ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ | ಯೂ ಟರ್ನ್ ಹೊಡೆದ ಜಿ.ಸುಧಾಕರನ್

ಶಬರಿಮಲೆ : ಪ್ರಸಿದ್ದ ಯಾತ್ರಸ್ಥಳ ಶಬರಿಮಲೆಯ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶ ಕುರಿತು ಸಿಪಿಎಂ ನಾಯಕ ಜಿ.ಸುಧಾಕರನ್‌ ಯೂಟರ್ನ್ ಹೊಡೆದಿದ್ದಾರೆ.

ಈ ಹಿಂದೆ ಸ್ತ್ರೀಯರ ಪ್ರವೇಶ ವಿಚಾರದಲ್ಲಿ ಪಿಣರಾಯಿ ವಿಜಯನ್‌ ಸರಕಾರ ಕೈಗೊಂಡಿದ್ದ ನಿರ್ಧಾರವನ್ನು ಬೆಂಬಲಿಸಿದ್ದ ಅವರು, ಈಗ “ಮಹಿಳೆಯರಿಗೆ ನಿಷೇಧ ಹೇರುವ ಪದ್ಧತಿಯನ್ನು ಬದಲಿಸಬೇಕಾದ ಅಗತ್ಯವಿಲ್ಲ’ ಎಂದಿದ್ದಾರೆ.

“ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕಿರುವ ಕನಿಷ್ಠ ವಯೋಮಿತಿ 60 ವರ್ಷ. ಅದನ್ನು ಬದಲಿಸಲಾಗಿಲ್ಲ. ಅಯ್ಯಪ್ಪಸ್ವಾಮಿ ಬ್ರಹ್ಮಚಾರಿಯಾಗಿರುವ ಕಾರಣ, ಈ ವಯೋಮಾನಕ್ಕಿಂತ ಕೆಳಗಿನವರು ದೇಗುಲವನ್ನು ಪ್ರವೇಶಿಸುವಂತಿಲ್ಲ. ಇದು ನಾವೆಲ್ಲರೂ ಸ್ವೀಕರಿಸುವ ಮತ್ತು ಗೌರವಿಸುವಂಥ ವಿಚಾರ’ ಎಂದು ಸುಧಾಕರನ್‌ ಅವರು ಹೇಳಿದ್ದಾರೆ.

Leave A Reply

Your email address will not be published.