ಚುಂಚನಗಿರಿಯಲ್ಲಿ ವಧುವಿಗಾಗಿ ಮುಗಿಬಿದ್ದ ಸಾವಿರಾರು ಹುಡುಗರು!!

ಮಂಡ್ಯ : ಚುಂಚನಗಿರಿಯಲ್ಲಿ ವಧು-ವರ ಸಮಾವೇಶ ನಡೆಸಲಾಗಿತ್ತು. ಈ ವೇಳೆ ಬಹುದೊಡ್ಡ ಸತ್ಯವೊಂದು ಬಯಲಾಗಿದೆ. ಅಲ್ಲಿಗೆ 200 ಹುಡುಗಿಯರು ಮತ್ತು ಬರೋಬ್ಬರಿ 10,000 ಹುಡುಗರು ವಧು-ವರಾನ್ವೇಷಣೆಗೆ ಆಗಮಿಸಿದ್ದರು.


Ad Widget

Ad Widget

Ad Widget

Ad Widget
Ad Widget

Ad Widget

Ad Widget

ಈ ವೇಳೆ ವಧು-ವರಾನ್ವೇಷಣೆಯಲ್ಲಿ ಫುಲ್​​ ಟ್ರಾಫಿಕ್​ ಜಾಮ್​​ ಆಗಿದೆ. ಎಷ್ಟೋ ಕಿಲೋಮೀಟರ್ ದೂರದಲ್ಲಿ ಸಾಲು ಸಾಲಾಗಿ ಜನರೆಲ್ಲಾ ನಿಂತಿದ್ದರು. ಇದನ್ನು ನೋಡಿದರೇ ತಿಳಿಯುತ್ತಿತ್ತು ಹುಡುಗಿಯರಿಗೆ ಫುಲ್​​ ಡಿಮ್ಯಾಂಡ್​​​ ಇದೆ ಎಂದು. ವಧು ಸಿಗದೆ ಬೇಸತ್ತು ಸಾವಿರಾರು ಹುಡುಗರು ಸಮಾವೇಶಕ್ಕೆ ಆಗಮಿಸುತ್ತಿದ್ದರು.

ಇದರಿಂದ ಒಕ್ಕಲಿಗ ಹುಡುಗರಿಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ ಎಂಬುದು ಚುಂಚನಗಿರಿಯ ವಧು-ವರ ಸಮಾವೇಶದಲ್ಲಿ ಸತ್ಯ ಬಯಲಾಗಿದೆ. ಸಾವಿರಾರು ಒಕ್ಕಲಿಗ ಹುಡುಗರು ವಧುವಿಗಾಗಿ ಮುಗಿಬಿದ್ದಿದ್ದಾರೆ. ರಾಜ್ಯ ಮಟ್ಟದ ಸಮಾವೇಶಕ್ಕೆ 200 ಒಕ್ಕಲಿಗ ಹುಡುಗಿಯರು ಬಂದಿದ್ದು, ಸುಮಾರು 10 ಸಾವಿರಕ್ಕೂ ಅಧಿಕ ಹುಡುಗರು ತಮ್ಮ ಬಾಳಸಂಗಾತಿಯನ್ನು ಅರಸಿ ಬಂದಿದ್ದಾರೆ.

ಹುಡುಗರ ಸಾವಿರಾರು ಅರ್ಜಿಯನ್ನು ನೋಡಿ ಸಮಾವೇಶದ ಆಯೋಜಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇನ್ನೂ, ವಧುವಿಗಾಗಿ ಅಲ್ಲಿ ಮಾರುದ್ದ ಕ್ಯೂ ನಿಂತಿದ್ದು ನೋಡಿದ್ರೆ ಶಾಕ್ ಆಗೋದು ಖಂಡಿತ. ಚುಂಚನಗಿರಿಯು ಸಾವಿರಾರು ಹುಡುಗರು, ಅವರ ಪೋಷಕರಿಂದ ತುಂಬಿ ಹೋಗಿದೆ. ನಾಗಮಂಗಲ ತಾಲೂಕಿನ ಚುಂಚನಗಿರಿಯಲ್ಲಿ ಸಮಾಜ ಸಂಪರ್ಕ ವೇದಿಕೆ, ರಾಜ್ಯ ಚುಂಚಾದ್ರಿ ಮಹಿಳಾ ಒಕ್ಕೂಟ ಈ ಸಮಾವೇಶವನ್ನು ಏರ್ಪಡಿಸಿದ್ದರು.

error: Content is protected !!
Scroll to Top
%d bloggers like this: