Best Smartphone : ಗಮನಿಸಿ | ಇಲ್ಲಿದೆ 20,000 ರೂ.ಒಳಗೆ ಸಿಗುವ 108MP ಕ್ಯಾಮೆರಾದ ಸ್ಮಾರ್ಟ್ ಫೋನ್!
ಭಾರತದ ಮಾರುಕಟ್ಟೆಯಲ್ಲಿ 108 ಮೆಗಾಫಿಕ್ಸೆಲ್ ಸ್ಮಾರ್ಟ್ಫೋನ್ಗೆ ಭಾರೀ ಬೇಡಿಕೆ ಇದೆ. 20,000 ರೂ. ಒಳಗೆ 108MP ಕ್ಯಾಮೆರಾದ ಉತ್ತಮವಾದ ಸ್ಮಾರ್ಟ್ಫೋನ್ಸ್ ಸಿಗುತ್ತದೆ ಎಂದರೆ ಯಾರು ಬೇಡ ಅನ್ನುತ್ತಾರೆ ಅಲ್ವಾ! ಹಾಗಾದ್ರೆ ನೀವು ಖರೀದಿಸಿ ಈ ಉತ್ತಮ ಸ್ಮಾರ್ಟ್ಫೋನ್ ನಿಮ್ಮದಾಗಿಸಿ.
ಭಾರತೀಯ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಮೊಬೈಲ್ಗಳ ಬಿಡುಗಡೆಯ ಸಂಖ್ಯೆ ಹೇರಳವಾಗಿವೆ. ಈ ಮೊದಲು ಒಳ್ಳೆಯ ಕ್ಯಾಮೆರಾ ಫೋನ್ ಬೇಕೆಂದರೆ ಅದರ ಬೆಲೆ 40,000ಕ್ಕಿಂತ ಅಧಿಕವಿತ್ತು. ಆದರೆ ಈಗ ಹಾಗಿಲ್ಲ ಗ್ರಾಹಕರ ಬೇಡಿಕೆಗೆ ಅನುಗುಣವಾಗುವಂತೆ ಅತಿಕಡಿಮೆ ಬೆಲೆಗೆ ಸ್ಮಾರ್ಟ್ಫೋನ್ ಲಭ್ಯವಿದೆ.
ಅತ್ಯಂತ ಕಡಿಮೆ ಬೆಲೆಗೆ ಪವರ್ಫುಲ್ ಕ್ಯಾಮೆರಾದ ಫೋನ್ಗಳು ಅನಾವರಣಗೊಳ್ಳುತ್ತಿದೆ. ಅದರಲ್ಲೂ ಭಾರತದ ಮಾರ್ಕೆಟ್ನಲ್ಲಿ 108 ಮೆಗಾಫಿಕ್ಸೆಲ್ ಸ್ಮಾರ್ಟ್ಫೋನ್ಗೆ ಭರ್ಜರಿ ಬೇಡಿಕೆ ಇದೆ. ಹಾಗಾಗಿ ಕೆಲ ಕಂಪನಿಗಳು ದೇಶದಲ್ಲಿ ಬಜೆಟ್ ಬೆಲೆಗೆ 108MP ಸಾಮರ್ಥ್ಯದ ಸೆನ್ಸಾರ್ನಲ್ಲಿ ಫೋನ್ ರಿಲೀಸ್ ಮಾಡುತ್ತಿದೆ. ಇದರಲ್ಲಿ ಒಪ್ಪೋ ಕಂಪನಿಯೂ ಒಂದು. ಇನ್ನು, 20,000 ರೂ. ಒಳಗಡೆ ಖರೀದಿಸಬಹುದಾದ 108 ಮೆಗಾಫಿಕ್ಸೆಲ್ನ ಅತ್ಯುತ್ತಮವಾದ ಸ್ಮಾರ್ಟ್ಫೋನ್ಗಳು ಯಾವುದೆಲ್ಲಾ ಎಂದು ನೋಡೋಣ.
