LPG Cylinder : ಇನ್ನು ಹೊಸ ಅವತಾರದಲ್ಲಿ ಬರಲಿದೆ ಎಲ್ ಪಿಜಿ ಸಿಲಿಂಡರ್ | ಇದರ ಪ್ರಯೋಜನ ಅನೇಕ!

ಇಂದಿನ ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನ ಬೆಳೆದಂತೆ ಅನುಕೂಲಗಳು ಹೆಚ್ಚುತ್ತಿದೆ. ಹಾಗಾಗಿ, ಮೊಬೈಲ್ ಅಲ್ಲದೆ, ಇತರ ತಂತ್ರಜ್ಞಾನ ಬಳಸಿಕೊಂಡು ಅಪರಾಧಗಳಿಗೆ ಬ್ರೇಕ್ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಿದೆ.

ಹೌದು..ಸಿಲಿಂಡರ್ ಕಳ್ಳತನದಂಥ ಸಂದರ್ಭಗಳಲ್ಲಿ ಅದನ್ನು ಟ್ರೇಸ್, ಟ್ರ್ಯಾಕ್ ಮಾಡಲು, ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಸಿಲಿಂಡರ್ ನಿರ್ವಹಣೆಗೆ ಕ್ಯುಆರ್ ಕೋಡ್ ತಂತ್ರಜ್ಞಾನ ನೆರವಾಗಲಿದೆ ಎಂಬುದಾಗಿ, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರದೀಪ್ ಸಿಂಗ್ ಪುರಿ ಮಾಹಿತಿ ನೀಡಿದ್ದಾರೆ.

ಶೀಘ್ರದಲ್ಲೇ ಗೃಹ ಬಳಕೆಯ ಎಲ್​ಪಿಜಿ ಸಿಲಿಂಡರ್​​ಗಳು (LPG) ಕ್ಯುಆರ್ ಕೋಡ್​ನೊಂದಿಗೆ ಬರಲಿದ್ದು, ಇದರಿಂದ ಅಡುಗೆ ಅನಿಲ ಸಿಲಿಂಡರ್​ಗಳ ನಿಯಂತ್ರಣಕ್ಕೆ ನೆರವಾಗಲಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರದೀಪ್ (Hardeep Singh Puri) ಸಿಂಗ್ ಪುರಿ ತಿಳಿಸಿದ್ದಾರೆ.

‘ಟ್ರೇಸಿಂಗ್​ ಇನ್ನು ಸುಲಭವಾಗಿದ್ದು, ಇದೊಂದು ಗಮನಾರ್ಹ ಆವಿಷ್ಕಾರವಾಗಿದೆ. ಹೊಸ ಸಿಲಿಂಡರ್​ಗಳಲ್ಲಿ ಕ್ಯುಆರ್ ಕೋಡ್ ಅನ್ನು ವೆಲ್ಡ್ ಮಾಡಿ ಅಂಟಿಸಲಾಗುತ್ತದೆ. ಅದನ್ನು ಆ್ಯಕ್ಟಿವೇಟ್ ಮಾಡಿದ ಕೂಡಲೇ ಅದು ಅನೇಕ ಸಮಸ್ಯೆಗಳನ್ನು ಪರಿಹರಿಸಲು ನೆರವಾಗಲಿದೆ. ಕಳ್ಳತನ, ಟ್ರ್ಯಾಕಿಂಗ್, ಟ್ರೇಸಿಂಗ್ ಮತ್ತು ಗ್ಯಾಸ್ ಸಿಲಿಂಡರ್‌ಗಳ ಉತ್ತಮ ದಾಸ್ತಾನು ನಿರ್ವಹಣೆಗೆ ನೆರವಾಗುವ ಕುರಿತು ಸಚಿವರು ವಿಡಿಯೊ ಸಹಿತ ಸಚಿವರು ಟ್ವೀಟ್ ಮಾಡಿದ್ದಾರೆ.

ಉತ್ತರ ಪ್ರದೇಶದಲ್ಲಿ ‘ವಿಶ್ವ ಎಲ್​​ಪಿಜಿ ವಾರ 2022’ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಚಿವ ಪುರಿ ಅಧಿಕಾರಿಗಳ ಜತೆ ಕ್ಯುಆರ್ ಕೋಡ್ ತಂತ್ರಜ್ಞಾನ ವಿಚಾರವಾಗಿ ಚರ್ಚಿಸುತ್ತಿರುವ ದೃಶ್ಯ ವಿಡಿಯೊದಲ್ಲಿದ್ದು, ವಸ್ತುವಿನ ಕುರಿತ ವಿವರಗಳು ಹಾಗೂ ವಿಸ್ತೃತ ಮಾಹಿತಿಯನ್ನೂ ಕ್ಯುಆರ್ ಕೋಡ್ (Quick Response) ಮೂಲಕ ತಿಳಿಯಬಹುದಾಗಿದೆ.

ಕೈಗೆಟಕುವ ದರದ ಮೂಲಕ ಶುದ್ಧ ಇಂಧನ ಒದಗಿಸುವ ಬಗ್ಗೆ ಕೂಡ ಪುರಿ ಯವರು ಮಾಹಿತಿ ನೀಡಿದ್ದು, ಎಲ್​ಪಿಜಿ ಎನರ್ಜಿ ಮಿಕ್ಸ್, ದಕ್ಷತೆ, ಸಂಸ್ಕರಣೆ, ಬಯೋ ಎಲ್​ಪಿಜಿಯಂಥ ವಿವಿಧ ಆವಿಷ್ಕಾರಗಳಿಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ .

ಈ ಆವಿಷ್ಕಾರಗಳು ಅಭಿವೃದ್ಧಿಗೆ ಪೂರಕವಾಗುವುದರ ಜತೆಗೆ ಹವಾಮಾನ ಬದಲಾವಣೆ ವಿರುದ್ಧದ ಹೋರಾಟಕ್ಕೂ ನೆರವು ನೀಡಲಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಕ್ಯುಆರ್ ಕೋಡ್ ಹೊಂದಿರುವ ಮೊದಲ ಬ್ಯಾಚ್​ನ 14.2 ಕೆಜಿಯ ಗೃಹ ಬಳಕೆಯ 20,000 ಎಲ್​ಪಿಜಿ ಸಿಲಿಂಡರ್​ಗಳು ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿವೆ ಎಂದು ‘ಲೈವ್ ಹಿಂದೂಸ್ತಾನ್’ ಇತ್ತೀಚೆಗಷ್ಟೇ ವರದಿ ಮಾಡಿತ್ತು. ಸಿಲಿಂಡರ್​ಗಳಿಗೆ ಭದ್ರತೆ ಒದಗಿಸುವುದು, ಕಳ್ಳತನದಂಥ ಸಂದರ್ಭಗಳಲ್ಲಿ ಅದನ್ನು ಪತ್ತೆಹಚ್ಚುವುದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿ ಉಲ್ಲೇಖಿಸಲಾಗಿದೆ.

Leave A Reply

Your email address will not be published.