ಹಾವಿನ ಜೊತೆ ಸರಸ | ಕೈಯಲ್ಲಿ ಹಿಡಿದುಕೊಂಡ ಅನಕೊಂಡ ವ್ಯಕ್ತಿಯ ಮೈಯೆಲ್ಲಾ ಕಚ್ಚಿತು | ಮುಂದೇನಾಯ್ತು ನೋಡಿ!

ಇತ್ತೀಚಿನ ಕಾಲದಲ್ಲಿ ರೀಲ್ಸ್ ಅನ್ನೋ ಹುಚ್ಚು ಕೆಲವರಲ್ಲಿ ಮಿತಿಮೀರಿದೆ. ತಮ್ಮ ಅಸಂಬದ್ಧ ಪ್ರದರ್ಶನಗಳೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುವ ವ್ಯಾಮೋಹವು ತಾನು ಏನು ಮಾಡ ಹೊರಟಿರುವೆ ಅನ್ನುವ ಮೂಲವನ್ನು ಒಂದು ಕ್ಷಣ ಮರೆತು ಹೋಗುತ್ತಾರೆ. ಅದರಲ್ಲೂ ಮೂಕ ಪ್ರಾಣಿ ಪಕ್ಷಿಗಳ ಜೊತೆ ಸಹ ರೀಲ್ಸ್ ಮಾಡಿ ಎಡವಟ್ಟು ಮಾಡಿಕೊಂಡಿರುವ ನಿದರ್ಶನಗಳು ನೋಡಿರುತ್ತೇವೆ ಕೇಳಿರುತ್ತೇವೆ. ಇನ್ನು ಹಾವುಗಳ ಬಗ್ಗೆ ನಮಗೆ ಗೊತ್ತಿರಬಹುದು. ಹಾವುಗಳಿಗೆ ಕೋಪಗೊಂಡರೆ ಬುಸು ಗುಡುವ ಜೊತೆಗೆ ವಿಷ ಕಾರಿ ಕಚ್ಚುವುದು ಅದರ ಲಕ್ಷಣವಾಗಿದೆ ಹಾಗಿರುವಾಗ ಇಲ್ಲೊಬ್ಬನ ಪಜೀತಿ ನೋಡಿ.

 

ವ್ಯಕ್ತಿಯೊಬ್ಬ ಬೃಹದಾಕಾರದ ಆನಕೊಂಡವನ್ನು ಹಿಡಿದುಕೊಂಡು ಅದರಲ್ಲಿ ಹಲವು ಬಾರಿ ಕಚ್ಚಿಸಿಕೊಂಡಿರುವ ವಿಡಿಯೋ ವೈರಲ್ ಆಗಿದೆ.

ನಿಕ್‌ಥಾಂಗ್ಲರ್’ ಎಂಬವನು “ನಾಟಿ ಅನಕೊಂಡಾದ ಜತೆ ನಾನು” ಎಂದು ನಿಕ್ ಶೀರ್ಷಿಕೆಯಲ್ಲಿ ಆತ ಹೇಳಿಕೊಂಡಿದ್ದಾನೆ. ಈ ವಿಡಿಯೊದಲ್ಲಿ ನಿಕ್ ತನ್ನ ಎರಡೂ ತೋಳುಗಳಲ್ಲಿ ಉದ್ರೇಕಗೊಂಡ ಆನಕೊಂಡವನ್ನು ಎತ್ತುಕೊಂಡಿರುವುದನ್ನು ಕಾಣಬಹುದು. ಇದ್ದಕ್ಕಿದ್ದಂತೆ, ಹಾವು ಈತನ ಹೊಟ್ಟೆ ಮತ್ತು ತೋಳಿನ ಮೇಲೆ ಕಚ್ಚಲು ಪ್ರಾರಂಭಿಸುತ್ತದೆ. ದೊಡ್ಡ ಹಾವು ಕಚ್ಚಿದಾಗ ಅವನು ಕೂಗುತ್ತಾನೆ, ಆದರೆ ಅದು ವಿಷಕಾರಿಯಲ್ಲ ಎಂದು ವೀಕ್ಷಕರಿಗೆ ಹೇಳುತ್ತಾನೆ.

ಆನಕೊಂಡ ಹಾವುಗಳು ಜನರನ್ನು ಸುತ್ತಿಕೊಂಡು ಉಸಿರುಗಟ್ಟಿಸಿ ಸಾಯಿಸುತ್ತವೆಯೇ ವಿನಾ ಅವುಗಳು ವಿಷಕಾರಿಯಲ್ಲ. ಬ್ರೆಜಿಲ್‌ನ ಅಮೆಜಾನ್ ನ ಕಾಡಿನಿಂದ ತಂದ ಆನಕೊಂಡಾವೊಂದನ್ನು ಹಿಡಿದುಕೊಂಡಿರುವ ವ್ಯಕ್ತಿ ಅದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾನೆ. ತನ್ನನ್ನು ಪ್ರಾಣಿ ಮತ್ತು ಸರೀಸೃಪ ವ್ಯಸನಿ ಎಂದು ಕರೆದುಕೊಳ್ಳುವ ‘ನಿಕ್‌ಥಾಂಗ್ಲರ್’ ಈ ಕ್ಲಿಪ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾನೆ.

ಈ ವೀಡಿಯೋ ರೀಲ್ ಇದಾಗಲೇ 44 ಮಿಲಿಯನ್ ವೀಕ್ಷಣೆಗಳನ್ನು ಮತ್ತು 4.61 ಲಕ್ಷ ಲೈಕ್ಸ್ ಗಳನ್ನು ಗಳಿಸಿದ್ದು ಹಲವು ಜನರು ಕಾಮೆಂಟ್ ಸಹ ಮಾಡಿರುತ್ತಾರೆ. ಇನ್ನೂ ಕೆಲವರು ಈ ವೀಡಿಯೋ ನೋಡಿ ಭಯಗೊಂಡಿದ್ದಾರೆ.

Leave A Reply

Your email address will not be published.