Health Alert : ನೀವು ಬಿಯರ್ ಪ್ರೀಯರೇ!! ಹಾಗಾದರೆ ಇಲ್ಲಿ ಗಮನಿಸಿ | ಬಿಯರ್ ಜೊತೆ ಈ ವಸ್ತುಗಳನ್ನ ಸೇವಿಸಿದ್ರೆ ಅಷ್ಟೇ…

ಇವತ್ತಿನ ಕಾಲದಲ್ಲಿ ಬಿಯರ್ ಕುಡಿಯದೇ ಇರುವವರು ಯಾರೂ ಇಲ್ಲ, ಒಂದು ವೇಳೆ ಇದ್ದರೂ ಬೆರಳೆಣಿಕೆಯಷ್ಟು ಜನ ಮಾತ್ರ. ಇನ್ನೂ, ಪಾರ್ಟಿಯಲ್ಲಂತೂ ಬಿಯರ್ ಇಲ್ಲದಿದ್ದರೆ ಕೆಲವರಿಗೆ ಅದು ಪಾರ್ಟಿ ಎಂದೆನಿಸುವುದೇ ಇಲ್ಲ. ಇವತ್ತಿನ ದಿನಗಳಲ್ಲಿ ಬಿಯರ್ ಸೇವನೆ ಹೆಚ್ಚಾಗಿದೆ ಯಾಕಂದ್ರೆ ಇದು ಇತರ ಆಲ್ಕೋಹಾಲ್ ಗಳಿಗಿಂತ ಕಡಿಮೆ ನಶೆ ಹೊಂದಿರುತ್ತದೆ. ಹಾಗೂ ತಣ್ಣಗಾದ ಬಿಯರ್ ಶಾಖವನ್ನು ನಿವಾರಿಸುತ್ತದೆ. ಇನ್ನೂ ಹೆಚ್ಚಿನ ಜನರು ಬಿಯರ್ ನೊಂದಿಗೆ ಪಿಜ್ಜಾ, ಚಿಕನ್, ಉಪ್ಪು ಹಾಕಿದ ಡಂಪ್ಲಿಂಗ್, ಡ್ರೈ ಫ್ರೂಟ್ಸ್ ಹೀಗೆ ಕೆಲವು ತಿನಿಸುಗಳನ್ನು ತಿನ್ನುತ್ತಾರೆ. ಆದರೆ ಇವೆಲ್ಲಾ ಆರೋಗ್ಯಕ್ಕೆ ಉತ್ತಮವೇ ಎಂಬುದು ಪ್ರಶ್ನೆಯಾಗಿದೆ.

ಹಾಗಾಗಿ ಬಿಯರ್ ಅಥವಾ ಆಲ್ಕೋಹಾಲ್ ಕುಡಿಯಲು ಕೆಲವು ನಿಯಮಗಳಿವೆ. ಸರಿಯಾದ ಪ್ರಮಾಣದ ವೈನ್ ಅಥವಾ ಬಿಯರ್ ಸೇವಿಸುವುದರಿಂದ ದೇಹ ಆರೋಗ್ಯವಾಗಿರುತ್ತದೆ ಎಂದು ಅನೇಕ ವಿಜ್ಞಾನಿಗಳು ಹೇಳುತ್ತಾರೆ.

ಹಾಗೆಯೇ ಖಾಲಿ ಹೊಟ್ಟೆಯಲ್ಲಿ ಮದ್ಯ ಸೇವನೆ ಅಥವಾ ತಪ್ಪು ಅಹಾರಗಳೊಂದಿಗೆ ಅದನ್ನು ತೆಗೆದುಕೊಳ್ಳುವುದರಿಂದ ಅನಾರೋಗ್ಯಕ್ಕೆ ತುತ್ತಾಗಬಹುದು. ಇದು ನಿರ್ಜಲೀಕರಣ ಮತ್ತು ತಲೆನೋವು ಸಮಸ್ಯೆಗಳಿಗೂ ಕಾರಣವಾಗಬಹುದಂತೆ. ಹಾಗಾದ್ರೆ ಬಿಯರ್ ನೊಂದಿಗೆ ಯಾವ ವಸ್ತುಗಳನ್ನು ಸೇವಿಸಬಾರದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಮೊದಲಾಗಿ, ಬ್ರೆಡ್ ಅಥವಾ ಬ್ರೆಡ್ ನಿಂದ ಮಾಡಿದ ಯಾವುದೇ ವಸ್ತುಗಳನ್ನು ಬಿಯರ್ ನೊಂದಿಗೆ ಸೇವಿಸಬಾರದು ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ಎರಡೂ ವಸ್ತುಗಳು ಯೀಸ್ಟ್ ಅನ್ನು ಹೊಂದಿವೆ ಮತ್ತು ನಿಮ್ಮ ಹೊಟ್ಟೆ ಒಂದೇ ಸಮಯದಲ್ಲಿ ಇಷ್ಟು ದೊಡ್ಡ ಪ್ರಮಾಣದ ಯೀಸ್ಟ್ ಅನ್ನು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ. ಇದು ಜೀರ್ಣಕಾರಿ ಸಮಸ್ಯೆಗಳನ್ನು ಅಥವಾ ಕ್ಯಾಂಡಿಡಾ ಬೆಳೆಯುವಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು.

