Baba Vanga Predictions : ಇಡೀ ಜಗತ್ತಿಗೇ 2023 ರಲ್ಲಿ ಕತ್ತಲು ಆವರಿಸುತ್ತೆ! ಏನಿದು ಬಾಬಾ ವಂಗಾ ಭವಿಷ್ಯವಾಣಿ!

ಮುಂದಿನ ಭವಿಷ್ಯವನ್ನು ಊಹಿಸಲು ಯಾರಿಂದಲೂ ಸಾಧ್ಯ ಇಲ್ಲ ಆದರೆ ಕೆಲವೊಮ್ಮೆ ಕೆಲವು ಅನುಭವಿಗಳು ಹೇಳುವ ಭವಿಷ್ಯ ವಾಣಿ ನಿಜವಾಗುತ್ತವೆ. ಇದಕ್ಕೆ ಹಲವಾರು ನಿದರ್ಶನಗಳನ್ನು ಈಗಾಗಲೇ ನೋಡಿರುತ್ತೇವೆ.
ಹೌದು ಈಗಾಗಲೇ ವಂಗಾ ಬಾಬಾ ಭವಿಷ್ಯವನ್ನು ಪರಿಪೂರ್ಣವಾಗಿ ಊಹಿಸಿದವರಲ್ಲಿ ಒಬ್ಬರು.

ವಂಗಾ ಬಾಬಾ 1911 ರಲ್ಲಿ ಬಲ್ಗೇರಿಯಾದಲ್ಲಿ ಜನಿಸಿದ್ದು ನಿಜವಾದ ಹೆಸರು ವಾಂಜೆಲಿಯಾ ಪಾಂಡೆವಾ ಗುಶ್ಟೆರೋವಾ. ಅವರು ಬಾಲ್ಯದಲ್ಲಿ ದೃಷ್ಟಿ ಕಳೆದುಕೊಂಡರು. ನಂತರ ಅವರು ಭವಿಷ್ಯವನ್ನು ಹೇಳಲು ಪ್ರಾರಂಭಿಸಿದರು. ಆಕೆ ಹೇಳಿದ್ದರಲ್ಲಿ ಶೇಕಡಾ 80 ರಷ್ಟು ನಡೆಯುತ್ತಿದೆ ಎಂದು ಮಾಹಿತಿ ಇದೆ.

ಹೌದು ವಂಗ ಬಾಬಾ ಗೆ ದೃಷ್ಟಿಯೇ ಇಲ್ಲ, ಕಣ್ಣು ಮುಚ್ಚಿ ಆಕಾಶ ನೋಡುತ್ತಾ ಭವಿಷ್ಯ ನುಡಿಯುತ್ತಾರೆ.

• ಬಾಬಾ ವಂಗ ಪ್ರಕಾರ ಪ್ರಮುಖ ದೇಶವು ಜೈವಿಕ ಶಸ್ತ್ರಾಸ್ತ್ರಗಳಿಂದ ಜನರ ಮೇಲೆ ದಾಳಿ ಮಾಡುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ರಷ್ಯಾ-ಉಕ್ರೇನ್ ಯುದ್ಧದ ದೃಷ್ಟಿಕೋನವನ್ನು ನೋಡಿದರೆ ದೊಡ್ಡ ದೇಶವೇನೋ ಎನಿಸಬಹುದು. ಈಗಾಗಲೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪರಮಾಣು ಶಸ್ತ್ರಾಸ್ತ್ರಗಳ ಬಗ್ಗೆ ಮಾತನಾಡುತ್ತಿದ್ದಾರೆ. ಆದ್ದರಿಂದ, ಇದು ಸಂಭವಿಸಿದರೆ ಆಶ್ಚರ್ಯಪಡಬೇಕಾಗಿಲ್ಲ ಎಂದಿದ್ದಾರೆ.

• ಬಾಬಾ ವಂಗಾ ಪ್ರಕಾರ ಸೌರ ಚಂಡಮಾರುತವು 2023 ರಲ್ಲಿ ಬರಲಿದೆ. ಇದನ್ನು ಸೌರ ಸುನಾಮಿ ಎಂದೂ ಕರೆಯುತ್ತಾರೆ. ಹೀಗಾದರೆ ಭೂಮಿಯ ಕಾಂತಕ್ಷೇತ್ರಕ್ಕೆ ಹಾನಿಯಾಗುತ್ತದೆ. ಮಾಹಿತಿ ವ್ಯವಸ್ಥೆಗಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ ಎಂದಿದ್ದಾರೆ

•ಪರಮಾಣು ವಿದ್ಯುತ್ ಸ್ಥಾವರದಲ್ಲಿ ಭಾರಿ ಸ್ಫೋಟ ಸಂಭವಿಸುತ್ತದೆ. ಇದು ಏಷ್ಯಾ ಖಂಡದ ಮೇಲೆ ವಿಷಕಾರಿ ಮೋಡಗಳು ಸಂಗ್ರಹಗೊಳ್ಳಲು ಕಾರಣವಾಗುತ್ತದೆ. ಪರಿಣಾಮವಾಗಿ, ಅನೇಕ ದೇಶಗಳು ಅತಿರೇಕದ ರೋಗವನ್ನು ಅನುಭವಿಸುತ್ತವೆ ಎಂದಿದ್ದಾರೆ.

