Tattoo On Body : ಇನ್ಮುಂದೆ ಈ ರೀತಿ ಮಾಡಿಕೊಂಡರೆ ಸರಕಾರಿ ಕೆಲಸ ಸಿಗೋದು ಡೌಟು!
ಇಂದಿನ ಫ್ಯಾಷನ್ ಲೋಕದಲ್ಲಿ ಯುವ ಜನರಲ್ಲಿ ಹಚ್ಚೆಗಳ ಕ್ರೇಜ್ ಹೆಚ್ಚುತ್ತಿದೆ. ಅದ್ರಂತೆ, ಯುವ ಜನತೆ ತಮ್ಮ ಕೈಗಳು, ಪಾದಗಳು ಮತ್ತು ಬೆನ್ನಿನಂತಹ ವಿವಿಧ ಭಾಗಗಳಲ್ಲಿ ಹಚ್ಚೆಗಳನ್ನ ಹಾಕಿಸಿಕೊಳ್ಳುತ್ತಿದ್ದಾರೆ. ಕೆಲವರಂತೂ ಮೈ ಪೂರ್ತಿ ಹಚ್ಚೆ ಹಾಕಿಸಿಕೊಂಡು ಗಿನ್ನಿಸ್ ರೆಕಾರ್ಡ್ ಕೂಡಾ ಬರೆದಿದ್ದಾರೆ. ನಿಮಗೂ ಈ ಹಚ್ಚೆ ಹಾಕಿಸಿಕೊಳ್ಳೊ ಹವ್ಯಾಸ ಇದ್ಯಾ? ಹಾಗಾದರೆ ನಿಮಗೆ ಸರ್ಕಾರಿ ಕೆಲಸ ಸಿಗುವುದು ಅನುಮಾನವೇ!
ಹೌದು, ನಮ್ಮ ದೇಶದಲ್ಲಿ ಅನೇಕ ಸರ್ಕಾರಿ ಉದ್ಯೋಗಗಳಿವೆ, ಇದರಲ್ಲಿ ಅಭ್ಯರ್ಥಿಯ ದೇಹದ ಮೇಲೆ ಹಚ್ಚೆಗಳನ್ನ ನಿಷೇಧಿಸಲಾಗಿದೆ. ಸರ್ಕಾರಿ ಉದ್ಯೋಗಕ್ಕಾಗಿ ಪರೀಕ್ಷೆ, ಸಂದರ್ಶನದಲ್ಲಿ ಉತ್ತೀರ್ಣರಾಗುವ ಮೂಲಕ ಅದನ್ನ ಪಡೆಯುವುದು ಕಷ್ಟ. ಅದ್ರಂತೆ, ಅದರಲ್ಲೇ ಉಳಿಯಲು ಈ ರೀತಿಯ ತ್ಯಾಗಗಳನ್ನ ಮಾಡಬೇಕಾಗುತ್ತದೆ.
ಭಾರತದ ಅನೇಕ ಉನ್ನತ ಮಟ್ಟದ ಉದ್ಯೋಗಗಳಲ್ಲಿ ಹಚ್ಚೆಗಳ ಬಗ್ಗೆ ಅತ್ಯಂತ ಕಟ್ಟುನಿಟ್ಟಾದ ನಿಯಮಗಳನ್ನ ಮಾಡಲಾಗಿದೆ. ಯಾವೆಲ್ಲಾ ಸರ್ಕಾರಿ ಉದ್ಯೋಗದ ಅಭ್ಯರ್ಥಿಗಳು ದೇಹದ ಯಾವುದೇ ಭಾಗದಲ್ಲಿ ಹಚ್ಚೆ ಹಾಕಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದರ ಮಾಹಿತಿ ಇಲ್ಲಿದೆ.
ಭಾರತೀಯ ಪೊಲೀಸ್ ಸೇವೆ IPS (Indian Police Service)
ಭಾರತೀಯ ಕಂದಾಯ ಸೇವೆ IRS (Internal Revenue Service)
ಭಾರತೀಯ ವಿದೇಶಾಂಗ ಸೇವೆ IFS (Indian Foreign Service)
ಭಾರತೀಯ ವಾಯುಪಡೆ (Indian Air Force)
ಇಂಡಿಯನ್ ಕೋಸ್ಟ್ ಗಾರ್ಡ್ (Indian Coast Guard)
ಭಾರತೀಯ ಸೇನೆ (Indian Army)
ಭಾರತೀಯ ನೌಕಾಪಡೆ ಪೊಲೀಸ್ (Indian Navy Police).
ಈ ಉದ್ಯೋಗಗಳ ಅಭ್ಯರ್ಥಿಗಳ ದೇಹದ ಮೇಲೆ ಯಾವುದೇ ಹಚ್ಚೆ ಕಂಡುಬಂದರೂ ಅವರನ್ನ ತಿರಸ್ಕರಿಸಲಾಗುತ್ತದೆ. ಇದಕ್ಕೆಲ್ಲಾ ಕಾರಣಗಳಿವೆ. ಅವೇನು ಅನ್ನೋದನ್ನ ಒಂದೊಂದಾಗಿ ನೋಡೋಣ.
ದೇಹದ ಮೇಲೆ ಹಚ್ಚೆ ಹಾಕಿಸಿಕೊಳ್ಳುವ ವ್ಯಕ್ತಿಯು ಶಿಸ್ತನ್ನ ಅನುಸರಿಸುವುದಿಲ್ಲ. ಹಾಗೂ ಕೆಲಸಕ್ಕಿಂತ ಅವರ ಹವ್ಯಾಸಗಳು ಹೆಚ್ಚು ಮುಖ್ಯವಾಗಿ ಇರುತ್ತದೆ ಎಂದು
ಕೆಲವರು ನಂಬುತ್ತಾರೆ.
ಹಚ್ಚೆಗಳಿಂದ ಅನೇಕ ರೀತಿಯ ಕಾಯಿಲೆಗಳು ಬರುತ್ತದೆ. ಇದು ಎಚ್‌ಐವಿ, ಚರ್ಮದ ಕಾಯಿಲೆ ಮತ್ತು ಹೆಪಟೈಟಿಸ್ ಎ ಮತ್ತು ಬಿ ನಂತಹ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಹಚ್ಚೆ ಹೊಂದಿರುವ ವ್ಯಕ್ತಿಯು ಉದ್ಯೋಗವನ್ನ ಪಡೆಯಲು ಸಾಧ್ಯವಾಗುವುದಿಲ್ಲ. ಏಕೆಂದರೆ, ಅವರೇನಾದರೂ ಸಿಕ್ಕಿಬಿದ್ದರೆ ಅವರನ್ನು ಹಚ್ಚೆಯೊಂದಿಗೆ ಗುರುತಿಸಬಹುದು, ಇದು ಭದ್ರತೆಗೆ ಹಾನಿ ತರುತ್ತೆ. ಹಾಗಾಗಿ ಭದ್ರತಾ ಪಡೆಗಳಲ್ಲಿ ಇವರನ್ನು ಸೇರಿಸಿಕೊಳ್ಳುವುದಿಲ್ಲ.