ಉಡುಪಿ | ಮುಸ್ಲಿಮರ ‘ ಅಲ್ಲಾಹೋ ಅಕ್ಬರ್ ‘ ಹಾಡಿಗೆ ವಿದ್ಯಾರ್ಥಿನಿಯರಿಂದ ನೃತ್ಯ ಮಾಡಿಸಿದ ಶಾಲಾ ಆಡಳಿತ ಮಂಡಳಿ

ಉಡುಪಿ: ವಿದ್ಯಾರ್ಥಿನಿಯರುಗಳು.ಮುಸ್ಲಿಮರ ಆಜಾನ್‌ಗೆ ನೃತ್ಯ ಮಾಡಿದ್ದು.ಅದು ಇದೀಗ ಗದ್ದಲಕ್ಕೆ ಕಾರಣ ಆಗಿದೆ.

ಆಜಾನ್ ಗೆ ನೃತ್ಯ ಮಾಡಿದ್ದಕ್ಕೆ ಹಿಂದೂಗಳಿಂದ ಆಕ್ಷೇಪ ವ್ಯಕ್ತವಾಗಿದ್ದು, ಅಲ್ಲಿನ ಆಡಳಿತ ಮಂಡಳಿ ಅದರ ಬಗ್ಗೆ ಕ್ಷಮೆ ಕೋರಿದೆ.

ಉಡುಪಿಯ ಶಂಕರನಾರಾಯಣದ ಮದರ್ ಥೆರೆಸಾ ಮೆಮೋರಿಯಲ್ ಶಾಲೆಯು ಕುಂದಾಪುರ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಕ್ರೀಡಾಕೂಟ ಆಯೋಜಿಸಿತ್ತು. ಅದರ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಮಾಡಿದ ಸ್ವಾಗತ ನೃತ್ಯ ಆಕ್ರೋಶಕ್ಕೆ ಕಾರಣ ಆಗಿದೆ.

ಅಲ್ಲಿ ನಡೆದ ಸ್ವಾಗತ ನೃತ್ಯದಲ್ಲಿ ಹಿಂದೂ, ಕ್ರೈಸ್ತ, ಇಸ್ಲಾಂ ಧರ್ಮದ ಹಾಡುಗಳಿಗೆ ವಿದ್ಯಾರ್ಥಿನಿಯರಿಂದ ನೃತ್ಯ ನಡೆದಿದೆ. ಅಲ್ಲಾಹು ಅಕ್ಟರ್‌ಗೆ (ಆಜಾನ್) ವಿದ್ಯಾರ್ಥಿಗಳು ನೃತ್ಯ ಮಾಡಿದ ಕೂಡಲೇ ತಕ್ಷಣಕ್ಕೆ ಆಕ್ಷೇಪ ಕೇಳಿ ಬಂದಿದೆ.

ಆರೋಪ ಕೇಳಿ ಬಂದ ನಂತರ ಗದ್ದಲ ಏರ್ಪಡುವ ಮುನ್ನವೇ ಅಲ್ಲಿನ ಆಡಳಿತ ಮಂಡಳಿ ಕ್ಷಮೆ ಯಾಚಿಸಿದೆ.

Leave A Reply

Your email address will not be published.