ಇದಪ್ಪಾ ವರಸೆ ಅಂದ್ರೆ | ಪೊಲೀಸರಿಗೇ ಚಾಲೆಂಜ್ ಹಾಕಿ ಕಳ್ಳರು | ಠಾಣೆ ಪಕ್ಕದಲ್ಲೇ ಸರಗಳ್ಳತನ, ನಂತರ…

Share the Article

ಕಳ್ಳತನ ಮಾಡಿ ಎಂಜಾಯ್ ಮಾಡುತ್ತಿದ್ದ ಕಳ್ಳರೀರ್ವರು ಈಗ ಪೊಲೀಸ್ ಅತಿಥಿಗಳಾದ ಘಟನೆಯೊಂದು ನಡೆದಿದೆ. ಈ ಕಳ್ಳರು ಪೊಲೀಸರಿಗೆ ಸವಾಲೆಸೆದು ಕಳ್ಳತನ ಮಾಡಿ ಇದೀಗ ಸಿಕ್ಕಿಬಿದ್ದಿದ್ದಾರೆ. ಪೊಲೀಸ್ ಠಾಣೆಯ ಹತ್ತಿರ ಸರಗಳ್ಳತನ ಮಾಡಿ, ಒಂದು ವರ್ಷ ತನ್ನ ಚಾಲಕಿ ತನ ತೋರಿಸುತ್ತಿದ್ದ ಕಳ್ಳರು ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಹರೀಶ್ ಹಾಗೂ ಸುರೇಶ್‍ ಎಂಬುವವರೇ ಈ ಖದೀಮರು. ಇವರು ಒಂದು ವರ್ಷದಿಂದ ಗಿರಿನಗರ ಹಾಗೂ ಸಿ.ಕೆ ಅಚ್ಚುಕಟ್ಟು ಸೇರಿ ಹಲವು ಠಾಣೆಗಳ ಪಕ್ಕದ ರಸ್ತೆಯಲ್ಲೇ ಸರಗಳ್ಳತನ ಮಾಡುತ್ತಿದ್ದರು. ಪ್ರತಿಯೊಂದು ತಿಂಗಳು ಒಂದೊಂದು ಠಾಣೆಯ ಪಕ್ಕದ ರಸ್ತೆಯಲ್ಲಿ ಕಳ್ಳತನ ಎಸಗುತ್ತಿದ್ದರು. ಒಮ್ಮೆ ಸರಗಳ್ಳತನ ಮಾಡಿದ್ರೆ ಇಡೀ ತಿಂಗಳು ಎಂದಿನಂತೆ ತಮ್ಮ ಕೆಲಸ ಮಾಡುತ್ತಿದ್ದರು.

ಸುರೇಶ್ ಝೋಮೋಟೋ ಬಾಯ್ ಆಗಿ ಕೆಲಸ ಮಾಡಿದ್ರೆ, ಹರೀಶ್ ವಿದ್ಯಾರ್ಥಿಯಾಗಿದ್ದ. ಐಷಾರಾಮಿ ಜೀವನ ನಡೆಸಲು ಆರೋಪಿಗಳು ಸರಗಳ್ಳತನ ಮಾಡ್ತಿದ್ದರು. ವೀಕ್ ಎಂಡ್ ನಲ್ಲಿ ಮೋಜು ಮಸ್ತಿ ಮಾಡಲು ಪಬ್ ಗೆ ಹೋಗ್ತಿದ್ದರು. ಹೀಗೆ ಮಾಡುತ್ತಾ ಒಂದು ವರ್ಷದಿಂದಲೂ ಪೊಲೀಸರಿಗೆ ಸಿಗದೆ ನಾಪತ್ತೆ ಆಗುತ್ತಿದ್ದರು. ಇವರು ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದರು.

ಈ ಹಿನ್ನೆಲೆಯಲ್ಲಿ ಗಿರಿನಗರ ಪೊಲೀಸರು ಸರಗಳ್ಳರ ಬಂಧನಕ್ಕೆ ವಿಶೇಷ ತಂಡಗಳನ್ನು ರಚನೆ ಮಾಡಿದ್ದರು. ಸದ್ಯ ಸಿಸಿಟಿವಿ ಹಾಗೂ ಕೆಲ ಟೆಕ್ನಿಕಲ್ ಎವಿಡೆನ್ಸ್ ನಿಂದ ಗಿರಿನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Leave A Reply

Your email address will not be published.