Geetha Bharthi Bhat : ಬರೋಬ್ಬರಿ 30 ಕೆಜಿ ತೂಕ ಇಳಿಸಿಕೊಂಡ ನಟಿ ಗೀತಾ ಈಗ ಹೇಗೆ ಕಾಣುತ್ತಾರೆ ಗೊತ್ತೇ?

ಕಿರುತೆರೆ ನಟಿ, ಬಿಗ್ ಬಾಸ್ ಖ್ಯಾತಿಯ ಗೀತಾ ತಮ್ಮ ದೇಹದ ತೂಕವನ್ನು ಇಳಿಸಲು ವರ್ಕೌಟ್ ಮಾಡುತ್ತಿದ್ದಾರೆ. ಇದೀಗ ನಟಿಯ ಶ್ರಮದ ಫಲವಾಗಿ ಅವರು 30 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ. ಇದಕ್ಕೆ ಅವರ ಇತ್ತೀಚಿನ ಫೋಟೋಗಳು ಸಾಕ್ಷಿಯಾಗಿವೆ.

 

ಕಿರುತೆರೆ ನಟಿ, ಬ್ರಹ್ಮಗಂಟು ನಾಯಕಿ, ಗೀತಾ ಭಾರತಿ ಭಟ್ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಮತ್ತಷ್ಟು ಫೇಮಸ್ ಆಗಿದ್ದರು. ಆದರೆ ಬಹಳಷ್ಟು ತೂಕವನ್ನೂ ಹೆಚ್ಚಿಸಿಕೊಂಡಿದ್ದರು. ಹಾಗಾಗಿ ಬಿಗ್ ಬಾಸ್​ನಿಂದ ಹೊರಬಂದ ನಂತರ ನಟಿ ನಿರಂತರವಾಗಿ ವರ್ಕೌಟ್​​ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ತಮ್ಮ ನಿರಂತರವಾದ ವರ್ಕೌಟ್ ನ ಫಲವಾಗಿ ಇದೀಗ ನಟಿ ತೂಕ ಇಳಿಸಿಕೊಂಡಿದ್ದಾರೆ. ಸರಿ ಸುಮಾರು 30 ಕೆ.ಜಿ ತೂಕ ಇಳಿಸಿಕೊಂಡಿದ್ದೇನೆ ಎಂದು ನಟಿ ಇತ್ತೀಚೆಗೆ ರಿಯಾಲಿಟಿ ಶೋ ನಲ್ಲಿ ಹೇಳಿದ್ದಾರೆ.

ಸಿಹಿಕಹಿ ಚಂದ್ರು ನಡೆಸಿಕೊಡುವಂತಹ ಬೊಂಬಾಟ್ ಭೋಜನ ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಟಿ ಗೀತಾ ಭಾಗವಹಿಸಿದ್ದಾರೆ. ಶೋ ನಲ್ಲಿ ಅವರ ಲುಕ್ ನೋಡಿ ಅಭಿಮಾನಿಗಳು ಅಚ್ಚರಿಪಟ್ಟಿದ್ದಾರೆ. ನಟಿ ತೂಕ ಇಳಿಸಿಕೊಂಡಿರುವುದು ಸ್ಪಷ್ಟವಾಗಿ ತಿಳಿಯುತ್ತಿತ್ತು. ನಟಿಯ ಈ ಲುಕ್ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

ಗೀತಾ ತಮ್ಮ ವರ್ಕೌಟ್ ಫೋಟೋಗಳು ಹಾಗೂ ವಿಡಿಯೋಗಳನ್ನು ನಿರಂತರವಾಗಿ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳುತ್ತಿದ್ದರು. ಕೊನೆಗೂ ನಟಿ 30 ಕೆ.ಜಿ ತೂಕ ಇಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ನಟಿಯ ಇತ್ತೀಚಿನ ಫೋಟೋಗಳಲ್ಲಿ ಅವರು ತೂಕ ಇಳಿಸಿಕೊಂಡು ಸಣ್ಣವಾಗಿರುವುದನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ. ಇಷ್ಟು ಮಾತ್ರವಲ್ಲ ಇನ್ನಷ್ಟು ತೂಕ ಇಳಿಸಿಕೊಳ್ಳಲಿದ್ದೇನೆ ಎಂದು ನಟಿ ಹೇಳಿದ್ದಾರೆ. ಇನ್ನೂ, ಇವರ ಈ ಫೋಟೋಗಳು ವೈರಲ್ ಆಗುತ್ತಿದೆ.

Leave A Reply

Your email address will not be published.