ಅಡಿಕೆ ಬೆಳೆಗೆ ಕಾಡುತ್ತಿರುವ ಸುಳಿ ತಿಗಣೆ | ನಿಯಂತ್ರಣ ಹೇಗೆ?
ಅಡಿಕೆ ಬೆಳೆಗಾರರಿಗೆ ತೊಂದರೆ ನೀಡುತ್ತಿರುವ ಸುಳಿ ತಿಗಣೆಯಿಂದ ಬೆಳೆಗಳಿಗೆ ಹಾನಿಯಾಗುತ್ತಿದೆ. ಹಾಗಾಗಿ, ರೈತರು ಪರಿಹಾರೋಪಯಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದಾರೆ.
ಈ ಸುಳಿ ತಿಗಣೆಯನ್ನು ನಿಯಂತ್ರಿಸುವ ಕ್ರಮ ಹೇಗೆ ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿದ್ದರೆ ಉತ್ತರ ಇಲ್ಲಿದೆ:ಸುಳಿ ಒಳಭಾಗದಲ್ಲಿ ಈ ಕೀಟವು ಸೇರಿಕೊಂಡು ರಸವನ್ನು ಹೀರಿಕೊಳ್ಳುತ್ತಾ ಇರುವುದರಿಂದ ಮೊದಲನೆ ಹಂತದಲ್ಲಿ ಎಲೆಯ ಮೇಲೆ ಚುಕ್ಕಿಗಳು ಕಾಣಿಸಲು ಆರಂಭವಾಗುತ್ತದೆ. ಇದರ ನಂತರದ ಹಂತದಲ್ಲಿ ಎಲೆಗಳು ಮುದುರಿ ಹೋಗುತ್ತವೆ ಈ ಬಳಿಕ ಸುಳಿ ಕೊಳೆರೋಗ ಕಾಣುತ್ತದೆ. ಈ ರೋಗವನ್ನು ನೋಡಿದಾಗ ಕಬ್ಬು ತಿಂದಾಗ ನಾವು ಹೇಗೆ ಜಗಿದು ಇರುತ್ತೇವೆಯೋ ಅದೇ ರೀತಿ ಗಿಡವು ಜಗಿದು ಹಾಕಿದಂತೆ ಕಾಣಿಸುತ್ತದೆ.
ಈ ಸುಳಿ ತಿಗಣೆಯನ್ನು ನೋಡಲು ಹಸಿರು ಮಿಶ್ರಿತ ಕಪ್ಪು ಅಥವಾ ಕೆಂಪು ಬಣ್ಣದಲ್ಲಿ ಇದ್ದು, ಈ ಕೀಟವನ್ನು ನೀವು ಸುಳಿಯ ಭಾಗದಲ್ಲಿ ನೋಡಬಹುದಾಗಿದೆ. ಅದರಿಂದ ನೀವು ಕೀಟನಾಶಕ ಸ್ಪ್ರೇ ಮಾಡುವಾಗ ಸುಳಿಯ ಭಾಗಕ್ಕೆ ಕೀಟನಾಶಕ ಹೋಗುವಂತೆ ಸ್ಪ್ರೇ ಮಾಡಬೇಕಾಗುತ್ತದೆ.
