ಅರಶಿನದಿಂದಲೂ ಕಡಿಮೆ ಮಾಡಿಕೊಳ್ಳಬಹುದು ದೇಹದ ತೂಕ!!
“ಆರೋಗ್ಯವೇ ಸಂಪತ್ತು” ಎಂಬುದು ಸಂಪೂರ್ಣವಾಗಿ ನಿಜ. ಏಕೆಂದರೆ, ನಮ್ಮ ದೇಹವು ನಮ್ಮ ಎಲ್ಲಾ ಒಳ್ಳೆಯ ಮತ್ತು ಕೆಟ್ಟ ಸಂದರ್ಭಗಳಲ್ಲಿ ನಮ್ಮೊಂದಿಗೆ ಇರುತ್ತದೆ. ನಮ್ಮ ಕೆಟ್ಟ ಸಮಯದಲ್ಲಿ ಈ ಜಗತ್ತಿನಲ್ಲಿ ಯಾರೂ ನಮಗೆ ಸಹಾಯ ಮಾಡಲು ಸಾಧ್ಯವಿಲ್ಲ, ಆದ್ದರಿಂದ, ನಾವು ಉತ್ತಮ ಆರೋಗ್ಯವನ್ನು ಹೊಂದಿದ್ದರೆ, ನಮ್ಮ ಜೀವನದಲ್ಲಿ ಯಾವುದೇ ಕೆಟ್ಟ ಪರಿಸ್ಥಿತಿಯನ್ನು ನಾವು ಎದುರಿಸಬಹುದು.
ಆದರೆ, ಅದೆಷ್ಟೋ ಜನರಿಗೆ ಎಷ್ಟು ಆಹಾರ ಕ್ರಮ ಅನುಸರಿಸಿದರು ಅವರ ತೂಕ ಹೆಚ್ಚಾಗಿ ಇರುತ್ತದೆ. ಹೀಗಾಗಿ ಹೇಗಪ್ಪಾ ಕಡಿಮೆ ಮಾಡಿಕೊಳ್ಳೋದು ಎಂದು ಪರದಾಡುತ್ತಾ ಇರುತ್ತಾರೆ. ಅಂತವರಿಗಾಗಿ ನಾವು ನೀಡುತ್ತೇವೆ ನೋಡಿ ಸುಲಭವಾದ ಟಿಪ್ಸ್.
ಪ್ರತಿ ಮನೆಯ ಅಡಿಗೆ ಕೊನೆಯಲ್ಲೂ ಅರಿಶಿನವನ್ನು ಬಳಸಿಯೇ ಬಳಸುತ್ತಾರೆ. ಆಹಾರಕ್ಕೆ ಬಣ್ಣ ನೀಡಲು ಬಳಸಲಾಗುತ್ತದೆ, ಆದರೆ ಅರಿಶಿನ ಸೇವನೆಯು ಕೇವಲ ಅಡುಗೆಗೆ ಅಲ್ಲದೆ ಆರೋಗ್ಯಕ್ಕೆ ಸಹ ಪ್ರಯೋಜನಕಾರಿಯಾಗಿದೆ. ಅಷ್ಟೇ ಅಲ್ಲದೆ ತೂಕವನ್ನು ಕಡಿಮೆ ಮಾಡಲು ಅರಿಶಿನವನ್ನು ಸಹ ಬಳಸಲಾಗುತ್ತದೆ.
ಹೌದು ನೀವು ನಿಮ್ಮ ತೂಕವನ್ನು ಕಡಿಮೆ ಮಾಡಲು ಬಯಸಿದರೆ, ಅರಿಶಿನವನ್ನು ಬಳಸಿ. ಅರಿಶಿನವು ನಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಬೊಜ್ಜು ಇರುವವರಿಗೆ ಮಧುಮೇಹ ಬರುವ ಅಪಾಯ ಹೆಚ್ಚು, ನೀವು ಅರಿಶಿನವನ್ನು ಸೇವಿಸಿದರೆ ಅದು ನಿಮಗೆ ಪ್ರಯೋಜನಕಾರಿಯಾಗಿದೆ. ಇದು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ತೂಕ ಇಳಿಸಿಕೊಳ್ಳಲು ಅರಿಶಿನವನ್ನು ಬಳಸುವ ವಿಧಾನ :
ಅರಿಶಿನ ಹಾಲು :
ಒಂದು ಲೋಟ ಹಾಲನ್ನು ಬಿಸಿ ಮಾಡಿ. ಈಗ ಈ ಹಾಲನ್ನು ಒಂದು ಲೋಟದಲ್ಲಿ ಸುರಿಯಿರಿ. ಇದಕ್ಕೆ ಒಂದು ಚಮಚ ಅರಿಶಿನ ಪುಡಿಯನ್ನು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ ಕುಡಿಯಿರಿ.
ಅರಿಶಿನ ದಾಲ್ಚಿನ್ನಿ ಚಹಾ :
ಪಾತ್ರೆಗೆ ಒಂದು ಕಪ್ ನೀರು ಹಾಕಿ. ಅದಕ್ಕೆ ಅರ್ಧ ಚಮಚ ದಾಲ್ಚಿನ್ನಿ ಪುಡಿಯನ್ನು ಸೇರಿಸಿ. ಅರ್ಧ ಉಳಿಯುವವರೆಗೆ ಕುದಿಸಿ. ಇದನ್ನು ಒಂದು ಕಪ್‌ನಲ್ಲಿ ಹಾಕಿ, ಈಗ ಒಂದು ಚಮಚ ತಾಜಾ ಅರಿಶಿನ ಪೇಸ್ಟ್ ಮತ್ತು ಅರ್ಧ ಟೀಚಮಚ ಪುದೀನಾ ಪೇಸ್ಟ್ ಅನ್ನು ಸೇರಿಸಿ. ಈಗ ಅದನ್ನು ಫಿಲ್ಟರ್ ಮಾಡಿ ಕುಡಿಯಿರಿ, ಇದು ತೂಕವನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ.