ರೈತನೋರ್ವ ತನ್ನ ಮೇಕೆಗೆ ಮಳೆಯಿಂದ ರಕ್ಷಿಸಲು ಮಾಡಿದ ರೈನ್ ಕೋಟ್ | ವೀಡಿಯೊ ವೈರಲ್!

Share the Article

ರೈತರು ನಮ್ಮ ದೇಶದ ಬೆನ್ನೆಲುಬು ಆದರೆ ರೈತರು ಅನುಭವಿಸುವ ಕೆಲವೊಂದು ಸಮಸ್ಯೆಗಳು ಸರ್ಕಾರದ ಅರಿವಿಗೆ ಬರುವುದು ವಿರಳ. ಇತ್ತೀಚಿಗೆ ಅಕಾಲಿಕ ಮಳೆಯಿಂದ ಹಲವಾರು ಸಮಸ್ಯೆಯನ್ನು ರೈತರು ಅನುಭವಿಸುತ್ತಿದ್ದಾರೆ. ಇನ್ನು ಪ್ರಾಣಿ ಪಕ್ಷಿಗಳ ಹೈನುಗಾರಿಕೆ ಮಾಡಲು ಹೈರಾನು ಪಡಬೇಕಾಗುತ್ತದೆ.

ಪ್ರಸ್ತುತ ಅಕಾಲಿಕ ಮಳೆಯ ಹಿನ್ನೆಲೆಯಲ್ಲಿ ರೈತರೊಬ್ಬರು ತಮ್ಮ ಮೇಕೆಗಳಿಗೆ ಬಯಲು ಸೀಮೆಯಲ್ಲಿ ಹುಲ್ಲು ಮೇಯಿಸಲು ತೊಂದರೆ ಆಗಬಾರದು ಎಂದು ತಾತ್ಕಾಲಿಕ ರೈನ್‍ಕೋಟ್‍ಗಳನ್ನು ರಚಿಸಿದ್ದಾರೆ.

ತಮಿಳುನಾಡಿನ ತಂಜಾವೂರಿನ ಕುಲಮಂಗಲಂ ಗ್ರಾಮದ ಗಣೇಶನ್ ಎಂಬವರಿಗೆ ಪ್ರಾಣಿಗಳೆಂದರೆ ಹತ್ತಿರದ ನಂಟು ಆದ್ದರಿಂದ ಅವರು ತಮ್ಮ ಜಮೀನಿನಲ್ಲಿ ಕುರಿಗಳು, ಹಸುಗಳು, ಕೋಳೀಗಳನ್ನು ಸಹ ಸಾಕುತ್ತಿದ್ದಾರೆ. ಅಕಾಲಿಕ ಮಳೆಯಿಂದಾಗಿ ತನ್ನ ಪ್ರಾಣಿಗಳಿಗೆ ತೊಂದರೆ ಆಗುತ್ತಿದೆ. ಹಾಗೂ ಮೇಕೆಗಳು ಮೇಯುವಾಗ ವಿಪರೀತ ಚಳಿಯಿಂದ ನಡುಗುತ್ತಿರುವುದನ್ನು ಅವರು ಗಮನಿಸಿದ್ದಾರೆ.

ಇದರಿಂದಾಗಿ ಅವುಗಳ ರಕ್ಷಣೆಗೆ ಏನಾದರೂ ಮಾಡಬೇಕು ಎಂದುಕೊಂಡ ಗಣೇಶನ್ ಅವುಗಳಿಗೆ ರೈನ್‍ಕೋಟ್‍ನ್ನು ನಿರ್ಮಿಸಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಕ್ಕಿ ಮೂಟೆಗಳನ್ನು ತಂದ ಚೀಲವನ್ನು ಅವರು ತಮ್ಮ ಮೇಕೆಗಳಿಗೆಂದೇ ರೈನ್ ಕೋಟ್‍ಗಳನ್ನಾಗಿ ಪರಿವರ್ತಿಸಿದರು.

ಮೊದಲಿಗೆ ಅಲ್ಲಿನ ಗ್ರಾಮಸ್ಥರು ಗಣೇಶನ್ ಅವರ ಈ ಕೆಲಸದಿಂದ ಗೊಂದಲ ಗೊಂಡರು , ಆನಂತರದಲ್ಲಿ ಗಣೇಶನ್ ಅವರಿಗೆ ಮೇಕೆಗಳ ಮೇಲಿರುವ ಕಾಳಜಿಯ ಕುರಿತು ಕೊಂಡಾಡಿದ್ದಾರೆ .

ಪ್ರಾಣಿಗಳು ನಮ್ಮಂತೆ ಒಂದು ಜೀವಿ ಅವುಗಳಿಗೆ ತಮ್ಮ ದೇಹದ ಆರೈಕೆ ಮಾಡಲು ಗಣೇಶನ್ ಅವರ ಸಣ್ಣ ಸಹಾಯ ಕುರಿತು ಒಂದು ಮೆಚ್ಚುಗೆ ಇರಲಿ.

Leave A Reply