ರೆಡ್ಮಿ ನೋಟ್ 10 ಪ್ರೊ ಮ್ಯಾಕ್ಸ್: ಈ ಸ್ಮಾರ್ಟ್ಫೋನ್ 6.67 ಇಂಚಿನ FHD+ ಅಮೊಲೊಡ್ ಡಿಸ್ಪ್ಲೇ ಹೊಂದಿದೆ. ಆಕ್ಟಾಕೋರ್ ಸ್ನಾಪ್ಡ್ರಾಗನ್ 732G 8nm ಪ್ರೊಸೆಸರ್ ಅಳವಡಿಸಲಾಗಿದೆ. ಹಾಗೂ ಆಂಡ್ರಾಯ್ಡ್ 11 ಮೂಲಕ ಇದು ಕಾರ್ಯನಿರ್ವಹಿಸುತ್ತದೆ. ಜೊತೆಗೆ 5020mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದ್ದು, 108 ಮೆಗಾಫಿಕ್ಸೆಲ್ನ ಕ್ಯಾಮೆರಾ ನೀಡಲಾಗಿದೆ. ಮತ್ತು 8 ಮೆಗಾಫಿಕ್ಸೆಲ್ ಮತ್ತು 2+5 ಮೆಗಾಫಿಕ್ಸೆಲ್ನ ಕ್ಯಾಮೆರಾ ಜೊತೆಗೆ ಸೆಲ್ಫೀಗಾಗಿ 16 ಮೆಗಾಫಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. ಇದರ ಬೆಲೆ 19,999 ರೂ. ಆಗಿದೆ.
ಮೋಟೋ ಎಡ್ಜ್ 20 ಫ್ಫ್ಯೂಶನ್ : ಇದು 6.67 ಇಂಚಿನ FHD+ ಅಮೊಲೊಡ್ ಡಿಸ್ಪ್ಲೇ ಹೊಂದಿದೆ. ಆಕ್ಟಾಕೋರ್ ಮೀಡಿಯಾ ಟೆಕ್ ಡೈಮನ್ಸಿಟಿ 800U ಪ್ರೊಸೆಸರ್ ಅಳವಡಿಸಲಾಗಿದ್ದು, ಆಂಡ್ರಾಯ್ಡ್ 11 ಮೂಲಕ ಕಾರ್ಯನಿರ್ವಹಿಸುತ್ತದೆ. ಹಾಗೂ 5000mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದೆ. ಮುಖ್ಯವಾಗಿ 108 ಮೆಗಾಫಿಕ್ಸೆಲ್ನ ಕ್ಯಾಮೆರಾ ಹೊಂದಿದೆ. ಅಷ್ಟೇ ಅಲ್ಲದೆ, 8 ಮೆಗಾಫಿಕ್ಸೆಲ್ ಮತ್ತು 2 ಮೆಗಾಫಿಕ್ಸೆಲ್ ಕ್ಯಾಮೆರಾ ಕೂಡ ಇದೆ. ಸೆಲ್ಫೀಗಾಗಿ 32 ಮೆಗಾಫಿಕ್ಸೆಲ್ ಕ್ಯಾಮೆರಾ ನೀಡಲಾಗಿದ್ದು, ಇನ್ನೂ ಈ ಸ್ಮಾರ್ಟ್ಫೋನ್ ನ ಬೆಲೆ 18,999 ರೂ. ಆಗಿದೆ.
