ಪತ್ನಿ ‘ಬಾರೋ’ ಅಂದಿದ್ದಕ್ಕೆ ಕೋರ್ಟ್ ಮೆಟ್ಟಿಲೇರಿದ ಪತಿ | ನಂತರ ಏನಾಯ್ತು?
ಮದುವೆ ಅಂದರೆ ಎರಡು ಕುಟುಂಬಗಳು ಸಂಬಂಧ ಬೆಸೆಯುವುದು ಮಾತ್ರವಲ್ಲದೆ. ಗಂಡು ಹೆಣ್ಣು ಇಬ್ಬರೂ ಯಾವುದೇ ಮುಚ್ಚು ಮರೆ ಇಲ್ಲದೆ ಜೀವನ ನಡೆಸಿಕೊಂಡು ಹೋಗಬೇಕು. ಅಲ್ಲದೆ ಸಾವಿರಾರು ಕನಸು ಹೊತ್ತು ಹೆಣ್ಣು ತನ್ನ ಹೆತ್ತವರನ್ನು ಬಿಟ್ಟು ಗಂಡನ ಜೊತೆಗೆ ಹೋಗುತ್ತಾಳೆ. ಆದರೆ ಜಗಳ ಎಂದು ಬಂದಾಗ ಯಾರ ತಪ್ಪು ಯಾರದು ಸರಿ ಎನ್ನುವುದು ಸಹ ಮುಖ್ಯ ಆಗುತ್ತದೆ.
ಆದರೆ ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಇದೆ. ಆದರೆ ಧಾರವಾಡದ ನ್ಯಾಯಾಲಯದಲ್ಲಿ ಇಂದು ವಿಚ್ಛೇದನಕ್ಕೆ ಬಂದಿದ್ದ ಕೇಸ್ ನೋಡಿದರೆನೇ ವಿಚಿತ್ರ ಎನಿಸುತ್ತದೆ. ಏಕೆಂದರೆ ಪತ್ನಿ ತನ್ನ ಪತಿಗೆ ಬಾರೋ ಎಂದಿದ್ದಕ್ಕೆ ಪತಿರಾಯ ನ್ಯಾಯಾಲಯದ ಮೇಟ್ಟಿಲು ಏರಿದರೆ, ಮತ್ತೊಂದು ಪ್ರಕರಣದಲ್ಲಿ ಪತ್ನಿ ಪತಿಯ ಪೆನ್ ಡ್ರೈವ್ ತೆಗೆದುಕೊಂಡಿದ್ದಕ್ಕೆ ವಿಚ್ಛೇದನಕ್ಕೆ ಅರ್ಜಿ ಬಂದಿತ್ತು. ಇದೀಗ ಈ ಪ್ರಕರಣಗಳನ್ನು ನ್ಯಾಯಾಲಯ ಲೋಕ್ ಅದಾಲತ್‍ನಲ್ಲಿ ತೆಗೆದುಕೊಂಡು ಇತ್ಯರ್ಥ ಮಾಡಿದೆ.
ಧಾರವಾಡ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್‍ನಲ್ಲಿ ಇಂದು ವಿಚ್ಛೇದನಕ್ಕೆ ಬಂದಿದ್ದ ಪ್ರಕರಣಗಳನ್ನು ತೆಗೆದುಕೊಂಡಿದ್ದರು. ಈ ವೇಳೆ ಕೆಲ ಗಂಡ ಹೆಂಡತಿಯರು ವಿಚ್ಛೇದನ ಬೇಡ ಎಂದು ಒಪ್ಪಿಕೊಂಡರೆ, ಕೆಲವರು ನ್ಯಾಯಾಲಯದ ಮುಂದೆ ತಮ್ಮ ಒಪ್ಪಿಗೆ ಸೂಚಿಸಲೇ ಇಲ್ಲ. ಅದರಲ್ಲೂ ಒಂದು ಜೋಡಿಯಂತೂ ಪೆನ್ ಡ್ರೈವ್ ವಿಚಾರಕ್ಕೆ ವಿಚ್ಛೇದನ ಹಾಕಿಕೊಂಡಿದ್ದರು. ಪತ್ನಿ ತನ್ನ ಪತಿಯ ಪೆನ್ ಡ್ರೈವ್ ತೆಗೆದುಕೊಂಡಿದ್ದಾಳೆ ಅವಳು ಅದನ್ನು ಕೊಟ್ಟರೆ ಮಾತ್ರ ನಾನು ರಾಜಿಯಾಗುತ್ತೇನೆ ಅಂತ ನಿಂತಿದ್ದ.
