ಹಿಂದೂ ಹುಡುಗಿಯರೇ ಎಚ್ಚರಿಕೆಯಿಂದ ಡೇಟಿಂಗ್‌ ಮಾಡಿ : ಸಲಹೆ ನೀಡಿದ ಪ್ರಮೋದ್‌ ಮುತಾಲಿಕ್

ಹಿಂದೂಗಳ ಒಳಿತಿಗಾಗಿ ಶ್ರಮಿಸಿರುವ ಮತ್ತು ಸದಾ ಶ್ರಮಿಸುತ್ತಿರುವ ಸಮಸ್ತ ಹಿಂದೂ ಸೇನೆಯ ಪರವಾದ ಶ್ರೀ ರಾಮಸೇನೆಯ ಸಂಸ್ಥಾಪಕ ಅಧ್ಯಕ್ಷರಾಗಿರುವ ಪ್ರಮೋದ್ ಮುತಾಲಿಕ್ ಇತ್ತೀಚೆಗೆ ದೆಹಲಿಯಲ್ಲಿ ನಡೆದ ಭೀಕರ ಘಟನೆ ತಾಲಿಬಾನ್ ಕೃತ್ಯಕ್ಕಿಂತಲೂ ಕೆಟ್ಟದಾಗಿದೆ. ಆದ್ದರಿಂದ ಹಿಂದೂ ಹುಡುಗಿಯರು ಎಚ್ಚರಿಕೆಯಿಂದ ಇರಬೇಕು . ಪ್ರೀತಿ ಮಾಡುವಾಗ, ಡೇಟಿಂಗ್ ಮಾಡುವಾಗ ವಿಚಾರ ಮಾಡಿ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

ಲವ್ ಜಿಹಾದ್‌ಗೆ ಬಲಿಯಾಗುವ ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೆ ನಾನು 15 ವರ್ಷಗಳಿಂದಲೂ ಎಚ್ಚರಿಕೆ ಕೊಡುತ್ತಲೇ ಬಂದಿದ್ದೇನೆ. ಇಷ್ಟೆಲ್ಲಾ ಎಚ್ಚರಿಕೆ ಕೊಟ್ಟರೂ ದೆಹಲಿಯಲ್ಲಿ ನಡೆದ ಇದೊಂದು ಘಟನೆ ದೊಡ್ಡ ದುರಂತವೇ ಸರಿ ಎಂದಿದ್ದಾರೆ.

ಇತ್ತೀಚೆಗೆ ದೆಹಲಿಯಲ್ಲಿ ಲಿವಿಂಗ್ ಟುಗೆದರ್‌ನಲ್ಲಿದ್ದ ಗೆಳತಿಯನ್ನು 35 ಪೀಸ್‌ಗಳಾಗಿ ಮಾಡಿ ಹತ್ಯೆಮಾಡಿರುವ ಘಟನೆ ತಾಲಿಬಾನಿಗಳ ಕೃತ್ಯಕ್ಕಿಂತೂ ಕೆಟ್ಟದಾದದ್ದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದೂ ಹುಡುಗಿಯರು ಇದರಿಂದ ಎಚ್ಚರವಾಗಬೇಕು , ಪ್ರೀತಿ ಕುರುಡು ಎಂದು. ಪ್ರೀತಿ ಮಂಪರಿನಲ್ಲಿ ಯಾರ ಜೊತೆ ಪ್ರೀತಿ ಮಾಡುತ್ತಿದ್ದೇನೆ, ಯಾರ ಜೊತೆ ಡೇಟಿಂಗ್ ಮಾಡುತ್ತಿದ್ದೇನೆ ಎಂಬ ಅರಿವಿರಬೇಕು ಎಂದಿದ್ದಾರೆ.

ದೆಹಲಿಯ ಘಟನೆಯ ನಂತರ ಆ ಯುವಕ ಮತ್ತೆ ನಾಲ್ಕು ಜನ ಹಿಂದೂ ಹುಡುಗಿಯರ ಜೊತೆ ಸುತ್ತಾಡಿದ್ದಾನೆ. ಅವನಿಗೆ ಗಲ್ಲು ಶಿಕ್ಷೆಯೇ ಅಂತಿಮ, ಕೋರ್ಟ್ ಸಹ ವಿಳಂಬ ಮಾಡದೆ, ಒಂದೇ ತಿಂಗಳಲ್ಲಿ ಈ ಪ್ರಕ್ರಿಯೆ ಮುಗಿಸಿ ಆತನಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಸಂತ್ರಸ್ತರ ಪರವಾಗಿ ಒತ್ತಾಯಿಸಿದ್ದಾರೆ.

