ನಾಯಿ ಲಿಂಬೆ ಹಣ್ಣು ತಿಂದ್ರೆ ಏನಾಗುತ್ತೆ?

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ನೂರಾರು ವಿಡಿಯೋ, ಫೋಟೋ ಗಳು ಟ್ರೊಲ್ ಆಗ್ತಾನೆ ಇರುತ್ತೆ. ಕೆಲವೊಂದಷ್ಟು ವಿಡಿಯೋ ಅಂತೂ ನೋಡಿ ಹೊಟ್ಟೆ ತುಂಬಾ ನಗುವ ಹಾಗೆ ಇರ್ತಾವೆ. ಇನ್ನು ಕೆಲವೊಂದು ಜನರ ಭಾವನೆಗೆ ಹತ್ತಿರ ಆಗುತ್ತವೆ.

 

ಪ್ರಾಣಿಗಳ ವಿಡಿಯೋ ಕ್ಯೂಟ್ ಆಗಿರುತ್ತೆ. ಅದನ್ನ ನೋಡ್ತಾ ಇದ್ರೆ ಎಂಥವರಿಗಾದ್ರು ಮೂಡ್ ರಿಫ್ರೆಶ್ ಆಗುತ್ತೆ ಬಿಡಿ. ಇಷ್ಟೆಲ್ಲಾ ಯಾಕೆ ಹೇಳ್ತಾ ಇದೀನಿ ಗೊತ್ತಾ. ಇಲ್ಲೊಂದು ವಿಡಿಯೋ ವೈರಲ್ ಆಗಿದೆ.

ಸಾಕು ಪ್ರಾಣಿಗಳನ್ನು ಇತ್ತೀಚೆಗೆ ಸಾಕುವುದು ಸಖತ್ ಟ್ರೆಂಡ್ ಆಗಿದೆ ಬಿಡಿ. ಮನೆ ಹೊರಗೆ ಕಾವಲು ಕಾಯ ಬೇಕಾದ ನಾಯಿಯು, ತಮ್ಮ ಮಾಲೀಕರೊಂದಿಗೆ ಬೆಚ್ಚಗೆ ಮಲಗಿರುತ್ತವೆ. ಅವರೊಂದಿಗೆ ಇದ್ದು , ಅವರ ಬುದ್ದಿನೆ ಅರ್ಧ ಪ್ರಾಣಿಗಳು ಕಲಿತಿರುತ್ತವೆ. ತಮ್ಮ ಮಾಲೀಕರು ಏನು ಕೊಟ್ರು ತಿಂತಾವೆ.

ಅದೇ ರೀತಿಯಾಗಿ ಇಲ್ಲೊಬ್ಬ ತನ್ನ ನಾಯಿಯನ್ನು ಪಕ್ಕದಲ್ಲಿ ಇಟ್ಟುಕೊಂಡು ದೊಡ್ಡ ಗಾತ್ರದ ಲಿಂಬೆ ಹಣ್ಣನ್ನು ಕಟ್ ಮಾಡ್ತಾ ಇದ್ದಾನೆ. ಅದು ಚಿಕನ್ ಕಟ್ ಮಾಡೋ ಚಾಕುವಿನಲ್ಲಿ. ಈ ನಾಯಿಗೆ ಕ್ಯೂರಾಸಿಟಿ ತಡೆಯಲು ಆಗದೆ, ತನ್ನ ಮಾಲೀಕನಲ್ಲಿ ಅದನ್ನು ಕೊಡುವಂತೆ ಪೀಡಿಸುತ್ತದೆ. ಈತ ನಾಯಿಯ ಬಾಯಿಗೆ ಹಾಕುತ್ತಾನೆ. ಅದು ಲಿಂಬೆ ಹಣ್ಣು ಆದರಿಂದ ಹುಳಿ ಆಯ್ತು. ನಾಯಿ ಅದನ್ನು ತುಪ್ಪಿ, ತನ್ನ ಮಾಲೀಕನಿಗೆ ಯಾವ ರೀತಿಯಾಗಿ ಹೋಡ್ಯುತ್ತದೆ ನೋಡಿ.

ಇದಂತೂ ತುಂಬಾ ಕ್ಯೂಟ್ ಆಗಿದೆ ವಿಡಿಯೋ. ಇನ್ಸ್ಟಾಗ್ರಾಂ ಖಾತೆಯಲ್ಲಿ ಹಾಕಿ ಎರಡು ದಿನದಲ್ಲಿ 6.5 ಮಿಲಿಯನ್ ಗಳಷ್ಟು ಲೈಕ್ಸ್ ಪಡೆದಿದೆ. 36.3 ಲಕ್ಷದಷ್ಟು ಕಮೆಂಟ್ಸ್ ಗಳು ಬಂದಿದೆ. ನೀವು ನೋಡಿ ವಿಡಿಯೋವನ್ನು. ಎಂಜಾಯ್ ಮಾಡಿ.

https://www.instagram.com/reel/ChlWvuGherX/?igshid=YmMyMTA2M2Y=

Leave A Reply

Your email address will not be published.