ಮದುಮಗಳಂತೆ ಸಿಂಗಾರಗೊಂಡು ತನ್ನ ಗಂಡನಿಗೆ ಸರ್ಪ್ರೈಸ್ ನೀಡಿದ ಓಲ್ಡ್ ಲೇಡಿ | ವೈರಲ್ ಆದ ವಿಡಿಯೋ ನೋಡಿ ‘ವಾವ್’ ಎಂದ ನೆಟ್ಟಿಗರು

ಜೀವನ ಎನ್ನುವುದು ಹುಟ್ಟು ಮತ್ತು ಸಾವಿನ ನಡುವಿನ ಸಂಬಂಧ. ಈ ನಮ್ಮ ಬದುಕಲ್ಲಿ ನಾವು ಯಾವ ರೀತಿಲಿ ಇರುತ್ತೇವೆ ಎಂಬುದರ ಮೇಲೆ ಜೀವನ ನಿಂತಿರುತ್ತದೆ. ಬಹುಶಃ ಈ ವೈರಲ್ ಆದ ವಿಡಿಯೋ ನೋಡಿದ್ರೆ ಈ ರೀತಿ ನಾವೂ ಇದ್ರೆ ಜೀವನ ಎಷ್ಟು ಚಂದ ಅಲ್ವಾ ಅನ್ನದೆ ಇರಲು ಸಾಧ್ಯವಿಲ್ಲ.

ಹೌದು. ಪ್ರೀತಿ ಎನ್ನುವುದು ಬಣ್ಣ, ವಯಸ್ಸಿನ ಮೇಲೆ ನಿರ್ಧರಿಸುವುದು ಅಲ್ಲ ಎನ್ನುವುದನ್ನು ಸಾಧಿಸಿ ತೋರಿಸಿದ್ದಾರೆ ಈ ವೃದ್ಧ ಜೋಡಿ. ತಮ್ಮ ವಯಸ್ಸನ್ನು ಲೆಕ್ಕಿಸದೆ, ಯಾವ ರೀತಿ ಪ್ರೀತಿಲಿ ಮುಳುಗಿ ತಮ್ಮೊಳಗೆ ಖುಷಿ ಹಂಚಿಕೊಂಡಿದ್ದಾರೆ ಎಂಬುದನ್ನು ನೀವೇ ನೋಡಿ..

ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ, ಹಣ್ಣುಹಣ್ಣಾದ ಅಜ್ಜಿಯೊಬ್ಬಳು ವಧುವಿನಂತೆ ಅಲಂಕರಿಸಿಕೊಂಡು ಸೋಫಾ ಮೇಲೆ ಕುಳಿತಿದ್ದಾರೆ. ಈಕೆಯನ್ನು ನೋಡಿದ ಅಜ್ಜ ಅತ್ಯಾಶ್ಚರ್ಯದಲ್ಲಿ ಮುಳುಗಿ ಹೋಗಿದ್ದಾರೆ. ಅಷ್ಟು ವಯಸ್ಸಾದರೂ ತಮ್ಮ ಪತ್ನಿಯನ್ನು ಯುವತಿಯಂತೆ ಕಂಡು ಅವರ ಮೊಗದಲ್ಲಿ ಬೀಳುವ ನಗುವೇ ಅವರ ಪ್ರೀತಿಯನ್ನು ತೋರ್ಪಡಿಸುತ್ತಾರೆ.

ಅಷ್ಟಕ್ಕೂ ಈ ಸಕ್ಕತ್ ಪ್ಲಾನ್ ಮಾಡಿದ್ದು, ಕುಟುಂಬ ಸದಸ್ಯರು. ಅಜ್ಜಿಯನ್ನು ಒತ್ತಾಯದಿಂದಲೇ ಹೀಗೆ ಸಿಂಗರಿಸಿ ಕೂರಿಸಿದ್ದಾರೆ. ಆದ್ರೆ, ಅಜ್ಜಿಯ ಒಪ್ಪಿಗೆಗೆ ಮೆಚ್ಚಲೆ ಬೇಕು. ಅಜ್ಜಿ ಇದೆಲ್ಲ ಬೇಡವೆಂದು ನಿರಾಕರಿಸಿದರೋ ಏನೋ, ಆದ್ರೆ ಕೊನೆಗೆ ಮಾತ್ರ ಮನೆಯವರ ಆಸೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಅಜ್ಜಿಯ ಸಿಂಗಾರ ಆದ ಬಳಿಕ ಉಳಿದ ಸದಸ್ಯರು ಅಜ್ಜನನ್ನು ಕರೆದುಕೊಂಡು ಬರಲು ಹೋಗಿದ್ದಾರೆ. ಅಜ್ಜಿ ಕೂಡ, ಅಜ್ಜನ ಪ್ರತಿಕ್ರಿಯೆ ಹೇಗಿರುತ್ತದೆ ಎಂಬ ಉತ್ಸಾಹ, ಕುತೂಹಲದಲ್ಲಿ ಮುಳುಗಿದ್ದಾರೆ.

ಬಳಿಕ ಅಜ್ಜನ ರಿಯಾಕ್ಷನ್ ಗೆ ಅಜ್ಜಿ ಮಾತ್ರವಲ್ಲದೆ ನೆಟ್ಟಿಗರು ಕೂಡ ಒಮ್ಮೆಗೆ ನಾಚಿ ಹೋಗಿದ್ದಾರೆ. ಈತನಕ ಈ ವಿಡಿಯೋ 2 ಮಿಲಿಯನ್​ ಜನರನ್ನು ತಲುಪಿದೆ. 4 ಲಕ್ಷಕ್ಕಿಂತಲೂ ಹೆಚ್ಚು ಜನರು ಇದನ್ನು ಇಷ್ಟಪಟ್ಟಿದ್ದಾರೆ. ಅಲ್ಲದೆ, ಹಲವು ಮಂದಿ ಕಾಮೆಂಟ್ ಮೂಲಕ ಪ್ರೀತಿ ತೊರ್ಪಡಿಸಿದ್ದಾರೆ. ಈ ವಯೋವೃದ್ಧ ದಂಪತಿಯ ಮಧ್ಯೆ ಬೆಸೆದುಕೊಂಡ ಭಾವನಾತ್ಮಕ ಬಂಧ ಕಂಡು ಮೂಕವಿಸ್ಮಿತರಾಗಿದ್ದಾರೆ. ಇದು ಶುದ್ಧವಾದ ಖುಷಿ. ಅವರಿಬ್ಬರ ಕಣ್ಣಲ್ಲಿ ಅದು ಮಿನುಗುತ್ತಿದೆ ಎಂದು ಒಬ್ಬರು ಹೇಳಿದರೆ, ಇನ್ನೊಬ್ಬರು ನನಗನಿಸಿದಂತೆ ಇಂಥ ಶುದ್ಧ ಪ್ರೀತಿಯನ್ನು ನಮ್ಮ ಪೀಳಿಗೆಯವರು ಅನುಭವಿಸಲು ಸಾಧ್ಯವಿಲ್ಲ ಎನ್ನಿಸುತ್ತದೆ ಎಂದಿದ್ದಾರೆ. ಒಟ್ಟಾರೆ, ಈ ಭಾವನಾತ್ಮಕ ಪೋಸ್ಟ್ ಎಲ್ಲೆಡೆ ಸಕ್ಕತ್ ವೈರಲ್ ಆಗಿದೆ.

https://www.instagram.com/reel/Ckr2219AxKV/?igshid=YmMyMTA2M2Y=

Leave A Reply

Your email address will not be published.