ಕಿರಿಕ್ ಹುಡುಗಿಯ ಬೋಲ್ಡ್ ಅವತಾರ | ಟೂ ಪೀಸ್ ಹಾಕಿ ನಟಿಯ ಸಖತ್ ಡ್ಯಾನ್ಸ್!

ಸಿನಿಮಾದಲ್ಲಿ ಸಖತ್ ಆಕ್ಟೀವ್ ಆಗಿ ನಟಿಸಿರುವ ಹಾಗೆ ಸೋಷಿಯಲ್ ಮೀಡಿಯಾದಲ್ಲೂ ತಾನು ಆಕ್ಟಿವ್ ಇದ್ದೇನೆ ಎಂದು ಕಿರಿಕ್ ಪಾರ್ಟಿ ಸಿನಿಮಾದ ನಟಿ ಸಂಯುಕ್ತಾ ಹೆಗ್ಡೆ ಇದೀಗ ತಮ್ಮ ಡ್ಯಾನ್ಸ್ ವಿಡಿಯೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವ ಮೂಲಕ ತಿಳಿಸಿದ್ದಾರೆ.

 

ಸದ್ಯ, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಸಂಯುಕ್ತಾ ಈ ಹಿಂದೆ ಸಾಕಷ್ಟು ಬಾರಿ ಹಾಟ್ & ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಮತ್ತೊಂದು ಬಾರಿ ಸಂಯುಕ್ತಾ ಬಿಕಿನಿ ಅವತಾರದಲ್ಲಿ ಸೊಂಟ ಬಳುಕಿಸಿ, ನೆಟ್ಟಿಗರ ನಿದ್ದೆಕೆಡಿಸಿದ್ದಾರೆ.

ಈ ಹಿಂದೆ ಸಂಯುಕ್ತಾ ಹೆಗ್ಡೆ ಸಿನಿಮಾದ ಫೈಟಿಂಗ್ ಚಿತ್ರೀಕರಣವೊಂದರ ಸಂದರ್ಭದಲ್ಲಿ ಗಾಯಗೊಂಡಿದ್ದರು. ತಮ್ಮ ಕಾಲಿಗೆ ಬಲವಾಗಿ ಗಾಯವಾಗಿದ್ದು, ಇದೀಗ ತಾನು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದೇನೆ ಎಂದು ಹೇಳಲು ಬಿಕಿನಿ ಧರಿಸಿ ಡ್ಯಾನ್ಸ್ ಮಾಡಿರುವ ವಿಡಿಯೋವನ್ನು ಇನ್ಸ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ಡ್ಯಾನ್ಸ್ ಗೆ ಫಿದಾ ಆಗಿ ಕಾಮೆಂಟ್ ಗಳ ಮಳೆ ಸುರಿಸುತ್ತಿದ್ದಾರೆ.

ಡ್ಯಾನ್ಸ್ ಮಾಡಿರುವ ವಿಡಿಯೋ ಹಂಚಿಕೊಳ್ಳುವುದರ ಜೊತೆಗೆ ಸಂಯುಕ್ತಾ ಹೆಗ್ಡೆ, ಕಳೆದ ಮೂರು ತಿಂಗಳ ಬಳಿಕ ಇದೀಗ ಮೊದಲ ಬಾರಿಗೆ ನಾನು ಡ್ಯಾನ್ಸ್ ಮಾಡುತ್ತಿದ್ದೇನೆ. ಈ ಡ್ಯಾನ್ಸ್ ನನಗೆ ತುಂಬಾ ಖುಷಿ ನೀಡುತ್ತಿದೆ. ಫಿಸಿಯೋಥೆರಪಿಯ ಕಠಿಣ ಚಿಕಿತ್ಸೆ ಮುಗಿದಿದೆ. ಎಲ್ಲರಿಗೂ ಧನ್ಯವಾದಗಳು, ಇದೀಗ ನೀವು ನೋಡುತ್ತಿರುವುದು ಪರಿಪೂರ್ಣತೆಯಾ ಎಂದು ಪ್ರಶ್ನಿಸಿದ್ದಾರೆ.

ಫಿಸಿಯೋಥೆರಪಿ ಚಿಕಿತ್ಸೆಯ ಮೂರು ತಿಂಗಳ ಅವಧಿ ದೈಹಿಕವಾಗಿ ಮತ್ತು ಮಾನಸಿಕವಾಗಿ ತೊಡಗಿಸಿಕೊಳ್ಳಲು ಕಷ್ಟಕರವಾಗಿತ್ತು. ಅದು ಬಹಳ ಕಷ್ಟವಾದ ದಿನಗಳಾಗಿತ್ತು. ಆದರೆ ಎಲ್ಲರ ಪ್ರೀತಿ ಮತ್ತು ಬೆಂಬಲದಿಂದ ಇದನ್ನು ಎದುರಿಸಲು ಸಾಧ್ಯವಾಯಿತು. ಪ್ರತಿದಿನದ ಫಿಸಿಯೋಥೆರಪಿ ಚಿಕಿತ್ಸೆ ಮಾಡಿಸಿದರು. ಇದರಿಂದ ಬೇಗನೆ ಗುಣಮುಖವಾಗಲು ಸಾಧ್ಯವಾಯಿತು ಎಂದು ನಟಿ ಸಂಯುಕ್ತಾ ಹೆಗ್ಡೆ ಬರೆದುಕೊಂಡಿದ್ದಾರೆ.

https://www.instagram.com/reel/Ck3S_qEteOd/?igshid=YmMyMTA2M2Y=

Leave A Reply

Your email address will not be published.