ಹತೋಟಿ ಕ್ರಮಗಳು
2ml quinalphos ಅಥವಾ 2ml Dicofol ಅಥವಾ 2ml clorophyriphos ಕೀಟನಾಶಕಗಳಲ್ಲಿ ಯಾವುದಾದರೂ ಒಂದು ಕೀಟನಾಶಕವನ್ನು ಪ್ರತಿ ಲೀಟರ್ ನೀರಿನಲ್ಲಿ 2ml ಕೀಟನಾಶಕವನ್ನು ಬೆರೆಸಿ ಕೀಟಬಾಧೆ ಕಂಡು ಗಿಡಗಳಿಗೆ ಸುಳಿ ಒಳಭಾಗದಲ್ಲಿ ಕೀಟನಾಶಕ ಹೋಗುವಂತೆ ಸ್ಪೇ ಮಾಡಬೇಕು. ಇಲ್ಲವೇ ಅದರ ಬದಲಿಗೆ, 10 ಗ್ರಾಮ್ ಫೊರೈಟ್ ಹರಳುಗಳನ್ನು ಒಂದು ಚಿಕ್ಕ ಪಾಕೇಟಿನಲ್ಲಿ ಹಾಕಿ ಅದಕ್ಕೆ ಸಣ್ಣ ರಂಧ್ರಗಳನ್ನು ಮಾಡಿ ಇಡಬೇಕು . ಹೀಗೆ ಮಾಡುವುದರಿಂದ ರೋಗ ತಡೆಗಟ್ಟಬಹುದು. ಇದರ ಜೊತೆಗೆ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಗಿಡಗಳಿಗೆ ಸುಳಿ ಕೊಳೆ ರೋಗ ಬಂದಿದ್ದರೆ, ಹತ್ತಿರದ ವಿಜ್ಞಾನಿಗಳನ್ನು ಸಂಪರ್ಕಿಸಿ ಸೂಕ್ತ ಹತೋಟಿ ಕ್ರಮಗಳನ್ನು ತೆಗೆದುಕೊಳ್ಳುವುದು ಉತ್ತಮ.
ಈ ರೋಗವು ಸಾಮಾನ್ಯವಾಗಿ ಐದು ವರ್ಷದ ಒಳಗಿನ ಗಿಡಗಳಿಗೆ ಕಾಣಿಸಿಕೊಳ್ಳುತ್ತದೆ ರೋಗಬಾಧೆ ಪ್ರಥಮ ಹಂತದಲ್ಲಿ ಸುಲಭವಾಗಿ ನಿಯಂತ್ರಿಸಬಹುದು. ಎರಡನೇ ಹಂತದಲ್ಲಿಯೆ ಸುಳಿ ಕೊಳೆ ರೋಗ ಕಂಡು ಬರುವುದರಿಂದ ರೈತರು ಜಾಗೃತವಾಗಿ ಸಮಸ್ಯೆಯನ್ನು ನಿಯಂತ್ರಿಸಬೇಕು.ನಿಮ್ಮ ತೋಟದಲ್ಲಿ ಏನಾದರೂ ಈ ಸಮಸ್ಯೆ ಉಂಟಾದರೆ, ಹತ್ತಿರದ ಕೃಷಿ ವಿಜ್ಞಾನಿಗಳನ್ನು ಸಂಪರ್ಕಿಸಿರಿ.
ಕೃಷಿ ವಿಜ್ಞಾನಿಗಳು ಎಲ್ಲಿರುತ್ತಾರೆ ಎಂಬ ಅನುಮಾನವಿದ್ದರೆ, ನಿಮ್ಮ ಹತ್ತಿರದ ಹೋಬಳಿಯಲ್ಲಿ ರೈತ ಸಂಪರ್ಕ ಕೇಂದ್ರ ಇರುತ್ತದೆ. ಇಲ್ಲವೇ, ತೋಟಗಾರಿಕೆ ಇಲಾಖೆ ಮತ್ತು ಕೃಷಿ ಇಲಾಖೆ ಅಥವಾ ನಿಮ್ಮ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಬಹುದು.
ನಿಮ್ಮ ಜಿಲ್ಲೆಯ ಕೃಷಿ ಜಂಟಿ ನಿರ್ದೇಶಕರ ಕಚೇರಿ , ತೋಟಗಾರಿಕೆ ಇಲಾಖೆ ನಿಮ್ಮ ಜಿಲ್ಲೆಯಲ್ಲಿ ಇರುವುದರಿಂದ ಸುಲಭವಾಗಿ ಮಾಹಿತಿ ಪಡೆಯಬಹುದು.ಕೃಷಿ ಸಹಾಯವಾಣಿ: 18001801551 ನಿಮಗೆ ಯಾವುದೇ ರೀತಿಯಾದಂತಹ ಕೃಷಿ ಸಮಸ್ಯೆಗಳಿದ್ದರೆ , ಈ ನಂಬರಿಗೆ ಕರೆ ಮಾಡಿ ಪರಿಹಾರ ಪಡೆಯಬಹುದು