ಹೆಂಡತಿಯೊಬ್ಬಳು ದಾರಿ ತಪ್ಪಿದರೆ ಅಥವಾ ಅನೈತಿಕ ಸಂಬಂಧದ ಸುಳಿಯಲ್ಲಿ ಬಿದ್ದರೆ ಆಗುವ ಅನಾಹುತಗಳ ಬಗ್ಗೆ ಈಗಾಗಲೇ ಹಲವು ವರದಿಗಳು ಬಂದಿದೆ. ಇಲ್ಲೂ ಕೂಡಾ ಒಬ್ಬಳು ತನ್ನ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ ಗಂಡನನ್ನು ಯಾವ ರೀತಿ ಬರ್ಬರವಾಗಿ ಕೊಲೆ ಮಾಡಿದ್ದಾಳೆ ಎಂದರೆ ನಿಜಕ್ಕೂ ಆಘಾತವಾಗುತ್ತದೆ.
ತನ್ನ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ್ದಕ್ಕೆ ಪತ್ನಿಯೊಬ್ಬಳು ಪ್ರಿಯಕರನ ಜೊತೆ ಸೇರಿಕೊಂಡು ಕಟ್ಟಿಕೊಂಡ ಗಂಡನನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ. ಈ ಬರ್ಬರ ಕೃತ್ಯ ಬೆಂಗಳೂರಿನ ವಿದ್ಯಾರಣ್ಯಪುರಂ ನ ವಡೇರಹಳ್ಳಿಯಲ್ಲಿ ನಡೆದಿದೆ. ಈ ಸಂಬಂಧ ಇದೀಗ ಮಹಿಳೆ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನೇಪಾಳ ಮೂಲದ ರಾಕೇಶ್ ತೋಮಂಗ ಕೊಲೆಯಾದ ವ್ಯಕ್ತಿ. ಪತ್ನಿ ದೇಬಿತಂಬಾಗ್ ಹಾಗೂ ಆಕೆಯ ಪ್ರಿಯಕರ ಬಾಬು ಅಲಿ ಬಂಧಿತ ಆರೋಪಿಗಳು. ಅನೈತಿಕ ಸಂಬಂಧವನ್ನು ಪ್ರಶ್ನೆ ಮಾಡಿದ್ದಕ್ಕೆ ಕೋಪಗೊಂಡ ಪತ್ನಿ ತನ್ನ ಪ್ರಿಯಕರನ ಜೊತೆ ಸೇರಿಕೊಂಡು ಪತಿಯನ್ನು ನವೆಂಬರ್ 6ರಂದು ಹಿಸುಕಿ ಕೊಲೆ ಮಾಡಿ ನಂತರ ಏನೂ ಮಾಡೇ ಇಲ್ಲ ಎನ್ನುವ ರೀತಿಯಲ್ಲಿ ನಾಟಕ ಮಾಡಿದ್ದರು.
ದೇಬಿತಂಬಾಗ್ ಹಾಗೂ ಪ್ರಿಯಕರ ಬಾಬು ಅಲಿ ನಡುವೆ ಅನೈತಿಕ ಸಂಬಂಧ ಇತ್ತು. ಈ ವಿಚಾರ ಪತಿ ರಾಕೇಶ್ ತೋಮಂಗ ಗೊತ್ತಾಗಿದ್ದು, ಈ ಬಗ್ಗೆ ಪತ್ನಿ ದೇಬಿತಂಬಾಗಳನ್ನ ಪ್ರಶ್ನೆ ಮಾಡಿದ್ದಾನೆ. ಈ ವೇಳೆ ಇಬ್ಬರ ನಡುವೆ ಗಲಾಟೆಯಾಗಿದೆ. ಬಳಿಕ ಪತ್ನಿ ಮತ್ತು ಪ್ರಿಯಕರ ಸೇರಿ ತೋಮಂಗನನ್ನು ನವೆಂಬರ್ 6ರಂದು ಕೊಲೆ ಮಾಡಿದ್ದರು.
ಸದ್ಯ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದೀಗ ಇಬ್ಬರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.