Delhi Murder Case : ಶ್ರದ್ಧಾ ತಲೆಬುರುಡೆ ಕೊನೆಗೂ ಪತ್ತೆ | ಕಾರು ಸೀಜ಼್

Share the Article

ದೇಶದಾದ್ಯಂತ ಗದ್ದಲ ಮೂಡಿಸಿರುವ ಶ್ರದ್ಧಾ ಹತ್ಯೆ ಪ್ರಕರಣ ದಿನೇ ದಿನೇ ವಿಚಿತ್ರ ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರದ್ಧಾಳ ತಲೆ ಬರುಡೆ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಶ್ರದ್ಧಾಳ ಪ್ರಿಯಕರ ಅಫ್ತಾಬ್ ಆಕೆಯನ್ನು ಭೀಕರವಾಗಿ ಹತ್ಯೆಗೈದಿದ್ದ. ಆಕೆಯನ್ನು ಕೊಲೆಮಾಡಿ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್ ನಲ್ಲಿ ತುಂಬಿಸಿಟ್ಟಿದ್ದ. ಆದರೆ ಮುಖವನ್ನು ಮಾತ್ರ ಬೆಂಕಿ ಹಚ್ಚಿ ವಿರೂಪಗೊಳಿಸಿದ್ದ ಎಂದು ಆರೋಪಿಸಲಾಗಿದೆ.

ಆರೋಪಿ ಅಫ್ತಾಬ್ ಫ್ರಿಡ್ಜ್ ನಲ್ಲಿ ತುಂಬಿಸಿಟ್ಟಿದ್ದ ಆಕೆಯ ದೇಹದ ಭಾಗಗಳನ್ನು ಯಾರಿಗೂ ತಿಳಿಯದ ಹಾಗೆ ಮಧ್ಯರಾತ್ರಿಯ ವೇಳೆ ಕಾಡಿಗೆ ಹೋಗಿ ಎಸೆದು ಬರುತ್ತಿದ್ದ. ಆದರೆ ಇದೀಗ ಆಕೆಯ ಮೃತದೇಹದ ಭಾಗಗಳನ್ನು ಬಿಸಾಡಲು ಬಳಸಿದ್ದ ಕಾರನ್ನು ಪೊಲೀಸರು ಸೀಜ಼್ ಮಾಡಿದ್ದಾರೆ.

ಇದೀಗ ಶ್ರದ್ಧಾ ಹತ್ಯೆ ವಿರುದ್ಧ ದೇಶದಾದ್ಯಂತ ಆಕ್ರೋಶದ ಅಲೆ ಸೃಷ್ಟಿಯಾಗಿದೆ. ಆಕೆಯ ಭೀಕರ ಹತ್ಯೆಯಿಂದ ಆರೋಪಿ ಅಫ್ತಾಬ್ ಗೆ ಕಠಿಣ ಶಿಕ್ಷೆ ನೀಡಬೇಕು ಎಂಬ ಕೂಗು ತೀವ್ರಗೊಂಡಿದೆ.

Leave A Reply