Best Smartphone : ಗಮನಿಸಿ | ಇಲ್ಲಿದೆ 20,000 ರೂ.ಒಳಗೆ ಸಿಗುವ 108MP ಕ್ಯಾಮೆರಾದ ಸ್ಮಾರ್ಟ್ ಫೋನ್!

ಭಾರತದ ಮಾರುಕಟ್ಟೆಯಲ್ಲಿ 108 ಮೆಗಾಫಿಕ್ಸೆಲ್ ಸ್ಮಾರ್ಟ್​​ಫೋನ್​ಗೆ ಭಾರೀ ಬೇಡಿಕೆ ಇದೆ. 20,000 ರೂ. ಒಳಗೆ 108MP ಕ್ಯಾಮೆರಾದ ಉತ್ತಮವಾದ ಸ್ಮಾರ್ಟ್‌ಫೋನ್ಸ್ ಸಿಗುತ್ತದೆ ಎಂದರೆ ಯಾರು ಬೇಡ ಅನ್ನುತ್ತಾರೆ ಅಲ್ವಾ! ಹಾಗಾದ್ರೆ ನೀವು ಖರೀದಿಸಿ ಈ ಉತ್ತಮ ಸ್ಮಾರ್ಟ್​​ಫೋನ್ ನಿಮ್ಮದಾಗಿಸಿ.

ಭಾರತೀಯ ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಮೊಬೈಲ್​ಗಳ ಬಿಡುಗಡೆಯ ಸಂಖ್ಯೆ ಹೇರಳವಾಗಿವೆ. ಈ ಮೊದಲು ಒಳ್ಳೆಯ ಕ್ಯಾಮೆರಾ ಫೋನ್ ಬೇಕೆಂದರೆ ಅದರ ಬೆಲೆ 40,000ಕ್ಕಿಂತ ಅಧಿಕವಿತ್ತು. ಆದರೆ ಈಗ ಹಾಗಿಲ್ಲ ಗ್ರಾಹಕರ ಬೇಡಿಕೆಗೆ ಅನುಗುಣವಾಗುವಂತೆ ಅತಿಕಡಿಮೆ ಬೆಲೆಗೆ ಸ್ಮಾರ್ಟ್ಫೋನ್ ಲಭ್ಯವಿದೆ.

ಅತ್ಯಂತ ಕಡಿಮೆ ಬೆಲೆಗೆ ಪವರ್​ಫುಲ್ ಕ್ಯಾಮೆರಾದ ಫೋನ್​ಗಳು ಅನಾವರಣಗೊಳ್ಳುತ್ತಿದೆ. ಅದರಲ್ಲೂ ಭಾರತದ ಮಾರ್ಕೆಟ್​ನಲ್ಲಿ 108 ಮೆಗಾಫಿಕ್ಸೆಲ್ ಸ್ಮಾರ್ಟ್​​ಫೋನ್​ಗೆ ಭರ್ಜರಿ ಬೇಡಿಕೆ ಇದೆ. ಹಾಗಾಗಿ ಕೆಲ ಕಂಪನಿಗಳು ದೇಶದಲ್ಲಿ ಬಜೆಟ್ ಬೆಲೆಗೆ 108MP ಸಾಮರ್ಥ್ಯದ ಸೆನ್ಸಾರ್​​ನಲ್ಲಿ ಫೋನ್ ರಿಲೀಸ್ ಮಾಡುತ್ತಿದೆ. ಇದರಲ್ಲಿ ಒಪ್ಪೋ ಕಂಪನಿಯೂ ಒಂದು. ಇನ್ನು, 20,000 ರೂ. ಒಳಗಡೆ ಖರೀದಿಸಬಹುದಾದ 108 ಮೆಗಾಫಿಕ್ಸೆಲ್​ನ ಅತ್ಯುತ್ತಮವಾದ ಸ್ಮಾರ್ಟ್​​ಫೋನ್​ಗಳು ಯಾವುದೆಲ್ಲಾ ಎಂದು ನೋಡೋಣ.

