ಕಾಂತಾರ ‘ ವರಾಹ ರೂಪಂ’ ಹಾಡು ಡಿಲೀಟ್ !

ಈ ಕ್ಷಣದವರೆಗೂ ಕಾಂತಾರ ಉತ್ತಮ ಪ್ರದರ್ಶನ ನೀಡುತ್ತಿದ್ದು, ಅಬ್ಬರಿಸಿಕೊಂಡು ಮುನ್ನೆಡೆಯುತ್ತಾ ಹೋಗುತ್ತಿದೆ. ಎಲ್ಲಾ ಚಿತ್ರರಂಗದವರು ನಮ್ಮತ್ತ ನೋಡುವಂತೆ ಮಾಡಿದ ಕೀರ್ತಿ ರಿಷಬ್ ಶೆಟ್ಟಿ ಹಾಗೂ ಟೀಂ ಗೆ ಸಲ್ಲುತ್ತೆ. ಕನ್ನಡ ಮಾತ್ರವಲ್ಲದೇ ತೆಲುಗು ಹಾಗೂ ಹಿಂದಿ ಭಾಷೆಯ ಸಿನಿ ಪ್ರೇಕ್ಷಕರಿಂದಲೂ ಮೆಚ್ಚುಗೆ ಗಳಿಸಿರುವ ಕಾಂತಾರ ಚಿತ್ರ ಪುಷ್ಪ ಹಾಗೂ ಕೆಜಿಎಫ್ ಚಾಪ್ಟರ್ 1 ಚಿತ್ರಗಳ ಕಲೆಕ್ಷನ್ ದಾಖಲೆಯನ್ನು ಹಿಂದಿಕ್ಕಿ ದಾಪುಗಾಲಿಡುತ್ತಾ ಸಾಗುತ್ತಲೇ ಇದೆ.

ಇತ್ತೀಚೆಗಷ್ಟೆ ವರಾಹ ರೂಪಂ ಹಾಡು ಸ್ವಲ್ಪ ವಿವಾದ ಸೃಷ್ಟಿಸಿ, ಕೋರ್ಟ್ ಮೆಟ್ಟಿಲೇರಿತ್ತು. ಕಾಂತಾರ ಚಿತ್ರಕ್ಕೆ ತೈಕ್ಕುಡಂ ಬ್ರಿಡ್ಜ್ ಎಂಬ ಬ್ಯಾಂಡ್ ಕಂಪನಿ ಈ ಹಾಡು ನಮ್ಮದು ಹಾಗಾಗಿ ನಮ್ಮ ಹಾಡನ್ನು ಕಾಂತಾರ ಚಿತ್ರದಲ್ಲಿ ಬಳಸಲಾಗಿದೆ ಎಂದು ಕೇಸನ್ನು ದಾಖಲು ಮಾಡಿತ್ತು. ಹಾಗಾಗಿ ಕೇರಳದ ಸ್ಥಳೀಯ ನ್ಯಾಯಾಲಯ ಕಾಂತಾರ ಚಿತ್ರದಲ್ಲಿ ವರಾಹ ರೂಪಂ ಹಾಡನ್ನು ಪ್ರಸಾರ ಮಾಡುವಂತಿಲ್ಲ ಎಂಬ ನೋಟಿಸ್ ನೀಡಿತ್ತು.

ಆದರೂ ಹೊಂಬಾಳೆ ಫಿಲ್ಟ್ ಈ ವರಾಹ ರೂಪಂ ಹಾಡನ್ನು ತೆಗೆದು ಹಾಕಿರಲಿಲ್ಲ, ಆದರೆ ಇದೀಗ ನಿನ್ನೆಯಿಂದ ( ನವೆಂಬರ್ 11) ವರಾಹ ರೂಪಂ ಹಾಡು ಹೊಂಬಾಳೆ ಫಿಲ್ಮ್ಸ್ ಯುಟ್ಯೂಬ್ ಚಾನೆಲ್‌ನಿಂದ ಕಾಣೆಯಾಗಿದೆ. ಇನ್ನು ಮಾತೃಭೂಮಿ ಕಪ್ಪ ಟಿವಿ ಚಾನೆಲ್ ಮಾಡಿದ ಕಾಪಿ ರೈಟ್ ಡ್ರೈವ್ ಕಾರಣದಿಂದ ಹಾಡನ್ನು ತೆಗೆದು ಹಾಕಲಾಗಿದೆ ಎಂದು ಯುಟ್ಯೂಬ್ ತೋರಿಸುತ್ತಿದೆ.

ಅಂದ ಹಾಗೆ ವರಾಹ ರೂಪಂ ಹಾಡನ್ನು ಯುಟ್ಯೂಬ್‌ನಿಂದ ಮಾತ್ರ ಡಿಲಿಟ್ ಮಾಡಲಾಗಿದ್ದು, ಉಳಿದ ಆಡಿಯೊ ಅಪ್ಲಿಕೇಶನ್‌ಗಳಾದ ಸ್ಪಾಟಿಫೈ, ಅಮೆಜಾನ್ ಮ್ಯೂಸಿಕ್, ವಿಂಕ್ ಮ್ಯೂಸಿಕ್, ಜಿಯೊ ಸಾವ್ನ್ ನಲ್ಲಿ ವರಾಹ ರೂಪಂ ಹಾಡು ಸದ್ಯದ ಮಟ್ಟಿಗೆ ಲಭ್ಯವಿದೆ. ಹಾಗೆನೇ ಚಿತ್ರಮಂದಿರಗಳಲ್ಲಿಯೂ ಚಿತ್ರದಲ್ಲಿ ಹಾಡನ್ನು ಪ್ರಸಾರ ಮಾಡಲಾಗುತ್ತಿದೆ. ಈ ಮೂಲಕ ಯುಟ್ಯೂಬ್‌ನಲ್ಲಿ ಹುಡುಕಿ ಹಾಡು ಸಿಗದಿದ್ದವರು ಈ ಅಪ್ಲಿಕೇಶನ್‌ಗಳಲ್ಲಿ ಹಾಡನ್ನು ಕೇಳಬಹುದು.

Leave A Reply

Your email address will not be published.