ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಡಾಂಬರು ರಸ್ತೆ | ಬರಿಗೈಯಲ್ಲಿ ಕಿತ್ತು ಹಾಕಿದ ವ್ಯಕ್ತಿ | ವೀಡಿಯೊ ವೈರಲ್!
ಸರ್ಕಾರ ಎಷ್ಟೇ ಸೌಲಭ್ಯ ಒದಗಿಸಿದರು ಒಂದಲ್ಲಾ ಒಂದು ತಪ್ಪು ಸಾರ್ವಜನಿಕರು ಕಂಡು ಹಿಡಿಯುತ್ತಾರೆ. ಕೆಲವೊಮ್ಮೆ ಯಾರಿಂದ ಯಾವ ತಪ್ಪು ನಡೆಯುತ್ತಿದೆ ಎಂದು ಕಂಡು ಹಿಡಿಯಲು ಸಹ ಸಾಧ್ಯ ಆಗುತ್ತಿಲ್ಲ. ಹೌದು ಕೆಲವೊಂದು ಬಾರಿ ಸರ್ಕಾರದ ಭ್ರಷ್ಟ ವ್ಯವಸ್ಥೆಗೆ ಪರಿಹಾರ ಏನು ಎಂಬುದೇ ಗೊಂದಲವಾಗಿದೆ.
ಹೌದು ಹೊಸದಾಗಿ ನಿರ್ಮಾಣ ಮಾಡುತ್ತಿರುವ ಇನ್ನೂ ಪೂರ್ತಿಯಾಗದ ಡಾಂಬರು ರಸ್ತೆಯನ್ನು ವ್ಯಕ್ತಿಯೊಬ್ಬ ಬರಿಗೈಯಲ್ಲಿ ಕಿತ್ತು ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋ ವೈರಲ್ ಆದ ಬಳಿಕ ಆಮ್ ಆದ್ಮ ಪಕ್ಷ ಮತ್ತು ಕಾಂಗ್ರೆಸ್ ಸದಸ್ಯರು ಸೇರಿದಂತೆ ಹಲವಾರು ಪ್ರತಿಪಕ್ಷದ ನಾಯಕರು ಅತಿರೇಕದ ಭ್ರಷ್ಟಾಚಾರಕ್ಕಾಗಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಪುರಾಣಪುರ್ ಮತ್ತು ಭಗವಂತಪುರ್ ನಡುವೆ 7 ಕಿ.ಮೀ ದೂರ ಈ ರಸ್ತೆಯನ್ನು ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆ ಅಡಿಯಲ್ಲಿ ಈ ಡಾಂಬರು ರಸ್ತೆಯನ್ನು ಅಂದಾಜು 3.8 ಕೋಟಿ ರೂಪಾಂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.
ಪುರಾಣಪುರ್ ಮತ್ತು ಭಗವಂತಪುರ್ ರಸ್ತೆಯು ಸರಿಯಾದ ರೀತಿಯಲ್ಲಿ ನಿರ್ಮಾನ ಮಾಡದೇ ತುಂಬಾ ಕಳಪೆ ಕಾಮಗಾರಿ ಮಾಡಿದ್ದು, ಇದರ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ. ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಅದಲ್ಲದೆ ಗುತ್ತಿಗೆದಾರರೊಂದಿಗೆ ಸೇರಿ ಜೂನಿಯ ಇಂಜಿನಿಯರ್ (ಜೆಇ) ಕಳಪೆ ನಿರ್ಮಾಣ ಮಾಡಿದ್ದಾರೆಂದು ತಿಳಿದುಬಂದಿದೆ.
ಜಿಲ್ಲಾಡಳಿತದ ಅಧಿಕಾರಿಗಳ ಪ್ರಕಾರ ಪುರಾಣಪುರ್ ಮತ್ತು ಭಗವಂತಪುರ್ ನಡುವೆ 7 ಕಿ.ಮೀ ದೂರ ಈ ರಸ್ತೆಯನ್ನು ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆ ಅಡಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳ್ಳಲಿದೆ. ಆದರೆ, ರಸ್ತೆ ಮಾತ್ರ ತುಂಬಾ ಕಳಪೆಯಾಗಿದೆ. ಒಂದೆರೆಡು ಬಾರಿ ವಾಹನಗಳು ತಿರುಗಾಡಿದರೆ ಸಾಕು ರಸ್ತೆ ಕಿತ್ತು ಬರುವುದು ಗ್ಯಾರೆಂಟಿ. ಅಷ್ಟರಮಟ್ಟಿಗೆ ರಸ್ತೆ ನಿರ್ಮಾಣ ಕಳಪೆಯಾಗಿದೆ ಎಂದಿದ್ದಾರೆ.
ಈಗಾಗಲೇ ಭಗವಂತಪುರದ ಸ್ಥಳೀಯರೊಬ್ಬರು ತಮ್ಮ ಕೈಗಳಿಂದ ಡಾಂಬರು ಪದರವನ್ನು ಕಿತ್ತು ಹಾಕಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಇದರ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಡಳಿತದ ಗ್ರಾಮೀಣ ಇಂಜಿನಿಯರಿಂಗ್ ವಿಭಾಗದ ಪ್ರತಿನಿಧಿ ಶೈಲೇಂದ್ರ ಚೌಧರಿ, ತನಿಖೆ ನಡೆಸಿ ಕಳಪೆ ಗುಣಮಟ್ಟದ ರಸ್ತೆಯನ್ನು ದುರಸ್ತಿ ಮಾಡಿದ್ದಾರೆ ಎಂದಿದ್ದಾರೆ.
ಒಟ್ಟಾಗಿ ಸರ್ಕಾರದ ಬಗೆಗಿನ ನಂಬಿಕೆಗೆ ಹುಸಿಯಾದ ಘಟನೆ ನಡೆದಿರುವುದು ಇದೇ ಮೊದಲಲ್ಲ ಆದರೂ ಸರ್ಕಾರ ಗಮನಹರಿಸಬೇಕಿತ್ತು ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.