ರೆಡ್ಮಿ ನೋಟ್ 10 ಪ್ರೊ ಮ್ಯಾಕ್ಸ್: ಈ ಸ್ಮಾರ್ಟ್​​ಫೋನ್ 6.67 ಇಂಚಿನ FHD+ ಅಮೊಲೊಡ್ ಡಿಸ್​ಪ್ಲೇ ಹೊಂದಿದೆ. ಆಕ್ಟಾಕೋರ್ ಸ್ನಾಪ್​​ಡ್ರಾಗನ್ 732G 8nm ಪ್ರೊಸೆಸರ್ ಅಳವಡಿಸಲಾಗಿದೆ. ಹಾಗೂ ಆಂಡ್ರಾಯ್ಡ್ 11 ಮೂಲಕ ಇದು ಕಾರ್ಯನಿರ್ವಹಿಸುತ್ತದೆ. ಜೊತೆಗೆ 5020mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದ್ದು, 108 ಮೆಗಾಫಿಕ್ಸೆಲ್​ನ ಕ್ಯಾಮೆರಾ ನೀಡಲಾಗಿದೆ. ಮತ್ತು 8 ಮೆಗಾಫಿಕ್ಸೆಲ್ ಮತ್ತು 2+5 ಮೆಗಾಫಿಕ್ಸೆಲ್​​ನ ಕ್ಯಾಮೆರಾ ಜೊತೆಗೆ ಸೆಲ್ಫೀಗಾಗಿ 16 ಮೆಗಾಫಿಕ್ಸೆಲ್​ ಕ್ಯಾಮೆರಾ ನೀಡಲಾಗಿದೆ. ಇದರ ಬೆಲೆ 19,999 ರೂ. ಆಗಿದೆ.

ಮೋಟೋ ಎಡ್ಜ್ 20 ಫ್ಫ್ಯೂಶನ್ : ಇದು 6.67 ಇಂಚಿನ FHD+ ಅಮೊಲೊಡ್ ಡಿಸ್​ಪ್ಲೇ ಹೊಂದಿದೆ. ಆಕ್ಟಾಕೋರ್ ಮೀಡಿಯಾ ಟೆಕ್ ಡೈಮನ್ಸಿಟಿ 800U ಪ್ರೊಸೆಸರ್ ಅಳವಡಿಸಲಾಗಿದ್ದು, ಆಂಡ್ರಾಯ್ಡ್ 11 ಮೂಲಕ ಕಾರ್ಯನಿರ್ವಹಿಸುತ್ತದೆ. ಹಾಗೂ 5000mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದೆ. ಮುಖ್ಯವಾಗಿ 108 ಮೆಗಾಫಿಕ್ಸೆಲ್​ನ ಕ್ಯಾಮೆರಾ ಹೊಂದಿದೆ. ಅಷ್ಟೇ ಅಲ್ಲದೆ, 8 ಮೆಗಾಫಿಕ್ಸೆಲ್​ ಮತ್ತು 2 ಮೆಗಾಫಿಕ್ಸೆಲ್​ ಕ್ಯಾಮೆರಾ ಕೂಡ ಇದೆ. ಸೆಲ್ಫೀಗಾಗಿ 32 ಮೆಗಾಫಿಕ್ಸೆಲ್​ ಕ್ಯಾಮೆರಾ ನೀಡಲಾಗಿದ್ದು, ಇನ್ನೂ ಈ ಸ್ಮಾರ್ಟ್ಫೋನ್ ನ ಬೆಲೆ 18,999 ರೂ. ಆಗಿದೆ.