ಇನ್ನೂ, ಡಾರ್ಕ್ ಚಾಕೊಲೇಟ್ ತನ್ನದೇ ಆದ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಆದರೆ ಅದನ್ನು ಬಿಯರ್ ನೊಂದಿಗೆ ಸೇವಿಸುವುದು ಉತ್ತಮವಲ್ಲ. ಇತರ ಆತ್ಮೀಯ ಆಹಾರಗಳಂತೆ, ಚಾಕೊಲೇಟ್ ಕೆಫೀನ್, ಕೊಬ್ಬು ಮತ್ತು ಕೋಕೋವನ್ನು ಹೊಂದಿರುತ್ತದೆ. ಇದನ್ನು ಬಿಯರ್ ನೊಂದಿಗೆ ತಿನ್ನುವುದರಿಂದ ಜಠರಗರುಳಿನ ಸಮಸ್ಯೆಗಳು ಎದುರಾಗುತ್ತವೆ.

ಹಾಗೇ ಬಿಯರ್ ನೊಂದಿಗೆ ಮಸಾಲೆಯುಕ್ತ ವಸ್ತುಗಳನ್ನು ಸೇವಿಸುವುದರಿಂದ ಬಾಯಿಗೆ ರುಚಿ ಎನಿಸಬಹುದು. ಆದರೆ ಇದು ಆರೋಗ್ಯಕ್ಕೆ ಕಹಿಯಾದದ್ದು. ಮಸಾಲೆಯುಕ್ತ ವಸ್ತುಗಳು ಕ್ಯಾಸಿನ್ ಅನ್ನು ಹೊಂದಿರುತ್ತವೆ ಇದು ಹೊಟ್ಟೆಯಲ್ಲಿ ಕಿರಿಕಿರಿ ಮತ್ತು ಇತರ ಸಮಸ್ಯೆಗಳನ್ನು ಉಂಟುಮಾಡಬಹುದು. ಹಾಗಾಗಿ ಬಿಯರ್ ನೊಂದಿಗೆ ಇದರ ಸೇವನೆ ಉತ್ತಮವಲ್ಲ ಅಪಾಯಕಾರಿ.

ಇನ್ನೂ, ಉಪ್ಪಿನೊಂದಿಗೆ ಬಿಯರ್ ಕುಡಿಯಬಾರದು. ಹೆಚ್ಚಿನ ಜನರು ಉಪ್ಪು , ಕಡಲೆಕಾಯಿ, ಒಣ ಹಣ್ಣು ಅಥವಾ ಇತರ ರೀತಿಯ ಉಪ್ಪನ್ನು ಬಿಯರ್ ನೊಂದಿಗೆ ತಿನ್ನಲು ಬಯಸುತ್ತಾರೆ. ಇದರಲ್ಲಿ ಸೋಡಿಯಂ ಅಂಶವೂ ಅಧಿಕವಾಗಿದೆ. ಹಾಗಾಗಿ ಇದು ನಿಮಗೆ ನಿರ್ಜಲೀಕರಣ ಸಮಸ್ಯೆಗಳನ್ನು ಉಂಟುಮಾಡಬಹುದು. ಅಷ್ಟೇ ಅಲ್ಲದೆ, ಈ ಸಂಯೋಜನೆಯು ನಿಮ್ಮ ಎಡಮಾ ಮತ್ತು ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸುತ್ತದೆ.

ಇದಿಷ್ಟೇ ಅಲ್ಲದೆ, ಫ್ರೆಂಚ್ ಫ್ರೈ ಗಳಂತಹ ವಸ್ತುಗಳನ್ನು ಸೇವಿಸಲು ಮರೆಯಬಾರದು. ವಾಸ್ತವವಾಗಿ ಉಪ್ಪು ತಿಂಡಿಗಳು ಹೆಚ್ಚಿನ ಪ್ರಮಾಣದ ಸೋಡಿಯಂ ಅನ್ನು ಹೊಂದಿರುತ್ತವೆ. ಇದು ಆಲ್ಕೋಹಾಲ್ ಕುಡಿಯುವಾಗ ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಕೆಟ್ಟದಾಗಿರಬಹುದು. ಹಾಗೂ ಉಪ್ಪಿನ ವಸ್ತುಗಳು ನಿಮ್ಮ ಬಾಯಾರಿಕೆಯನ್ನು ಹೆಚ್ಚಿಸಬಹುದು. ಇದರಿಂದ ನೀವು ಹೆಚ್ಚು ಕುಡಿಯಬಹುದು. ಹಾಗೇ, ಬಿಯರ್ ಮೂತ್ರವರ್ಧಕ ಪರಿಣಾಮವನ್ನು ಹೊಂದಿದೆ. ಇದು ಹೆಚ್ಚು ಮೂತ್ರವಿಸರ್ಜನೆಗೆ ಕಾರಣವಾಗುತ್ತದೆ.

Leave A Reply

Your email address will not be published.