ರೆಡ್ಮಿ ನೋಟ್ 11 ಪ್ರೊ ಪ್ಲಸ್: 6.67 ಇಂಚಿನ FHD+ ಅಮೊಲೊಡ್ ಡಿಸ್ಪ್ಲೇ ಹೊಂದಿದೆ. ಆಕ್ಟಾಕೋರ್ ಸ್ನಾಪ್ಡ್ರಾಗನ್ 695 8nm ಪ್ರೊಸೆಸರ್ ಜೊತೆಗೆ ಆಂಡ್ರಾಯ್ಡ್ 11 ಮೂಲಕ ಇದು ಕಾರ್ಯನಿರ್ವಹಿಸುತ್ತದೆ. 5000mAh ಸಾಮರ್ಥ್ಯದ ಬಿಗ್ ಬ್ಯಾಟರಿ ನೀಡಲಾಗಿದೆ. ಹಾಗೂ 108 ಮೆಗಾಫಿಕ್ಸೆಲ್ನ ಕ್ಯಾಮೆರಾ ನೀಡಲಾಗಿದ್ದು, 8 ಮೆಗಾಫಿಕ್ಸೆಲ್ ಮತ್ತು 2 ಮೆಗಾಫಿಕ್ಸೆಲ್ನ ಕ್ಯಾಮೆರಾ ಕೂಡ ಇದೆ. ಸೆಲ್ಫೀಗಾಗಿ 16 ಮೆಗಾಫಿಕ್ಸೆಲ್ ಕ್ಯಾಮೆರಾವನ್ನೂ ನೀಡಲಾಗಿದೆ. ಇದರ ಬೆಲೆ ಸುಮಾರು 19,999 ರೂ. ಆಗಿರುತ್ತದೆ.
ರಿಯಲ್ ಮಿ 9: ಇದು 6.4 ಇಂಚಿನ FHD+ ಅಮೊಲೊಡ್ ಡಿಸ್ಪ್ಲೇ ಹೊಂದಿದ್ದು, ಆಕ್ಟಾಕೋರ್ ಸ್ನಾಪ್ಡ್ರಾಗನ್ 680 6nm ಪ್ರೊಸೆಸರ್ ಅಳವಡಿಸಲಾಗಿದೆ. ಆಂಡ್ರಾಯ್ಡ್ 12 ಮೂಲಕ ಇದು ಕಾರ್ಯನಿರ್ವಹಿಸುತ್ತದೆ. ಅಷ್ಟೇ ಅಲ್ಲದೆ, 5000mAh ಸಾಮರ್ಥ್ಯದ ಬಿಗ್ ಬ್ಯಾಟರಿ ನೀಡಲಾಗಿದೆ. 108 ಮೆಗಾಫಿಕ್ಸೆಲ್ನ ಕ್ಯಾಮೆರಾ ನೀಡಲಾಗಿದೆ. ಇದರ ಜೊತೆಗೆ 8 ಮೆಗಾಫಿಕ್ಸೆಲ್ ಮತ್ತು 2+2 ಮೆಗಾಫಿಕ್ಸೆಲ್ನ ಕ್ಯಾಮೆರಾ ಕೂಡ ಹೊಂದಿದೆ. ಸೆಲ್ಫೀಗಾಗಿ 16 ಮೆಗಾಫಿಕ್ಸೆಲ್ ಕ್ಯಾಮೆರಾ ನೀಡಲಾಗಿದ್ದು, ಇದರ ದರ 18,999 ರೂ.
ರೆಡ್ಮಿ ನೋಟ್ 11 ಪ್ರೊ: ಈ ಸ್ಮಾರ್ಟ್ಫೋನ್ 6.67 ಇಂಚಿನ FHD+ ಅಮೊಲೊಡ್ ಡಿಸ್ಪ್ಲೇಯನ್ನು ಹೊಂದಿದೆ. ಬಲಿಷ್ಠವಾದ ಆಕ್ಟಾಕೋರ್ ಮೀಡಿಯಾ ಟೆಕ್ ಹೀಲಿಯೊ G96 ಪ್ರೊಸೆಸರ್ ಅಳವಡಿಸಲಾಗಿದೆ. ಇದು ಆಂಡ್ರಾಯ್ಡ್ 11 ಮೂಲಕ ಕಾರ್ಯನಿರ್ವಹಿಸುತ್ತಿದ್ದು, 5000mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದೆ. ಹಾಗೇ 108 ಮೆಗಾಫಿಕ್ಸೆಲ್ನ ಕ್ಯಾಮೆರಾ ನೀಡಲಾಗಿದ್ದು, ಇದರ ಜೊತೆಗೆ 8 ಮೆಗಾಫಿಕ್ಸೆಲ್, 2 ಮೆಗಾಫಿಕ್ಸೆಲ್ನ 2 ಕ್ಯಾಮೆರಾ ಸೌಲಭ್ಯ ಕೂಡ ಇದೆ. ಸೆಲ್ಫೀಗಾಗಿ 16 ಮೆಗಾಫಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. ಇನ್ನು ಈ ಸ್ಮಾರ್ಟ್ಫೋನ್ ನ ಬೆಲೆ 17,999 ರೂ. ಆಗಿದೆ.