ರೆಡ್ಮಿ ನೋಟ್ 11 ಪ್ರೊ ಪ್ಲಸ್: 6.67 ಇಂಚಿನ FHD+ ಅಮೊಲೊಡ್ ಡಿಸ್​ಪ್ಲೇ ಹೊಂದಿದೆ. ಆಕ್ಟಾಕೋರ್ ಸ್ನಾಪ್​​ಡ್ರಾಗನ್ 695 8nm ಪ್ರೊಸೆಸರ್ ಜೊತೆಗೆ ಆಂಡ್ರಾಯ್ಡ್ 11 ಮೂಲಕ ಇದು ಕಾರ್ಯನಿರ್ವಹಿಸುತ್ತದೆ. 5000mAh ಸಾಮರ್ಥ್ಯದ ಬಿಗ್ ಬ್ಯಾಟರಿ ನೀಡಲಾಗಿದೆ. ಹಾಗೂ 108 ಮೆಗಾಫಿಕ್ಸೆಲ್​ನ ಕ್ಯಾಮೆರಾ ನೀಡಲಾಗಿದ್ದು, 8 ಮೆಗಾಫಿಕ್ಸೆಲ್ ಮತ್ತು 2 ಮೆಗಾಫಿಕ್ಸೆಲ್​​ನ ಕ್ಯಾಮೆರಾ ಕೂಡ ಇದೆ. ಸೆಲ್ಫೀಗಾಗಿ 16 ಮೆಗಾಫಿಕ್ಸೆಲ್​ ಕ್ಯಾಮೆರಾವನ್ನೂ ನೀಡಲಾಗಿದೆ. ಇದರ ಬೆಲೆ ಸುಮಾರು 19,999 ರೂ. ಆಗಿರುತ್ತದೆ.

ರಿಯಲ್ ಮಿ 9: ಇದು 6.4 ಇಂಚಿನ FHD+ ಅಮೊಲೊಡ್ ಡಿಸ್​ಪ್ಲೇ ಹೊಂದಿದ್ದು, ಆಕ್ಟಾಕೋರ್ ಸ್ನಾಪ್​​ಡ್ರಾಗನ್ 680 6nm ಪ್ರೊಸೆಸರ್ ಅಳವಡಿಸಲಾಗಿದೆ. ಆಂಡ್ರಾಯ್ಡ್ 12 ಮೂಲಕ ಇದು ಕಾರ್ಯನಿರ್ವಹಿಸುತ್ತದೆ. ಅಷ್ಟೇ ಅಲ್ಲದೆ, 5000mAh ಸಾಮರ್ಥ್ಯದ ಬಿಗ್ ಬ್ಯಾಟರಿ ನೀಡಲಾಗಿದೆ. 108 ಮೆಗಾಫಿಕ್ಸೆಲ್​ನ ಕ್ಯಾಮೆರಾ ನೀಡಲಾಗಿದೆ. ಇದರ ಜೊತೆಗೆ 8 ಮೆಗಾಫಿಕ್ಸೆಲ್ ಮತ್ತು 2+2 ಮೆಗಾಫಿಕ್ಸೆಲ್​​ನ ಕ್ಯಾಮೆರಾ ಕೂಡ ಹೊಂದಿದೆ. ಸೆಲ್ಫೀಗಾಗಿ 16 ಮೆಗಾಫಿಕ್ಸೆಲ್​ ಕ್ಯಾಮೆರಾ ನೀಡಲಾಗಿದ್ದು, ಇದರ ದರ 18,999 ರೂ.

ರೆಡ್ಮಿ ನೋಟ್ 11 ಪ್ರೊ: ಈ ಸ್ಮಾರ್ಟ್​​ಫೋನ್ 6.67 ಇಂಚಿನ FHD+ ಅಮೊಲೊಡ್ ಡಿಸ್​ಪ್ಲೇಯನ್ನು ಹೊಂದಿದೆ. ಬಲಿಷ್ಠವಾದ ಆಕ್ಟಾಕೋರ್ ಮೀಡಿಯಾ ಟೆಕ್ ಹೀಲಿಯೊ G96 ಪ್ರೊಸೆಸರ್ ಅಳವಡಿಸಲಾಗಿದೆ. ಇದು ಆಂಡ್ರಾಯ್ಡ್ 11 ಮೂಲಕ ಕಾರ್ಯನಿರ್ವಹಿಸುತ್ತಿದ್ದು, 5000mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದೆ. ಹಾಗೇ 108 ಮೆಗಾಫಿಕ್ಸೆಲ್​ನ ಕ್ಯಾಮೆರಾ ನೀಡಲಾಗಿದ್ದು, ಇದರ ಜೊತೆಗೆ 8 ಮೆಗಾಫಿಕ್ಸೆಲ್, 2 ಮೆಗಾಫಿಕ್ಸೆಲ್​​ನ 2 ಕ್ಯಾಮೆರಾ ಸೌಲಭ್ಯ ಕೂಡ ಇದೆ. ಸೆಲ್ಫೀಗಾಗಿ 16 ಮೆಗಾಫಿಕ್ಸೆಲ್​ ಕ್ಯಾಮೆರಾ ನೀಡಲಾಗಿದೆ. ಇನ್ನು ಈ ಸ್ಮಾರ್ಟ್ಫೋನ್ ನ ಬೆಲೆ 17,999 ರೂ. ಆಗಿದೆ.