ಅದಲ್ಲದೆ ಹುಬ್ಬಳ್ಳಿಯಲ್ಲಿ ಮೇಲಿಂದ ಮೇಲೆ ಮತಾಂತರ ಪ್ರಕ್ರಿಯೆ ನಡೆಯುತ್ತಿದೆ. ಈ ಹಿಂದೆ ಎರಡು ಪ್ರಕರಣಗಳು ನಡೆದಿದ್ದವು. ಇದೀಗ ಚಿಕ್ಕಲಗೇರಿ ಎನ್ನುವ ಸಣ್ಣ ಬಡ ಕುಟುಂಬದ ಮೇಲೆ ಮತಾಂತರ ಆಗಿದೆ. ಪತಿ, ಪತ್ನಿಯರಿಗೆ ಜಗಳ ಹಚ್ಚಿ ಪತ್ನಿಯನ್ನು ಮತಾಂತರ ಮಾಡಿದ್ದಾರೆ. ಪತ್ನಿಯ ಮೂಲಕ ಗಂಡನಿಗೆ ಒತ್ತಾಯ ಮಾಡುವ ಪ್ರಕ್ರಿಯೆ ನಡೆದಿದೆ. ಈ ಜಗಳ ವಿಕೋಪಕ್ಕೆ ಹೋಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಹೇಳಿದ್ದಾರೆ.

ಮತಾಂತರ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಈ ರೀತಿ ನಡೆಯುತ್ತಲೇ ಇದೆ. ಈ ನಿರ್ಲಕ್ಷ್ಯ ಸರ್ಕಾರದ್ದು, ಕೇವಲ ಕಾನೂನು ಮಾಡುವುದಲ್ಲ, ಅದನ್ನು ಜಾರಿ ಮಾಡಬೇಕು. ಕ್ರಿಶ್ಚಿಯನ್ ಮತಾಂತರ ಎನ್ನುವುದು ಬಹಳ ದೊಡ್ಡ ಗಂಡಾಂತರ, ಇದನ್ನು ತಡೆಯದೇ ಇದ್ದರೆ ದೇಶಕ್ಕೆ ದೊಡ್ಡ ಅಪಾಯ ಉಂಟಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಒಟ್ಟಿನಲ್ಲಿ ಹಿಂದೂಗಳ ಒಳಿತಿಗಾಗಿ ಶ್ರಮಿಸಿರುವ ಮತ್ತು ಸದಾ ಶ್ರಮಿಸುತ್ತಿರುವ ಸಮಸ್ತ ಹಿಂದೂ ಸೇನೆಯ ಪರವಾದ ಶ್ರೀ ರಾಮಸೇನೆಯ ಸಂಸ್ಥಾಪಕ ಅಧ್ಯಕ್ಷರಾಗಿರುವ ಪ್ರಮೋದ್ ಮುತಾಲಿಕ್ ಅವರ ಮಾತನ್ನು ಹಿಂದೂ ಹೆಣ್ಣುಮಕ್ಕಳು ಗಂಭೀರವಾಗಿ ತೆಗೆದುಕೊಳ್ಳುವುದು ತಮ್ಮ ಒಳಿತಿಗೆ ಉತ್ತಮ. ಯಾಕೆಂದರೆ ಬೀದಿಯಲ್ಲಿ ಸಾಯುವುದಕ್ಕಿಂತ ಯಾವುದೇ ಸಮಸ್ಯೆ ಇದ್ದರೂ ಆ ಸಮಸ್ಯೆಯನ್ನು ಎದುರಿಸಿ ನಿಲ್ಲುವುದು ಒಬ್ಬ ಭಾರತೀಯ ಹೆಣ್ಣು ಮಗಳ ಕರ್ತವ್ಯ ಆಗಿದೆ.

Leave A Reply

Your email address will not be published.