ಮೋಟೋ G60: ಈ ಸ್ಮಾರ್ಟ್ಫೋನ್ 6.8 ಇಂಚಿನ FHD+ ಅಮೊಲೊಡ್ ಡಿಸ್ಪ್ಲೇ ಹೊಂದಿದೆ. ಅಷ್ಟೇ ಅಲ್ಲದೆ, ಬಲಿಷ್ಠವಾದ ಆಕ್ಟಾಕೋರ್ ಸ್ನಾಪ್ಡ್ರಾಗನ್ 732G ಪ್ರೊಸೆಸರ್ ಅಳವಡಿಸಲಾಗಿದೆ. ಇದು ಆಂಡ್ರಾಯ್ಡ್ 11 ಮೂಲಕ ಕಾರ್ಯನಿರ್ವಹಿಸುತ್ತದೆ. ಹಾಗೇ 6000mAh ಸಾಮರ್ಥ್ಯದ ಬಿಗ್ ಬ್ಯಾಟರಿ ನೀಡಲಾಗಿದೆ. 108 ಮೆಗಾಫಿಕ್ಸೆಲ್ನ ಕ್ಯಾಮೆರಾ ನೀಡಲಾಗಿದ್ದು, 8 ಮೆಗಾಫಿಕ್ಸೆಲ್ ಮತ್ತು 2 ಮೆಗಾಫಿಕ್ಸೆಲ್ನ ಕ್ಯಾಮೆರಾ ಕೂಡ ಇದೆ. ಸೆಲ್ಫೀಗಾಗಿ 32 ಮೆಗಾಫಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. ಇದರ ನಿಖರ ಬೆಲೆ ಸುಮಾರು 15,689 ರೂ. ಆಗಿರುತ್ತದೆ.
ರೆಡ್ಮಿ ನೋಟ್ 10S: ಇದು 6.43 ಇಂಚಿನ FHD+ ಅಮೊಲೊಡ್ ಡಿಸ್ಪ್ಲೇ ಹೊಂದಿದೆ. ಆಕ್ಟಾಕೋರ್ ಮೀಡಿಯಾ ಟೆಕ್ ಹೀಲಿಯೊ G96 12nm ಪ್ರೊಸೆಸರ್ ಅಳವಡಿಸಲಾಗಿದ್ದು, ಆಂಡ್ರಾಯ್ಡ್ 11 ಮೂಲಕ ಕಾರ್ಯನಿರ್ವಹಿಸುತ್ತದೆ. ಹಾಗೇ, 5000mAh ಸಾಮರ್ಥ್ಯದ ಬಿಗ್ ಬ್ಯಾಟರಿ ನೀಡಲಾಗಿದೆ. 108 ಮೆಗಾಫಿಕ್ಸೆಲ್ನ ಕ್ಯಾಮೆರಾ ಕೂಡ ನೀಡಲಾಗಿದೆ. ಜೊತೆಗೆ 8 ಮೆಗಾಫಿಕ್ಸೆಲ್ ಮತ್ತು 2+2 ಮೆಗಾಫಿಕ್ಸೆಲ್ನ ಕ್ಯಾಮೆರಾ ಇದೆ. ಸೆಲ್ಫೀಗಾಗಿ 16 ಮೆಗಾಫಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. ಇನ್ನೂ ಇದರ ದರ 17,499 ರೂ. ಆಗಿದೆ.