಿಚಾಟ ಎಲ್ಲಾ ನಡೆಯಿತು. ಈ ಮಧ್ಯೆ ಒಮ್ಮೆ ಪ್ರಶಾಂತ್ ಸಂಬರ್ಗಿ ಅವರಿಂದಾಗಿ ಅರುಣ್ ಸಾಗರ್ ಕೆಳಗೆ ಬಿದ್ದರು. ಮತ್ತೊಮ್ಮೆ ಅವರ ಕೈಗೆ ಪೆಟ್ಟು ಬಿದ್ದಿದೆ. ಬಲಗೈಯ ಕಿರುಬೆರಳಿಗೆ ಪೆಟ್ಟು ಬಿದ್ದ ಕಾರಣ ಅರುಣ್ ಸಾಗರ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಚಿಕಿತ್ಸೆ ಅವಶ್ಯವಾಗಿತ್ತು ಆ ಕಾರಣ ಒಂದು ದಿನ ಆಸ್ಪತ್ರೆಯಲ್ಲೇ ಅರುಣ್ ಸಾಗರ್ ಉಳಿದಿದ್ದರು. ಹಾಗಾಗಿ ಕೊನೆಯ ದಿನದ ಟಾಸ್ಕ್‌ನಲ್ಲಿ ಅವರು ಭಾಗವಹಿಸಲಾಗಲಿಲ್ಲ. ಸದ್ಯ ಚಿಕಿತ್ಸೆ ಪೂರ್ಣಗೊಂಡು ಬಿಗ್ ಬಾಸ್ ಮನೆಗೆ ಅರುಣ್ ಸಾಗರ್ ವಾಪಸ್ ಆಗಿದ್ದಾರೆ. ತಮ್ಮ ಕೈಗೆ ಆಪರೇಷನ್ ಮಾಡಲಾಗಿದೆ ಎಂದು ಅರುಣ್ ಸಾಗರ್ ಮನೆಮಂದಿಗೆಲ್ಲಾ ತಿಳಿಸಿದ್ದಾರೆ. ಸದ್ಯಕ್ಕೆ ಟಾಸ್ಕ್‌ನಿಂದ ದೂರವಿದ್ದು, ದೊಡ್ಮನೆಯಲ್ಲಿ ಅರುಣ್ ಸಾಗರ್ ವಿಶ್ರಾಂತಿ ಪಡೆಯುತ್ತಿದ್ದಾರೆ.

Leave A Reply

Your email address will not be published.