ಅರೇ ವಿಚಿತ್ರ : ಅಪರೂಪದಲ್ಲಿ ಅಪರೂಪದ ಘಟನೆ | ಮನುಷ್ಯನ ಮುಖ ಹೋಲುವ ಮರಿಗೆ ಜನ್ಮ ನೀಡಿತು ಮೇಕೆ | ನೋಡಲು ಸೇರಿದ ಜನಸಾಗರ !

ಪರಿಸರದಲ್ಲಿ ನಡೆಯುವ ಕೆಲವೊಂದು ಬದಲಾವಣೆಗಳಿಗೆ ಅಥವಾ ಸಂಭವಗಳಿಗೆ ಪರಿಸರವೇ ಸಾಟಿ. ನಮ್ಮ ಸುತ್ತ ಮುತ್ತಲು ನಡೆಯುವ ಪ್ರಕೃತಿ ವಿಸ್ಮಯಗಳು ಎಲ್ಲವನ್ನು ತಿಳಿಯಲು ಮನುಷ್ಯ ಸೃಷ್ಟಿ ಮಾಡಿದ ತಂತ್ರಜ್ಞಾಗಳಿಂದ ಸಾಧ್ಯವಿಲ್ಲ ಆದರೆ ಪ್ರಯತ್ನಗಳು ನಡೆಯುತ್ತಲೇ ಇವೆ. ಹೀಗೆ ಮಾಡಿದ ಪ್ರಯತ್ನಗಳಲ್ಲಿ ವಿಜ್ಞಾನ ನಮ್ಮನ್ನು ಅನೇಕ ರೀತಿಯಲ್ಲಿ ಗೊಂದಲಕ್ಕೀಡು ಮಾಡುತ್ತದೆ. ಸಸ್ಯ ಮತ್ತು ಪ್ರಾಣಿಗಳ ಬಗೆಗಿನ ವಿಲಕ್ಷಣವಾದ ಸಂಗತಿಗಳು ನಡೆಯುತ್ತಲೇ ಇರುತ್ತದೆ ಹಾಗೂ ನಾವು ಇಂತಹ ಘಟನೆ ನಿಲ್ಲಿಸಲು ಸಹ ಸಾಧ್ಯವಿಲ್ಲ. ಈ ಎಲ್ಲಾ ಕ್ರಿಯೆಗಳು ಪ್ರಕೃತ್ತಿ ನಿಮಿತ್ತ ಆಗಿದೆ. ಹಾಗೆಯೇ ಕೆಲವೊಮ್ಮೆ ವಿಚಿತ್ರ ಘಟನೆಗಳು ನಮ್ಮನ್ನು ಚಕಿತಗೊಳಿಸುತ್ತವೆ. ಅಸಹಜ ರೀತಿಯ ದೃಶ್ಯಗಳು ನಂಬಲಸಾಧ್ಯ ಎನ್ನುವಂತೆ ಮಾಡುತ್ತವೆ.ಹಾಗೆಯೇ ಈ ಕುರಿತ ನಿದರ್ಶನಗಳನ್ನು ನೋಡಿದ್ದೇವೆ ಕೇಳಿದ್ದೇವೆ.

 

ಇಲ್ಲಿ ನಾವು ನಿಮಗೆ ವಿಶೇಷ ಸಂಗತಿಯನ್ನು ಹೇಳಲು ಹೊರಟಿದ್ದೇವೆ ಅದೇನೆಂದರೆ ಮೇಕೆಯೊಂದು ಮನುಷ್ಯನನ್ನು ಹೋಲುವ ಮರಿಗೆ ಜನ್ಮ ನೀಡಿರುವ ವಿಚಿತ್ರ ಘಟನೆ ನಡೆದಿದೆ. ಈ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದು ಜನರು ನಿಜಕ್ಕೂ ಆಶ್ಚರ್ಯಭರಿತರಾಗಿ ನೋಡುತ್ತಿದ್ದಾರೆ.

ಹೌದು ಮಧ್ಯಪ್ರದೇಶದ ವಿದಿಶಾದ ಸಿರೊಂಜ್‌ನ ಸೆಮಲ್ವೇಡಿ ಗ್ರಾಮದಲ್ಲಿ ಮೇಕೆಯೊಂದು ಮನುಷ್ಯನ ಮುಖ ಹೋಲುವ ಮರಿಗೆ ಜನ್ಮ ನೀಡಿದೆ. ಮರಿಯ ಸಂಪೂರ್ಣ ರೂಪ ಮಾನವನಂತಿದೆ ಹಾಗೂ ಧ್ವನಿ ಕೂಡ ಮನುಷ್ಯನ ಧ್ವನಿಯಂತಿದೆ ಎಂಬ ಮಾಹಿತಿ ದೊರಕಿದೆ.

ಈ ವಿಚಿತ್ರ ಮೇಕೆ ಮರಿ ನೋಡಲು ಅಲ್ಲಿ ಜನ ಸೇರುತ್ತಿದ್ದಾರೆ. ವರದಿಗಳ ಪ್ರಕಾರ, ನಬಾಬ್ ಖಾನ್ ಎಂಬುವವರಿಗೆ ಸೇರಿದ ಮೇಕೆಮರಿಯ ಮುಖ ಕನ್ನಡಕವನ್ನು ಧರಿಸಿರುವ ವಯಸ್ಸಾದ ವ್ಯಕ್ತಿಯಂತೆ ಕಾಣುತ್ತದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ವೈದ್ಯರ ಪ್ರಕಾರ ಸಾಮಾನ್ಯವಾಗಿ ಇಂತಹ ವಿಕಲಚೇತನ ಮರಿಗಳ ಆಯಸ್ಸು ಕಡಿಮೆ ಅವಧಿ ಎಂದು ಮಾಹಿತಿ ನೀಡಿದ್ದಾರೆ.

Leave A Reply

Your email address will not be published.