• 2023 ರಿಂದ ಪ್ರಯೋಗಾಲಯಗಳಲ್ಲಿ ಮಕ್ಕಳು ಜನಿಸುತ್ತಾರೆ. ಹೀಗೆ ಹುಟ್ಟುವ ಮಕ್ಕಳು ಹೇಗಿರಬೇಕು, ಯಾವ ಬಣ್ಣ ಇರಬೇಕು, ಎಷ್ಟು ಎತ್ತರಕ್ಕೆ ಬೆಳೆಯಬೇಕು ಎಲ್ಲವನ್ನೂ ಮೊದಲೇ ನಿರ್ಧರಿಸಿ ಸಿದ್ಧಪಡಿಸಲಾಗುತ್ತದೆ. ಅದೇನೆಂದರೆ ಮಾನವ ಜನ್ಮದ ಸಂಪೂರ್ಣ ಪ್ರಕ್ರಿಯೆಯು ವೈದ್ಯರ ನಿಯಂತ್ರಣದಲ್ಲಿ ಬರುತ್ತದೆ ಎಂದಿದ್ದಾರೆ.

• ಮತ್ತೊಂದು ಭವಿಷ್ಯವಾಣಿಯ ಪ್ರಕಾರ, 2023 ರಲ್ಲಿ ಇಡೀ ಜಗತ್ತು ಕತ್ತಲೆಯಾಗುತ್ತದೆ. ವಿದೇಶಿಯರು ಭೂಮಿಯ ಮೇಲೆ ದಾಳಿ ಮಾಡಬಹುದು. ಲಕ್ಷಗಟ್ಟಲೆ ಜನ ಸಾಯುವ ಮುನ್ಸೂಚನೆ ಇದೆ ಎಂದಿದ್ದಾರೆ.

ಮಾಹಿತಿ ಪ್ರಕಾರ ಬಾಬಾ ವಂಗ ಪ್ರಕಾರ 2022 ರಲ್ಲಿ ಕೆಲವು ದೇಶಗಳಲ್ಲಿ ಪ್ರವಾಹ ಮತ್ತು ಯುರೋಪ್ ಖಂಡದಲ್ಲಿ ಬರಗಾಲ ಉಂಟಾಗುತ್ತದೆ ಎಂದು ಭವಿಷ್ಯ ನುಡಿದಿದ್ದರು. ಇದು ನಿಜವಾಗಿಯೂ ಸಂಭವಿಸಿದೆ. ಆಸ್ಟ್ರೇಲಿಯಾ ಮತ್ತು ಏಷ್ಯಾದ ದೇಶಗಳಲ್ಲಿ ಪ್ರವಾಹ ಬಂದಾಗ, ಯುರೋಪಿನ ಪೋರ್ಚುಗಲ್ ಮತ್ತು ಇಟಲಿಯಲ್ಲಿ ಬರಗಾಲವಿತ್ತು ಎಂಬ ಸ್ಪಷ್ಟನೆ ಇದೆ.

ಆದ್ದರಿಂದ ವೀರಬ್ರಹ್ಮೇಂದ್ರಸ್ವಾಮಿ, ನಾಸ್ಟ್ರಡಾಮಸ್ ಅವರಂತೆ ಬಾಬಾ ವಂಗ ಸಹ ನಡೆಯಲಿರುವ ಬಹುತೇಕ ಸಂಗತಿಗಳನ್ನು ಭವಿಷ್ಯ ನುಡಿದಿದ್ದರು. 2022 ರಲ್ಲಿ ಅವರು ಪ್ರಸ್ತಾಪಿಸಿದ 6 ವಿಷಯಗಳಲ್ಲಿ 2 ನಿಜವಾಗಿ ಸಂಭವಿಸಿದೆ. ಆದ್ದರಿಂದ, 2023 ರ ಬಗ್ಗೆ ಏನು ಹೇಳಲಾಗಿದೆ ಎಂಬುದು ಕುತೂಹಲಕಾರಿಯಾಗಿದೆ. ಅಂದಹಾಗೆ ಆಕೆ ಹೇಳಿರುವ ಈ ಮೇಲಿನ 5 ಸಂಗತಿ ನಿಜವಾಗಿ ನಡೆದರೆ 2023 ಇತಿಹಾಸದಲ್ಲಿ ವಿಚಿತ್ರ ವರ್ಷವಾಗಿ ಉಳಿಯುತ್ತದೆ ಎಂದು ಎಲ್ಲರ ಕುತೂಹಲ ಆಗಿದೆ.

Leave A Reply

Your email address will not be published.