BIGG NEWS : ಕಲ್ಯಾಣ ಕರ್ನಾಟಕದ ಜನತೆಗೆ ಗುಡ್ ನ್ಯೂಸ್ !
ರಾಜ್ಯ ಸರ್ಕಾರ ಹೊಸ ಯೋಜನೆ ರೂಪಿಸಿ ಕಲ್ಯಾಣ ಕರ್ನಾಟಕದ ಜನತೆಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ.
ಹೌದು!!!..ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ಮುಂದಿನ ಮೂರು ತಿಂಗಳಲ್ಲಿ 650 ಹೊಸ ಬಸ್ ಗಳನ್ನು ಸೇರಿಸುವ ನಿರೀಕ್ಷೆಯನ್ನು ಮಾಡಿದೆ. ಅದರಲ್ಲಿ ಕೂಡ ವಿಶೇಷವಾಗಿ ಕಲ್ಯಾಣ ಕರ್ನಾಟಕದ ಗ್ರಾಮೀಣ ಪ್ರದೇಶಗಳಿಗೆ ವಿಶ್ವಾಸಾರ್ಹ ಸಾರಿಗೆ ಸೇವೆಗಳನ್ನು ಒದಗಿಸಲು ಬಿಎಸ್ 6 ರ 610 ಸಾಮಾನ್ಯ ಬಸ್ಸುಗಳನ್ನು ಖರೀದಿಸಲು ಶನಿವಾರ ಹೊಸ ಟೆಂಡರ್ ಅಧಿಸೂಚನೆಯನ್ನು ಹೊರಡಿಸಿದೆ.
ಪ್ರಸ್ತುತ, ಕೆಕೆಆರ್ಟಿಸಿ 4,400 ಬಸ್ ಗಳನ್ನು ಹೊಂದಿದ್ದು, ಅವುಗಳಲ್ಲಿ 1,800 ಬಸ್ ಗಳು 9 ಲಕ್ಷ ಕಿ.ಮೀ.ಗಿಂತ ಹೆಚ್ಚು ಓಡಾಟ ನಡೆಸಿವೆ. ‘ನಿಯಮದ ಅನುಸಾರ ಈ ಬಸ್ ಗಳನ್ನು ಸ್ಕ್ರ್ಯಾಪ್ ಮಾಡಬೇಕಾಗಿದೆ. ಆದರೂ ಕೂಡ ಅವುಗಳಲ್ಲಿ ಕೆಲವು 11 ಲಕ್ಷ ಅಥವಾ 12 ಲಕ್ಷ ಕಿ.ಮೀ ಓಡಿದ ನಂತರವೂ ಉತ್ತಮ ಸ್ಥಿತಿಯಲ್ಲಿರುವುದು ವಿಶೇಷ.. ಹಾಗಾಗಿ, ನಾವು ಅವರೊಂದಿಗೆ ಸಾಧ್ಯವಾದಷ್ಟು ಕಾಲ ಕೆಲಸ ಮಾಡುತ್ತೇವೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಈ ಸಂದರ್ಭ ತಿಳಿಸಿದ್ದಾರೆ ಎನ್ನಲಾಗಿದೆ.
ಕ್ರಿಯಾ ಯೋಜನೆಯ ಪ್ರಕಾರ, ಕೆಕೆಆರ್ಟಿಸಿ 2023 ರ ಅಂತ್ಯದ ವೇಳೆಗೆ ಸೇವೆಗಳನ್ನು 4,050 ಶೆಡ್ಯೂಲ್ಗಳಿಂದ 4,500 ಶೆಡ್ಯೂಲ್ಗಳಿಗೆ ಹೆಚ್ಚಿಸಲು ಪ್ರಯತ್ನಿಸುತ್ತದೆ. ‘650 ಹೊಸ ಬಸ್ಸುಗಳಲ್ಲಿ 300 ಬಸ್ ಗಳನ್ನು ಹಳೆಯ ಬಸ್ ಗಳ ಬದಲಿಗೆ ನಿಯೋಜಿಸಲಾಗುತ್ತದೆ. ಉಳಿದ 350 ಬಸ್ ಗಳನ್ನೂ ಹೆಚ್ಚಿನ ಸೇವೆಗಾಗಿ ಬಳಸಲು ತೀರ್ಮಾನ ಕೈಗೊಳ್ಳಲಾಗಿದೆ.
ಇದರ ಜೊತೆಗೆ ಕೆಕೆಆರ್ಟಿಸಿ ಚಾಲಕರು ಮತ್ತು ನಿರ್ವಾಹಕರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಯೋಜನೆ ರೂಪಿಸಲಾಗಿದ್ದು, ಅತಿ ಶೀಘ್ರದಲ್ಲೇ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.