ಇನ್ನೊಂದು ಮುಖ್ಯ ಜೋಡಿ ಪ್ರಕರಣದಲ್ಲಿ ಪತ್ನಿ ತನ್ನ ಪತಿಗೆ ಬಾರೋ ಎಂದು ಕರೆದ ಕಾರಣ . ಅದಕ್ಕೆ ಇಬ್ಬರೂ ವಿಚ್ಛೇದನಕ್ಕೆ ಬಂದಿದ್ದರು. ನ್ಯಾಯಾಧೀಶರು ಇವತ್ತು ಇಂತಹ 37 ಕೇಸ್‍ಗಳನ್ನು ಲೋಕ ಅದಾಲತ್‍ನಲ್ಲಿ ತೆಗೆದುಕೊಂಡು 17 ಕೇಸ್ ಇತ್ಯರ್ಥ ಮಾಡಿರುತ್ತದೆ.
ಕೋರ್ಟ್ ಪ್ರಕಾರ ಇಬ್ಬರು ಸ್ವಲ್ಪ ದಿನಗಳಲ್ಲಿ ಒಂದಾಗಿ ಬಾಳಿದರೆ ಮುಂದೆ ನ್ಯಾಯಾಲಯ ಇವರ ಮದ್ಯದಲ್ಲಿ ಪ್ರದೇಶ ಮಾಡುವುದಿಲ್ಲ ಆದರೆ ಹೊಂದಾಣಿಕೆ ಆಗದೇ ಇದ್ದರೆ ಮಾತ್ರ ನ್ಯಾಯಾಲಯ ಮತ್ತೊಂದು ಚಾನ್ಸ್ ಕೊಡಲಿದೆ ಎಂದು ಆದೇಶಿಸಿದೆ .
ಸದ್ಯ ಇನ್ನು ಕೆಲ ಪತಿ ಹಾಗೂ ಪತ್ನಿ ನ್ಯಾಯಾಲಯದ ಮಾತು ಕೇಳದೇ ಇರುವುದರಿಂದ ಅವರಿಗೆ ಮತ್ತೇ ಮುಂದಿನ ದಿನಾಂಕಕ್ಕೆ ಹಾಜರಾಗಲು ಹೇಳಲಾಗಿದೆ. ಮತ್ತೆ ಕೆಲವರಿಗೆ ಸ್ವಲ್ಪ ದಿನ ಒಂದೇ ಕಡೆ ಇರುವಂತೆ ಸೂಚನೆ ಕೊಟ್ಟು ಕಳುಹಿಸಲಾಗಿದೆ.
ಸದ್ಯ ಒಂದಾದ ಗಂಡ ಹೆಂಡತಿ ಕೂಡಾ ನ್ಯಾಯಾಲಯದ ಈ ಅದಾಲತ್‍ದಿಂದ ಒಂದಾಗಿ ಸಂತಸ ವ್ಯಕ್ತಪಡಿಸಿದ್ದಾರೆ.ಧಾರವಾಡ ಜಿಲ್ಲಾ ನ್ಯಾಯಾಲಯದಲ್ಲಿ ಇವತ್ತು ಗಂಡ ಹೆಂಡತಿಯರದೇ ಹವಾ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.