ಶ್ರೀಘದಲ್ಲೇ ಮೋದಿ ಮುಸ್ಲಿಮರ ಟೋಪಿ ಧರಿಸುತ್ತಾರೆ : ದಿಗ್ವಿಜಯ್ ಸಿಂಗ್
ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಬಿಜೆಪಿ ಪಕ್ಷದ ಸಾರಥಿ ಮೋದಿ ವಿರುದ್ದ ಹೇಳಿಕೆ ನೀಡಿದ್ದು, ಕಾಂಗ್ರೆಸ್ , ಬಿಜೆಪಿ ಪಕ್ಷದ ನಡುವೆ ವಾಗ್ವಾದ ನಡೆಸಲು ಆಹ್ವಾನ ಕೊಟ್ಟಂತೆ ಗೋಚರಿಸುತ್ತಿದೆ.
ಹೌದು!! ಪ್ರಧಾನಿ ನರೇಂದ್ರ ಮೋದಿ ಅವರು ಶೀಘ್ರದಲ್ಲೇ ಮುಸ್ಲಿಮರ ಟೋಪಿಯನ್ನು ಧರಿಸಲಿದ್ದಾರೆ ಎಂಬುದಾಗಿ, ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹೇಳಿಕೆ ನೀಡಿದ್ದಾರೆ.
ಪಾದಯಾತ್ರೆ ಆಯೋಜನೆಯ ನೇತೃತ್ವ ವಹಿಸಿರುವ ದಿಗ್ವಿಜಯ್ ಸಿಂಗ್ ಅವರು ಮಂಗಳವಾರ ಇಂಧೋರ್‌ನಲ್ಲಿ ಈ ಬಗ್ಗೆ ಹೇಳಿಕೆ ನೀಡಿದ್ದು, ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆಯು ದೊಡ್ದ ಮಟ್ಟದ ಒತ್ತಡವನ್ನು ಸೃಷ್ಟಿಸುತ್ತಿದೆ ಎಂದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬಿಜೆಪಿ ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿ ಕೇಂದ್ರೀಕೃತ ಗೊಳಿಸಿದ್ದು, ಭಾರತ್ ಜೋಡೊ ಯಾತ್ರೆ ಆರಂಭಗೊಂಡು ಒಂದು ತಿಂಗಳಾಗುವ ಮೊದಲೇ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮದರಸ ಮತ್ತು ಮಸೀದಿಗಳಿಗೆ ಭೇಟಿ ನೀಡಲು ಆರಂಭಿಸಿದ್ದಾರೆ.
ಹಾಗಾಗಿ, ಬದಲಾವಣೆಯ ಗಾಳಿ ಬೀಸಲಿದ್ದು, ಇನ್ನು ಕೆಲವೇ ದಿನಗಳಲ್ಲಿ ಪ್ರಧಾನಿ ಮೋದಿ ಅವರೂ ಕೂಡ ಮುಸ್ಲಿಂ ಟೋಪಿ ಧರಿಸುತ್ತಾರೆ ಎಂದು ಲೇವಡಿ ಮಾಡಿದ್ದು, ಜೊತೆಗೆ ಪ್ರಧಾನಿ ಮೋದಿ ಅವರು ಸೌದಿ ಅರೇಬಿಯಾ ಮತ್ತು ಇತರ ರಾಷ್ಟ್ರಗಳಲ್ಲಿ ಮುಸ್ಲಿಂ ‘ಟೋಪಿ’ ಧರಿಸುವುದಲ್ಲದೆ, ಭಾರತಕ್ಕೆ ಹಿಂತಿರುಗಿದ ಬಳಿಕ ಟೋಪಿಯಿಂದ ದೂರ ಸರಿಯುತ್ತಾರೆ ಎಂದು ಕೂಡ ಹೇಳಿದ್ದಾರೆ.
2011ರ ಸೆಪ್ಟೆಂಬರ್‌ನಲ್ಲಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭ, ಅಹಮದಾಬಾದ್‌ನಲ್ಲಿ ಸದ್ಭಾವನಾ ಉಪವಾಸ ನಡೆಸುತ್ತಿದ್ದಾಗ ಮುಸ್ಲಿಂ ಮುಖಂಡರು ನೀಡಿದ ಟೋಪಿಯನ್ನು ಧರಿಸಲು ನಿರಾಕರಿಸಿದ್ದಾರೆ.
ಭಾಗವತ್ ಅವರು ಸೆಪ್ಟೆಂಬರ್ ತಿಂಗಳಲ್ಲಿ ದೆಹಲಿಯ ಮಸೀದಿ ಮತ್ತು ಮದರಸಕ್ಕೆ ಭೇಟಿ ನೀಡಿದ್ದು, ಅಖಿಲ ಭಾರತ ಇಮಾಮ್ ಸಂಘಟನೆಯ ಮುಖ್ಯಸ್ಥ ಉಮರ್ ಅಹ್ಮದ್ ಇಲ್ಯಾಸಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ಇದೇ ಕಾರಣವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕ ಮೋದಿ ಕಾಲೆಳೆಯಲು ಪ್ರಯತ್ನಿಸಿದ್ದಾರೆ.
ಬಿಜೆಪಿ ಆಡಳಿತದ ವೈಖರಿಯಿಂದ ರಾಷ್ಟ್ರದ ಬಡವರು ಮತ್ತಷ್ಟು ಬಡವರಾಗುತ್ತಿದ್ದು ಅದೇ ರೀತಿ, ಶ್ರೀಮಂತರು ಕೂಡ ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ ಎಂದಿದ್ದಾರೆಈ ಯಾತ್ರೆಯು ಅಂತಿಮವಾಗಿ ಶ್ರೀನಗರ ತಲುಪಿದಾಗ ಮುಂದೇನಾಗಲಿದೆ ನಿರೀಕ್ಷಿಸಿ ಎಂದು ಕೂಡ ಕೌತುಕ ಸೃಷ್ಟಿಸಿ , ದಿಗ್ವಿಜಯ್ ಸಿಂಗ್ ಜೋಡೋ ಯಾತ್ರೆಯ ಬಗ್ಗೆ ಹೇಳಿಕೊಂಡಿದ್ದಾರೆ.