ಅರೆ, ಈ ರೀತಿ ಕೂಡಾ ಗ್ರಾಹಕರನ್ನು ಸೆಳೆಯಬಹುದೇ? ಈತನ ವೈಖರಿಗೆ ಕೆಲವರ ಪ್ರಶಂಸೆ ಮತ್ತೆ ಕೆಲವರ ಕಿಡಿ!
ಗ್ರಾಹಕರನ್ನು ಸೆಳೆಯಲು ವ್ಯಾಪಾರಿಗಳು ಮೋಡಿಯ ಮಾತಾಡುತ್ತಾ, ಏನೇನೋ ಸರ್ಕಸ್ ಮಾಡಿ ನಮ್ಮ ಕೈಯಿಂದ ವ್ಯಾಪಾರ ಮಾಡಿಸುತ್ತಾರೆ. ಅವರ ಮಾತಿನ ಚಳಕ, ಕೈ ಚಳಕಕ್ಕೆ ನಾವು ಮಾರು ಹೋಗುತ್ತೇವೆ. ಇದೀಗ ಇಲ್ಲೊಂದು ವಿಡಿಯೋ ಬಾರಿ ವೈರಲ್ ಆಗುತ್ತಿದೆ. ಒಬ್ಬ ವ್ಯಾಪಾರಿಯು ಗ್ರಾಹಕರನ್ನು ಸೆಳೆಯಲು ಏನೆಲ್ಲಾ ಮಾಡುತ್ತಿದ್ದಾನೆಂದು ನೀವೇ ನೋಡಿ.
ದೆಹಲಿಯ ಸರೋಜಿನಿ ನಗರವು ರಾಜಧಾನಿಯಲ್ಲೇ ಬೀದಿ ಶಾಪಿಂಗ್‌ಗಾಗಿ ಅತ್ಯಂತ ಜನಪ್ರಿಯವಾದ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಅಲ್ಲಿ ಅಗ್ಗದ ಬೆಲೆಯಲ್ಲಿ ಟ್ರೆಂಡಿ ಬಟ್ಟೆಗಳನ್ನು ಖರೀದಿಸಲು ಮಹಿಳೆಯರು ಮುಗಿ ಬೀಳುತ್ತಾರೆ. ಮಾರುಕಟ್ಟೆಯು ಸಾಮಾನ್ಯವಾಗಿ ತುಂಬಾ ಜನಸಂದಣಿಯಿಂದ ಕೂಡಿರುತ್ತದೆ, ವಿಶೇಷವಾಗಿ ವಾರಾಂತ್ಯದಲ್ಲಿ ಚೌಕಾಸಿ ಮಾಡಿ ಅಗ್ಗದ ಬೆಲೆಯಲ್ಲಿ ಭರ್ಜರಿಯಾಗಿ ಶಾಪಿಂಗ್ ಮಾಡಬಹುದು.
ಬೀದಿ ವ್ಯಾಪಾರಿಗಳು ಗ್ರಾಹಕರನ್ನು ಆಕರ್ಷಿಸಲು ತಮಾಷೆಯ ಮಾರ್ಗ ತನ್ನದಾಗಿಸಿಕೊಂಡಿರುವ ವಿಡಿಯೋ ಇದಾಗಿದೆ. ಇದರಲ್ಲಿ ವ್ಯಾಪಾರಿಯೂ ರಾಗವಾಗಿ ಹೆಸರು ಕೂಗಿ ‘ಲೆಲೋನಾ..’ ಎಂದು ಕರೆಯುತ್ತಿರುವ ಈ ವಿಡಿಯೋ ಬಹಳ ಹಾಸ್ಯಾಸ್ಪದವಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋವೊಂದು ಇದೀಗ ವೈರಲ್ ಆಗುತ್ತಿದ್ದು ನಕ್ಕು ನಗಿಸುವಂತಿದೆ. ಈ ವಿಡಿಯೋ ಇನ್‌ಸ್ಟಾಗ್ರಾಂನಲ್ಲಿ wevidh_india ಪುಟದಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಇದು ತಮಾಷೆಯ ವಿಡಿಯೋ ಎನಿಸಿದರೂ ಗ್ರಾಹಕರನ್ನು ಈ ವ್ಯಕ್ತಿ ‘ಚಿಂಕಿ ಮಿಂಕಿ’ ಎಂದು ಕರೆಯುತ್ತಾನೆ. ಜಾತಿ ನಿಂದನೆಯಾಗಿದೆ ಎಂದು ಕೆಲವು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.