ಮೋಟೋ G60: ಈ ಸ್ಮಾರ್ಟ್​​ಫೋನ್ 6.8 ಇಂಚಿನ FHD+ ಅಮೊಲೊಡ್ ಡಿಸ್​ಪ್ಲೇ ಹೊಂದಿದೆ. ಅಷ್ಟೇ ಅಲ್ಲದೆ, ಬಲಿಷ್ಠವಾದ ಆಕ್ಟಾಕೋರ್ ಸ್ನಾಪ್​​ಡ್ರಾಗನ್ 732G ಪ್ರೊಸೆಸರ್ ಅಳವಡಿಸಲಾಗಿದೆ. ಇದು ಆಂಡ್ರಾಯ್ಡ್ 11 ಮೂಲಕ ಕಾರ್ಯನಿರ್ವಹಿಸುತ್ತದೆ. ಹಾಗೇ 6000mAh ಸಾಮರ್ಥ್ಯದ ಬಿಗ್ ಬ್ಯಾಟರಿ ನೀಡಲಾಗಿದೆ. 108 ಮೆಗಾಫಿಕ್ಸೆಲ್​ನ ಕ್ಯಾಮೆರಾ ನೀಡಲಾಗಿದ್ದು, 8 ಮೆಗಾಫಿಕ್ಸೆಲ್ ಮತ್ತು 2 ಮೆಗಾಫಿಕ್ಸೆಲ್​​ನ ಕ್ಯಾಮೆರಾ ಕೂಡ ಇದೆ. ಸೆಲ್ಫೀಗಾಗಿ 32 ಮೆಗಾಫಿಕ್ಸೆಲ್​ ಕ್ಯಾಮೆರಾ ನೀಡಲಾಗಿದೆ. ಇದರ ನಿಖರ ಬೆಲೆ ಸುಮಾರು 15,689 ರೂ. ಆಗಿರುತ್ತದೆ.

ರೆಡ್ಮಿ ನೋಟ್ 10S: ಇದು 6.43 ಇಂಚಿನ FHD+ ಅಮೊಲೊಡ್ ಡಿಸ್​ಪ್ಲೇ ಹೊಂದಿದೆ. ಆಕ್ಟಾಕೋರ್ ಮೀಡಿಯಾ ಟೆಕ್ ಹೀಲಿಯೊ G96 12nm ಪ್ರೊಸೆಸರ್ ಅಳವಡಿಸಲಾಗಿದ್ದು, ಆಂಡ್ರಾಯ್ಡ್ 11 ಮೂಲಕ ಕಾರ್ಯನಿರ್ವಹಿಸುತ್ತದೆ. ಹಾಗೇ, 5000mAh ಸಾಮರ್ಥ್ಯದ ಬಿಗ್ ಬ್ಯಾಟರಿ ನೀಡಲಾಗಿದೆ. 108 ಮೆಗಾಫಿಕ್ಸೆಲ್​ನ ಕ್ಯಾಮೆರಾ ಕೂಡ ನೀಡಲಾಗಿದೆ. ಜೊತೆಗೆ 8 ಮೆಗಾಫಿಕ್ಸೆಲ್ ಮತ್ತು 2+2 ಮೆಗಾಫಿಕ್ಸೆಲ್​​ನ ಕ್ಯಾಮೆರಾ ಇದೆ. ಸೆಲ್ಫೀಗಾಗಿ 16 ಮೆಗಾಫಿಕ್ಸೆಲ್​ ಕ್ಯಾಮೆರಾ ನೀಡಲಾಗಿದೆ. ಇನ್ನೂ ಇದರ ದರ 17,499 ರೂ. ಆಗಿದೆ.

Leave A Reply

Your email address will not be published.