ಮೆಟ್ಟಿಲು ಹತ್ತುವಾಗ ಎಡವಿ ಬೀಳಲು ಹೋದ ಜೋ ಬೈಡನ್ | ಮುಂದೇನಾಯ್ತು?

ಒಂದು ಮಾತಿದೆ ಎಷ್ಟೇ ಬುದ್ಧಿವಂತನಾದರೂ ಒಂದು ಸಲಿ ಎಡವಿಯೇ ಎಡವುತ್ತಾನೆ ಎಂಬುದು ಹಾಗೆಯೇ ಇದು ಎಲ್ಲರಿಗೂ ಅನ್ವಯಿಸುತ್ತದೆ.

ಹೌದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ವಿಡೋಡೊ ಜಿ20 ಶೃಂಗಸಭೆಯಲ್ಲಿ ಭಾಗಿಯಾಗಿದ್ದರು ಆ ಸಮಯದಲ್ಲಿ ಜಿ20 ಶೃಂಗಸಭೆಗಾಗಿ ಇಂಡೋನೆಷ್ಯಾದ ಬಾಲಿಯಲ್ಲಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಮೆಟ್ಟಿಲುಗಳನ್ನು ಹತ್ತುವಾಗ ಎಡವಿರುತ್ತಾರೆ. ಇನ್ನೇನೂ ಬೀಳುವಷ್ಟರಲ್ಲಿ ಇಂಡೋನೇಷಿಯಾದ ಕೌಂಟರ್ಪಾರ್ಟ್ ಜೋಕೊ ವಿಡೋಡೊ ಅವರು, ಜೋ ಬೈಡನ್ ಅವರ ಕೈಯನ್ನು ಹಿಡಿದುಕೊಂಡಿದ್ದಾರೆ.

ಇಬ್ಬರು ನಾಯಕರಾದ ಜೋ ಬೈಡನ್ ಮತ್ತು ವಿಡೋಡೊ ಅವರು ಬಾಲಿಯಲ್ಲಿನ ತಮನ್ ಹುತನ್ ರಾಯ ಮ್ಯಾಂಗ್ರೋವ್ ಅರಣ್ಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ಜೋ ಬೈಡನ್ ಮೆಟ್ಟಿಲುಗಳ ಮೇಲೆ ಎಡವಿದ್ದಾರೆ. ಆದರೂ ಜೋ ಬೈಡನ್ ಅವರ ಕೈ ಹಿಡಿದು ಬೀಳದಂತೆ ವಿಡೋಡೋ ಅವರು ರಕ್ಷಿಸಿದ್ದಾರೆ. ಸಮಯಕ್ಕೆ ಸರಿಯಾಗಿ ವಿಡೋಡೋ, ಜೋ ಬೈಡನ್ ಕೈ ಹಿಡಿದುಕೊಂಡಿದ್ದಕ್ಕೆ ಸಂಭವಿಸಬಹುದಾದ ಅನುಹುತದಿಂದ ಪಾರಾಗಿದ್ದಾರೆ.

ಅದಲ್ಲದೆ ಇಬ್ಬರು ನಾಯಕರಾದ ಜೋ ಬೈಡನ್ ಮತ್ತು ವಿಡೋಡೊ ಅವರು ಜಾಗತಿಕ ಹಸಿವು, ಆಹಾರ ಭದ್ರತೆ, ಇಂಧನ, ರಕ್ಷಣಾ ಮತ್ತು ಆರ್ಥಿಕತೆಯನ್ನು ಪೂರ್ಣ ಪ್ರಮಾಣದಲ್ಲಿ ಡಿಜಿಟಲ್ ವ್ಯವಸ್ಥೆ ಅಡಿಯಲ್ಲಿ ತರುವ ಬಗ್ಗೆ ಜಿ – 20 ನಾಯಕರು ಸುದೀರ್ಘ ಸಮಾಲೋಚನೆ ನಡೆಸಿ, ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ ಎಂದು ಮಾಹಿತಿ ದೊರೆತಿದೆ.

ಈ ಜಿ20 ಶೃಂಗಸಭೆಯಲ್ಲಿ ಜಾಗತಿಕವಾಗಿ ಕುಸಿದಿರುವ ಆರ್ಥಿಕತೆ ಪರಿಣಾಮದಿಂದ ಶೀಘ್ರ ಚೇತರಿಸಿಕೊಂಡು ಬಲಶಾಲಿಯಾಗಿ ಮುನ್ನಡೆಯುವ, ಅಂದರೆ ‘ಒಟ್ಟಿಗೆ ಚೇತರಿಸಿಕೊಳ್ಳಿ, ಒಟ್ಟಿಗೆ ಮುನ್ನೆಡೆಯಿರಿ’ ಎಂಬ ಥೀಮ್‍ನೊಂದಿಗೆ ಬಾಲಿ ಶೃಂಗ ಸಭೆ ಆರಂಭವಾಗಿ ಸರಾಗವಾಗಿ ಸಭೆಯು ಉದ್ದೇಶ ಪೂರೈಕೆಯೊಂದಿಗೆ ಕೊನೆಗೊಂಡಿದೆ.

Leave A Reply

Your email address will not be published.