ಮಹಿಳೆಯರೇ ಈತನ ಟಾರ್ಗೆಟ್ | MRI ಸ್ಕ್ಯಾನಿಂಗ್ ನಲ್ಲಿ ನಡೆಯುತ್ತಿತ್ತು ಈತನ ನೀಚ ಕೃತ್ಯ | ಹೇಗೆ ಅಂತೀರಾ?

ಈ ರೇಡಿಯಾಲಜಿಸ್ಟ್ MRI ಸ್ಕ್ಯಾನಿಂಗ್ ಮಾಡಿಸಲು ಬರುತ್ತಿದ್ದ ಮಹಿಳೆಯರು ತಮ್ಮ ಬಟ್ಟೆ ಬದಲಾಯಿಸುವುದನ್ನು ಮೊಬೈಲ್ ಕ್ಯಾಮೆರಾದಲ್ಲಿ ರಹಸ್ಯವಾಗಿ ವಿಡಿಯೋ ಮಾಡುತ್ತಿದ್ದ. ಈತನ ನೀಚ ಕೃತ್ಯ ಬಯಲಾಗಿ ಆತನನ್ನು ಈಗಾಗಲೇ ಬಂಧಿಸಲಾಗಿದೆ. ಇನ್ನೂ ಈ ಘಟನೆ ಕೊಚ್ಚಿಯಲ್ಲಿ ನಡೆದಿದೆ.

ಅಂಜಿತ್ ಅಲಿಯಾಸ್ ನಂದು (24) ಎಂಬಾತ ಬಂಧಿತ ರೇಡಿಯಾಲಜಿಸ್ಟ್ . ಪತ್ತನಂತಿಟ್ಟ ಜಿಲ್ಲೆಯ ಆಡೂರ್ ಪಟ್ಟಣದಲ್ಲಿ ಜನರಲ್ ಆಸ್ಪತ್ರೆಯ ಬಳಿ ಇರುವ ದೇವಿ ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಈತ ರೇಡಿಯಾಲಜಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ.

ಎಝಂಕುಲಂ ನಿವಾಸಿ ನೀಡಿದ ದೂರನ್ನು ಆಧರಿಸಿ ನಂದುನನ್ನು ಬಂಧಿಸಲಾಗಿದೆ. ಇನ್ನೂ, ಈ ವಿಚಾರ ಎಲ್ಲೂ ಹೊರಗಡೆ ಸುದ್ದಿಯಾಗದಂತೆ ತಡೆಯಲು ಲ್ಯಾಬ್ ಆಡಳಿತ ಮಂಡಳಿ ಬಹಳಷ್ಟು ಪ್ರಯತ್ನ ಪಟ್ಟಿದೆ. ಅಷ್ಟೇ ಅಲ್ಲದೆ, ಮಹಿಳೆಗೆ ಹಣದ ಆಮಿಷವನ್ನು ಒಡ್ಡಿದೆ ಎನ್ನಲಾಗಿದೆ. ಆದರೆ ಯಾವುದೇ ಆಮಿಷಕ್ಕೂ ಒಳಗಾಗದೆ ಮಹಿಳೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಈ ಬಗ್ಗೆ ಆರೋಪಿಯನ್ನು ಬಂಧಿಸಲಾಗಿದೆ.

ಈತ ಈ ನೀಚ ಕೃತ್ಯವನ್ನು ಹೇಗೆ ನಡೆಸುತ್ತಿದ್ದನೆಂದರೆ, ಕೇವಲ ಕ್ಯಾಮೆರಾ ಮಾತ್ರ ಕಾಣುವಂತೆ ಮೊಬೈಲ್‌ಗೆ ಬಟ್ಟೆಯನ್ನು ಸುತ್ತಿ ಕೋಣೆಯ ಕಪ್‌ಬೋರ್ಡ್‌ನಲ್ಲಿ ಯಾರಿಗೂ ತಿಳಿಯದಂತೆ ಇಡುತ್ತಿದ್ದ. ನಂತರ ಆ ಕೋಣೆಗೆ ಬಟ್ಟೆ ಬದಲಾಯಿಸಲು ಬರುವ ಮಹಿಳೆಯರ ವೀಡಿಯೋ ರೆಕಾರ್ಡ್ ಆಗುತ್ತಿತ್ತು. ಆದರೆ ಆ ಕೋಣೆಗೆ ಬಟ್ಟೆ ಬದಲಾಯಿಸಲು ಬಂದ ಒಬ್ಬರು ಮಹಿಳೆಗೆ ಇದರ ಅನುಮಾನ ಬಂದು ಪರಿಶೀಲಿಸಿದ್ದಾರೆ. ಆಗ ಮೊಬೈಲ್ ಪತ್ತೆಯಾಗಿದೆ.

ತಕ್ಷಣವೇ ಆಕೆ ರೆಕಾರ್ಡ್ ಆಗಿರುವ ದೃಶ್ಯಗಳನ್ನು ಡಿಲೀಟ್ ಮಾಡಿ ಎಂದು ಲ್ಯಾಬ್‌ನಲ್ಲಿ ಜೋರಾಗಿ ಗಲಾಟೆ ಮಾಡಿದ್ದಾರೆ. ಈ ವೇಳೆ ಆರೋಪಿ ನಂದು ಮಹಿಳೆಯ ಕೈಯಿಂದ ಮೊಬೈಲ್ ಕಿತ್ತುಕೊಂಡಿದ್ದಾನೆ. ಅಷ್ಟರಲ್ಲಿ ಅಲ್ಲಿದ್ದ ಜನರೆಲ್ಲಾ ಆ ಸ್ಥಳಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ನೀಡಿ ಆರೋಪಿಯನ್ನು ಹಿಡಿದುಕೊಟ್ಟಿದ್ದಾರೆ.

ಪೋಲಿಸರು ಆತನಿಂದ ಮೊಬೈಲ್ ಪಡೆದು ಪರಿಶೀಲಿಸಿದಾಗ ಮಹಿಳೆಯರ 8 ಬೆತ್ತಲೆ ವಿಡಿಯೋಗಳು ರೆಕಾರ್ಡ್ ಆಗಿರುವುದು ಪತ್ತೆಯಾಗಿದೆ. ಈ ಪ್ರಕರಣದ ಬಗ್ಗೆ ಮಾತನಾಡಿದ ಡಿವೈಎಸ್‌ಪಿ ಬಿನು, ಮೊಬೈಲ್ ಅನ್ನು ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಲಾಗಿದೆ ಇತರೆ ದೃಶ್ಯಗಳು ಡಿಲೀಟ್ ಆಗಿದೆಯಾ ಎಂಬುದನ್ನು ಪತ್ತೆ ಹಚ್ಚಲಾಗುವುದು ಎಂದು ತಿಳಿಸಿದ್ದಾರೆ. ಡಿವೈಎಫ್‌ಐ, ಯೂತ್ ಕಾಂಗ್ರೆಸ್ ಮತ್ತು ಬಿಜೆಪಿ ಪ್ರತಿಭಟನೆಯಿಂದಾಗಿ ಲ್ಯಾಬ್ ಇದೀಗ ಅನ್ನು ಮುಚ್ಚಲಾಗಿದೆ.

Leave A Reply

Your email address will not be published.