Ghee Benefits : ಶೀತ ಹಾಗೂ ಗೊರಕೆ ಸಮಸ್ಯೆಗೆ ತುಪ್ಪ ಬೆಸ್ಟ್ ಚಾಯ್ಸ್!

ಆರೋಗ್ಯಕರ ಜೀವನ ಶೈಲಿ ಹಾಗೂ ಆಹಾರವು ನಮ್ಮ ಆರೋಗ್ಯ ಹೇಗಿದೆ ಎಂಬುದನ್ನು ನಿರ್ಧರಿಸುತ್ತದೆ ಎಂದರೂ ತಪ್ಪಾಗಲಾರದು. ಅಂತಹ ಆರೋಗ್ಯ ಪದಾರ್ಥದಲ್ಲಿ ತುಪ್ಪವು ಒಂದು ಒಳ್ಳೆಯ ಆಹಾರವಾಗಿದೆ. ಪುರಾತನ ಕಾಲದಲ್ಲಿ ತುಪ್ಪವನ್ನು ಅನೇಕ ಸಮಸ್ಯೆಗಳನ್ನು ಹೋಗಲಾಡಿಸಲು ಬಳಸಲಾಗುತ್ತಿತ್ತು. ತುಪ್ಪ ತಿಂದರೆ ಕೊಬ್ಬು, ದೇಹದ ತೂಕ ಹೆಚ್ಚುತ್ತದೆ ಎಂದು ಕೆಲವರು ನಂಬಿದ್ದಾರೆ. ಆದರೆ ಆರೋಗ್ಯ ತಜ್ಞರ ಪ್ರಕಾರ ನಿಯಮಿತ ತುಪ್ಪದ ಸೇವನೆಯು ನಮ್ಮ ಆರೋಗ್ಯಕ್ಕೆ ಅನೇಕ ಪ್ರಯೋಜನ ನೀಡುತ್ತದೆ ಎಂದು ಹೇಳುತ್ತಾರೆ.

 

ತುಪ್ಪದ ಸೇವನೆಯಿಂದ ಮಾತ್ರವಲ್ಲದೆ ಹಚ್ಚುವುದರಿಂದಲೂ ಅನೇಕ ಪ್ರಯೋಜನ ಪಡೆಯಬಹುದಾಗಿದೆ. ಪಾದಗಳ ಅಡಿಭಾಗಕ್ಕೆ ತುಪ್ಪವನ್ನು ಹಚ್ಚುವುದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ತುಂಬಾ ಪ್ರಯೋಜನಕಾರಿಯಾಗಿದೆ. ಹಾಗಾದರೆ ತುಪ್ಪವನ್ನು ಅಂಗಾಲಿಗೆ ಹಚ್ಚುವುದರಿಂದ ಆಗುವ ಲಾಭಗಳೇನು ಎಂಬುದರ ಬಗ್ಗೆ ತಿಳಿಯೋಣ ಬನ್ನಿ.

ತುಪ್ಪವನ್ನು ಪಾದದ ಅಡಿಭಾಗಕ್ಕೆ ಹಚ್ಚುವುದರಿಂದ ಒಳ್ಳೆಯ ನಿದ್ದೆ ಬರುವುದಲ್ಲದೆ, ಮಾನಸಿಕ ನೆಮ್ಮದಿಯನ್ನೂ ಪಡೆಯಬಹುದು ಹಾಗೂ ಆಯಾಸವು ದೂರವಾಗುತ್ತದೆ.

ಸಾಮಾನ್ಯವಾಗಿ ಕೆಲವರು ತಮ್ಮ ಗೊರಕೆಯ ಬಗ್ಗೆ ತುಂಬಾ ಚಿಂತಿತರಾಗಿರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ರಾತ್ರಿ ಮಲಗುವ ಮುನ್ನ ತುಪ್ಪವನ್ನು ಪಾದದ ಅಡಿಭಾಗಕ್ಕೆ ಹಚ್ಚುವುದರಿಂದ ಗೊರಕೆಯ ಸಮಸ್ಯೆ ನಿವಾರಣೆಯಾಗುತ್ತದೆ. ನಿಮ್ಮ ಮೂಳೆಗಳನ್ನು ಬಲಪಡಿಸಲು ನೀವು ಬಯಸಿದರೆ, ತುಪ್ಪದಿಂದ ಪಾದದ ಅಡಿಭಾಗಕ್ಕೆ ಮಸಾಜ್ ಮಾಡಿ. ಹೀಗೆ ಮಾಡುವುದರಿಂದ ಪರಿಹಾರ ಪಡೆಯಬಹುದು.

ಉಗುರು ಬೆಚ್ಚಗಿನ ತುಪ್ಪವನ್ನು ಪಾದದ ಅಡಿಭಾಗಕ್ಕೆ ಹಚ್ಚಿದರೆ ಶೀತ ಮತ್ತು ಜ್ವರದಿಂದಲೂ ಪರಿಹಾರ ಸಿಗುತ್ತದೆ. ರಕ್ತ ಪರಿಚಲನೆಯನ್ನು ಹೆಚ್ಚಿಸಲು ನೀವು ವಾರಕ್ಕೆ ಎರಡು ಬಾರಿಯಾದರೂ ತುಪ್ಪವನ್ನು ಅಡಿಭಾಗಕ್ಕೆ ಅನ್ವಯಿಸುವುದರಿಂದ ಕಾಲು ನೋವಿನಿಂದಲೂ ಪರಿಹಾರ ಪಡೆಯಬಹುದು. ಮತ್ತು ಬೆನ್ನು ನೋವನ್ನು ಸಹ ಗುಣಪಡಿಸಬಹುದು.

Leave A Reply

Your email address will not be published.