ಹಿಂದೂ ವಿದ್ಯಾರ್ಥಿಯ ಮೇಲೆ ಹಲ್ಲೆ | ವ್ಯಾಪಕ ಆಕ್ರೋಶ!

Share the Article

ಸಮಾಜದ ಶಾಂತಿ ಕದಡುವ ಜನರು ಎಲ್ಲಿ ಹೋದರು ಇದ್ದೇ ಇರುತ್ತಾರೆ. ಹಾಗೆಯೇ ಹೈದರಾಬಾದ್ ನಗರದ ಐಸಿಎಫ್‌ಎಐ ಫೌಂಡೇಶನ್ ಫಾರ್ ಹೈಯರ್ ಎಜುಕೇಶನ್ (ಐಎಫ್‌ಎಚ್‌ಇ)ನ ವಿದ್ಯಾರ್ಥಿಯೊಬ್ಬನಿಗೆ ಇನ್ಸ್ಟಿಟ್ಯೂಟ್‌ನ ಇತರ ವಿದ್ಯಾರ್ಥಿಗಳೇ ಥಳಿಸಿರುವ ಘಟನೆ ನಡೆದಿದೆ.

ಸ್ಕೂಲ್‌ನ ಕೆಲವು ವಿದ್ಯಾರ್ಥಿಗಳು ಪ್ರವಾದಿ ಮೊಹಮ್ಮದ್ ವಿರುದ್ಧ ಅವಹೇಳನಕಾರಿ ಕಾಮೆಂಟ್‌ಗಳಿಗಾಗಿ ಕ್ಯಾಂಪಸ್ ಹಾಸ್ಟೆಲ್ ಕೊಠಡಿಯಲ್ಲಿ ವಿದ್ಯಾರ್ಥಿಯನ್ನು ಥಳಿಸಿದ್ದಾರೆ. ಯುವಕನಿಗೆ ‘ಜೈ ಮಾತಾ ಜಿ ‘ ಮತ್ತು ‘ಅಲ್ಲಾ ಹು ಅಕ್ಬರ್’ ಘೋಷಣೆಗಳನ್ನು ಕೂಗುವಂತೆ ಒತ್ತಾಯಿಸಿದ್ದಾರೆ.

ಈ ವೀಡಿಯೋ ದಲ್ಲಿ ವಿದ್ಯಾರ್ಥಿಗಳು ಸಂತ್ರಸ್ತ ಯುವಕನ್ನು ಥಳಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

https://twitter.com/KaustuvaRGupta/status/1591401618117111808?ref_src=twsrc%5Etfw%7Ctwcamp%5Etweetembed%7Ctwterm%5E1591401618117111808%7Ctwgr%5Eec1337883b75ded0f22c529eff559b7a7414952b%7Ctwcon%5Es1_c10&ref_url=https%3A%2F%2Fzeenews.india.com%2Fkannada%2Findia%2Fhyderabad-student-beaten-up-forced-to-chant-allah-hu-akbar-jai-mata-di-fir-registered-watch-video-101366

ಪ್ರಸ್ತುತ ಸಂತ್ರಸ್ತ ವಿದ್ಯಾರ್ಥಿ 15-20 ವ್ಯಕ್ತಿಗಳು ನನ್ನನ್ನು ದೈಹಿಕವಾಗಿ ಮತ್ತು ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ದೂರು ನೀಡಿದ್ದಾರೆ.

ಈಗಾಗಲೇ ಈ ಕುರಿತು 307, 323, 450, 342, 506 ಆರ್/ಡಬ್ಲ್ಯೂ 34 ಐಪಿಸಿ, ಸೆಕ್ಷನ್ 4 (i)(ii) ತೆಲಂಗಾಣ ರ‍್ಯಾಗಿಂಗ್ ನಿಷೇಧ ಕಾಯಿದೆ ಅಡಿ ಎಫ್‌ಐಆರ್ ದಾಖಲಿಸಲಾಗಿದೆ. ಮತ್ತು ರ‍್ಯಾಗಿಂಗ್ ನಿಷೇಧ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್‌ಎಚ್‌ಒ ಶಂಕರಪಲ್ಲಿ ಎಎನ್‌ಐಗೆ ಮಾಹಿತಿ ತಿಳಿಸಿದ್ದಾರೆ.

Leave A Reply

Your email address will not be published.