Realme 10 5G: ಅತ್ಯಂತ ಕಡಿಮೆ ಬೆಲೆಗೆ ರಿಯಲ್ ಮಿಯಿಂದ ಹೊಸ 5G ಫೋನ್ ಅನಾವರಣ! ನಿಮಗೆ ಗೊತ್ತೇ ಇದರ ಫೀಚರ್ಸ್?

ಹೆಸರಾಂತ ರಿಯಲ್ ಮಿ ಕಂಪನಿಯ ಸ್ಮಾರ್ಟ್​ಫೋನ್​ಗಳು ಬಿಡುಗಡೆಯಾಗುತ್ತಿರುವ ಸಂಖ್ಯೆಯು ಈಗ ಕಡಿಮೆ ಆಗಿದೆ. ಹಾಗೇ ಇದೀಗ ಹೊಸದಾಗಿ Realme 10 5G ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಮಾಡಿದೆ. ಇನ್ನೂ ಈ ಸ್ಮಾರ್ಟ್‌ಫೋನ್‌ ಇತ್ತೀಚಿಗಷ್ಟೆ ಬಿಡುಗಡೆಯಾದ ರಿಯಲ್‌ಮಿ 10 4G ಸ್ಮಾರ್ಟ್‌ಫೋನ್​ನ ಅಪ್ ಗ್ರೇಡ್ ವರ್ಷನ್ ಆಗಿದೆ. ಹಾಗಿದ್ದಾಗ ಈ Realme 10 5G ಸ್ಮಾರ್ಟ್‌ಫೋನ್‌ ನ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Realme 10 5G ಸ್ಮಾರ್ಟ್‌ಫೋನ್‌ ಬಲಿಷ್ಠವಾದ ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದೆ. ಹಾಗೇ ಉತ್ತಮ ಗುಣಮಟ್ಟದ ಕ್ಯಾಮೆರಾ ಮತ್ತು ಬ್ಯಾಟರಿಯನ್ನು ಒಳಗೊಂಡಿದೆ. ಇದೀಗ ಚೀನಾದಲ್ಲಿ ಬಿಡುಗಡೆಯಾಗಿರುವ ಈ ಸ್ಮಾರ್ಟ್‌ಫೋನ್‌ ಮುಂದಿನ ದಿನಗಳಲ್ಲಿ ಭಾರತಕ್ಕೂ ಕಾಲಿಡಲಿದೆ ಎಂದು ತಿಳಿದುಬಂದಿದೆ.


Ad Widget

ರಿಯಲ್‌ ಮಿ 10 5G ಸ್ಮಾರ್ಟ್‌ಫೋನ್‌ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯವಿದೆ. ಈ ಫೋನ್ ನ 8GB RAM ಮತ್ತು 128GB ಸ್ಟೋರೇಜ್ ವೇರಿಯಂಟ್‌ ದರವು ಚೀನಾದಲ್ಲಿ CNY 1,299, ಅಂದ್ರೆ ಭಾರತದಲ್ಲಿ ಇದರ ಬೆಲೆ ಸರಿ ಸುಮಾರು 15,000 ರೂ. ಎಂದು ಹೇಳಬಹುದು. ಹಾಗೇ 8GB RAM ಮತ್ತು 256GB ಸ್ಟೋರೇಜ್ ವೇರಿಯಂಟ್‌ ಬೆಲೆ ಚೀನಾದಲ್ಲಿ CNY 1,599, ಮತ್ತು ಭಾರತದಲ್ಲಿ ಅಂದಾಜು 18,000ರೂ. ಇದೆ.

Ad Widget

Ad Widget

Ad Widget

ಇನ್ನು ಈ ರಿಯಲ್‌ ಮಿ 10 5G ಸ್ಮಾರ್ಟ್‌ಫೋನ್​ನ ಫೀಚರ್ಸ್ ಬಗ್ಗೆ ನೋಡೋಣ. ಈ ಸ್ಮಾರ್ಟ್‌ಫೋನ್ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.4 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಸೂಪರ್ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಹಾಗೂ 90Hz ರಿಫ್ರೆಶ್ ರೇಟ್‌, 360Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಬೆಂಬಲಿಸಲಿದೆ. ಇದು ಮೀಡಿಯಟೆಕ್ ಡೈಮೆನ್ಸಿಟಿ 700 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದಿದ್ದು, ಜೊತೆಗೆ ಆಂಡ್ರಾಯ್ಡ್‌ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ.

ಹಾಗೇ ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಮೊದಲನೆಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹಾಗೂ ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ. ಮತ್ತು ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಇದೆ. ಈ ಕ್ಯಾಮೆರಾ ಫೀಚರ್​ಗಳಲ್ಲಿ ಸ್ಟ್ರೀಟ್ ಫೋಟೋಗ್ರಫಿ 2.0, ಡಿಐಎಸ್ ಸ್ನ್ಯಾಪ್‌ಶಾಟ್, ಇನ್‌ಸ್ಟಂಟ್ ಫೋಕಸ್ ಮತ್ತು ಕ್ವಿಕ್ ಜೂಮ್ ಆಯ್ಕೆಯನ್ನು ನೀಡಲಾಗಿದೆ.

ಇದು ದೀರ್ಘಕಾಲ ಉತ್ತಮವಾಗಿರುವ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿ 33W ವರೆಗೆ ವೇಗದ ಚಾರ್ಜಿಂಗ್ ನ್ನು ಬೆಂಬಲಿಸುತ್ತದೆ. ಕಂಪನಿಯ ಹೇಳಿಕೆಯ ಪ್ರಕಾರ, ಈ ರಿಯಲ್‌ ಮಿ 10 5G ಸ್ಮಾರ್ಟ್‌ಫೋನ್‌ 28 ನಿಮಿಷಗಳಲ್ಲಿ 0 ರಿಂದ 50%ವರೆಗೆ ಚಾರ್ಜ್ ಆಗುತ್ತದೆಯಂತೆ. ಹಾಗೂ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ, ಹಾಟ್‌ಸ್ಪಾಟ್‌, ಬ್ಲೂಟೂತ್‌, ಯುಎಸ್‌ಬಿ ಸಿ ಪೋರ್ಟ್‌ ಒಳಗೊಂಡಂತೆ ಇತ್ತೀಚಿನ ಎಲ್ಲಾ ಆಯ್ಕೆಗಳನ್ನು ಅಳವಡಿಸಲಾಗಿದೆ.

error: Content is protected !!
Scroll to Top
%d bloggers like this: